ಮಗಳ ಸಾವಿನ ದುಃಖದಲ್ಲೂ ಅವಳ ಕಣ್ಣನ್ನು ದಾನ ಮಾಡಿ ಮಾನವತ್ವ ಮೆರೆದಿದ್ದಾರೆ ಆಕೆಯ ಪೋಷಕರು…!!

0
796

ಇನ್ನು ಬದುಕಿಬಾಳಬೇಕಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಅಷ್ಟಕ್ಕೂ ಆಕೆಯ ಸಾವಿಗೆ ಕಾರಣ್ ಏನೆಂದು ಗೊತ್ತಾ? ಇತ್ತ ಮಗಳ ಸಾವಿನಲ್ಲಿಯೂ ಮಾನವತ್ವ ಮೆರೆದ ಬೆಂಗಳೂರು ಇಂಜಿನಿಯರಿಂಗ್ ಓದುತ್ತಿದ್ದ ಹುಡುಗಿಯ ಪೋಷಕರು, ಆಕೆಯ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಈ ಹುಡುಗಿಯ ಹೆಸರು ಮೇಘನಾ. ಬೆಂಗಳೂರಿನ, ರಾಜರಾಜೇಶ್ವರಿ ನಗರದ, ಚನ್ನಸಂದ್ರದ ನಿವಾಸಿಗಳಾದ ಚಂದ್ರಶೇಖರ್ ಮತ್ತು ಲತಾ ದಂಪತಿಗಳ ಮಗಳು. ವಯಸು ಇನ್ನು 18 ಇಂಜಿನಿಯರಿಂಗ್ ಓದುತ್ತಿದ್ದಳು ಎಂದು ತಿಳಿದುಬಂದಿದೆ.

ಮೇಘನಾ ನಗರದ ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದಳು. ಮೇಘನಾ ಕ್ಲಾಸ್ ರೆಪ್ರೆಸೆಂಟೇಟಿವ್ ಎಲೆಕ್ಷನ್‍ನಲ್ಲಿ ಸೋತಿದ್ದಳು, ಅದೇ ವಿಷಯವನ್ನು ಇಟ್ಟುಕೊಂಡು ನೀನೊಬ್ಬ ಕೆಟ್ಟ ಹುಡುಗಿ “ಬ್ಯಾಡ್ ಗರ್ಲ್” ಎಂದೆಲ್ಲ ಬೇರೆ ವಿದ್ಯಾರ್ಥಿಗಳು ರೇಗಿಸುತ್ತಿದ್ದರಂತೆ, ಇದರಿಂದ ಬೇಸತ್ತ ಮೇಘನಾ ಚನ್ನಸಂದ್ರದ ಶಬರಿ ಅಪಾರ್ಟ್-ಮೆಂಟ್ ನಲ್ಲಿ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೇಘನಾ ತಂದೆ ಚಂದ್ರಶೇಖರ್ ಅಂಧರಾಗಿದ್ದು, ಅವರ ಪತ್ನಿ ಲತಾ ಅವರನ್ನು ಕೆಲಸಕ್ಕೆ ಬಿಡಲು ಹೋಗಿದ್ದರಂತೆ ಅದೇ ಸಮಯವನ್ನು ಬಳಸಿಕೊಂಡು ಮೇಘನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೇಘನಾ ಪೋಷಕರು, ಮೇಘನಾ ಕಣ್ಣನ್ನು ದಾನ ಮಾಡಿ, ಮಗಳ ಸಾವಿನ ದುಃಖದಲ್ಲೂ ಮಾನವತ್ವ ಮೆರೆದಿದ್ದಾರೆ.

ರ‍್ಯಾಗಿಂಗ್ ಮಾಡುವುದು ಕಾನೂನು ಬಾಹಿರ ಅದರಲ್ಲೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾತಿ ಪಡೆಯುವಾಗ ಈ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ತಿಳಿಸಿ ಅವರ ಸಹಿ ಪಡೆಯಲಾಗುತ್ತದೆ, ಹೀಗಿದ್ದೂ ಇಂತಹ ಘಟನೆ ನಡೆದಿರುವುದು ವಿಷಾದಕರ ಸಂಗತಿಯಾಗಿದೆ.

ಈ ಬಗ್ಗೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಇನ್ನು ಪೊಲೀಸರು ತಪ್ಪಿತಸ್ಥರ ವಿರುದ್ದ ಯಾವ ರೀತಿ ಕ್ರಮಕೈಗೊಳ್ಳಲಿದ್ದಾರೆ ಕಾದು ನೋಡಬೇಕು.