ಉತ್ತಮ ಆರೋಗ್ಯಕ್ಕೆ ಬೇಕೇಬೇಕು ಮೆಂತ್ಯ!!!

0
3036

ಔಷಧಿಯುಕ್ತ ದೊಡ್ಡಪತ್ರೆ ಎಲೆ (ಅಜವಾನೆಲೆ)ಪ್ರತಿಯೊಬ್ಬರ ಮನೆಯ ಹೂವಿನ ಕುಂಡದಲ್ಲಿ ಕಂಡುಬರುವ ದೊಡ್ಡ ಪತ್ರೆ ಎಲೆ ಔಷಧಿ ಗುಣವನ್ನು ಹೊಂದಿದೆ. ಇದನ್ನು ಅಜವಾನದೆಲೆ, ಕರ್ಪೂರವಲ್ಲಿ ಎಂದು ಕರೆಯುತ್ತಾರೆ. ದಪ್ಪ ಎಲೆ ಹೊಂದಿರುವ ಇದು ಹಸಿರು ಬಣ್ಣವನ್ನು ಹೊಂದಿದ್ದು ಅಜವಾನದ ಕಾಳಿನ ವಾಸನೆಯನ್ನು ಹೊಂದಿರುತ್ತದೆ. ಸವಿಯುವುದಕ್ಕೆ ತುಂಬಾ ಚೆನ್ನಾಗಿರುತ್ತದೆ. ಉಪಯೋಗ: ಮಕ್ಕಳಿಗೆ ಕೆಮ್ಮು, ಗಂಟಲುನೋವು, ಬಾಯಿಹುಣ್ಣು ಬಂದಾಗ ಈ ಎಲೆಯನ್ನು ಒಂದು ಚಿಟಕೆ ಉಪ್ಪಿನೊಂದಿಗೆ ತಿನಿಸಿದಾಗ ತಕ್ಷಣ ವಾಸಿಯಾಗುತ್ತದೆ. ಒಣ ಕೆಮ್ಮಿಗೆ, ಗ್ಯಾಸ್ಟಿಕ್ ತೊಂದರೆಗೆ, ಯುರ್ಟಸ್ ಮತ್ತು ಕರುಳು ಬೇನೆ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ. ವಾತಾ, ಕಫ, ಡಯರಿಯಾ ಕೂಡಾ ಹೋಗಲಾಡಿಸುತ್ತದೆ. ಇದರ ಎಲೆಗಳನ್ನು ತೊಳೆದು ಚೆನ್ನಾಗಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಮೈಯಲ್ಲಾ ಲೇಪಿಸಿಕೊಂಡರೆ ಪಿತ್ತದ ಗಂದೆಗಳು ಮಾಯವಾಗುತ್ತದೆ. ಜೇನು ತುಪ್ಪ ಅಥವಾ ವಿನಿಗರ್ ಜೊತೆಗೆ ಈ ಎಲೆಯನ್ನು ಸೇರಿಸಿ ಕುಡಿದಾಗ ಮೂತ್ರಪಿಂಡದಲ್ಲಿದ್ದ ಕಲ್ಲುಗಳು ಮೂತ್ರದ ಮುಖಾಂತರ ಹೊರಗೆ ಹೋಗುತ್ತವೆ. ಪೆರಾಲಿಸಸ್ ಆದಾಗ ಕೈಕಾಲು ನಡುಗಿದರೆ ಇದರ ಎಲೆಯ ಕಷಾಯದಿಂದ ಕಡಿಮೆಯಾಗುತ್ತದೆ. ಲೈಂಗಿಕ ಪ್ರಕ್ರಿಯೆಗೆ ಪ್ರಚೋದನೆ ನೀಡುವ ಎಲೆ ಇದಾಗಿದೆ. ಹೊಟ್ಟೆಯಲ್ಲಿಯ ಹುಳುವನ್ನು ಸಾಯುವುದಕ್ಕೆ ಸಹಾಯಕಾರಿಯಾಗಿದೆ. ಈ ಎಲೆಯನ್ನು ಕಾಯಿಲೆಯನ್ನು ವಾಸಿ ಮಾಡುವ ಒಳ್ಳೆಯ ವೈದ್ಯರಿಗೆ ಹೋಲಿಸಬಹುದು.ಇದರಲ್ಲಿರುವ ಪೌಷ್ಟಿಕಾಂಶಗಳು : ಈ ಎಲೆಯಲ್ಲಿ ಪ್ರೋಟಿನ್, ಪ್ಯಾಟ್, ಮಿನರಲ್ಸ್, ಪೈಬರ್, ಕಾಬೋಹೈಡ್ರೇಟ್, ಕ್ಯಾಲ್ಸಿಯಂ, ಪಾಸ್‍ಪರಸ್, ಐರನ್, ಕ್ಯಾರೋಟಿನ್, ತಿಯಾಮಿನ್, ರಿಬೊಪ್ಲೇವಿನ್, ಮತ್ತು ನಿಯಾಸಿನ್ ಎಂಬ ಪೌಷ್ಟಿಕಾಂಶಗಳಿವೆ. ಈ ದೊಡ್ಡ ಪತ್ರೆ ಎಲೆಯನ್ನು ಅಡಿಗೆಯಲ್ಲಿ ನಾನಾ ವಿಧವಾಗಿ ಬಳಸಬಹುದು.

1)ದೊಡ್ಡಪತ್ರೆ ತಂಬೂಳಿ: ಎಂಟರಿಂದ ಹತ್ತು ದೊಡ್ಡಪತ್ರೆ ಎಲೆ, ಹತ್ತರಿಂದ ಹನ್ನೆರಡು ಕಾಳು ಮೆಣಸು, ಜೀರಿಗೆ ಮೂರು ನಾಲ್ಕು ಟೀ ಚಮಚ, ಒಂದು ಬಟ್ಟಲು ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ 2 ಟೀ ಸ್ಪೂನ್ ತುಪ್ಪ, ಒಂದು ಚಮಚ ಜೀರಿಗೆ, 2 ತುಂಡು ಒಣ ಮೆಣಸಿನ ಕಾಯಿ. ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಒಣಗಿಸಿ ಸಣ್ಣದಾಗಿ ಹಚ್ಚಿಕೊಳ್ಳಬೇಕು, ಹಚ್ಚಿದ ಎಲೆಗಳನ್ನು ಎರಡು ಚಮಚ ಎಣ್ಣೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ಮೆಣಸು, ಜೀರಿಗೆ ಬೆರೆಸಿ, ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಬೇಕು, ರುಬ್ಬಿದ ಮಿಶ್ರಣವನ್ನು ಮೊಸರಿಗೆ ಬೆರೆಸಿ ತುಪ್ಪದ ಒಗ್ಗರಣೆ ನೀರಿಗೆ ಒಣಮೆಣಸಿನ ಕಾಯಿಯ ಜೊತೆಗೆ ಬೆರೆಸಿದಾಗ ತಂಬೂಳಿ ಸವಿಯಲು ಸಿದ್ಧ.

2)ದೊಡ್ಡಪತ್ರೆ ಚಟ್ನಿ: ಎಂಟರಿಂದ ಹತ್ತು ಎಲೆ ದೊಡ್ಡಪತ್ರೆ, ಹಸಿಮೆಣಸು 5 ರಿಂದ 6 ಕಾಯಿತುರಿ ಒಂದು ಬಟ್ಟಲು, ರುಚಿಗೆ ತಕ್ಕಷ್ಟು ಉಪ್ಪು, ಎರಡು ಎಲೆ ಹುಣಸೇಹಣ್ಣು. ದೊಡ್ಡಪತ್ರೆ ಎಲೆಗಳನ್ನು ತೊಳೆದು ಎಣ್ಣೆಯಲ್ಲಿ ತಾಳಿಸಿ ಹಸಿಮೆಣಸು ಕಾಯಿತುರಿ ಉಪ್ಪು, ಹುಣಸೇ ಹಣ್ಣಿನೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿದಾಗ ಚಪಾತಿ, ರೊಟ್ಟಿಯ ಜೊತೆ ಸವಿಯಲು ಚೆನ್ನಾಗಿರುತ್ತದೆ.

3) ದೊಡ್ಡಪತ್ರೆ ತೊಗರಿಬೇಳೆ ಸಾಂಬರ್ : ತೊಗರಿಬೇಳೆ ಒಂದು ಬಟ್ಟಲು, ದೊಡ್ಡಪತ್ರೆ ಎಲೆ 10 ರಿಂದ 15, ಹುಣಸೇಹಣ್ಣು 4 ರಿಂದ 6 ಎಲೆ, ಸಾಂಬಾರು ಪುಡಿ 3 ಚಮಚ, ಚಿಕ್ಕ ಗಾತ್ರ ಬೆಲ್ಲ. ತೊಗರಿಬೇಳೆಯ ಜೊತೆಗೆ ದೊಡ್ಡಪತ್ರೆ ಎಲೆಗಳನ್ನು ಬೇಯಿಸಿ, ಒಗ್ಗರಣೆಯಲ್ಲಿ ಮಿಶ್ರಣ ಮಾಡಿ ಹುಣಸೇಹಣ್ಣಿನ ಹುಳಿ, ಸಾಂಬಾರು ಪುಡಿ ರುಚಿಗೆ ತಕ್ಕಷ್ಟು ಉಪ್ಪು, ತುಂಡು ಬೆಲ್ಲವನ್ನುಸ ಬೆರೆಸಿದಾಗ ಅನ್ನದ ಜೊತೆ ಸವಿಯಲು ದೊಡ್ಡಪತ್ರೆ ಸಾಂಬಾರು ತಯಾರಾಗುತ್ತದೆ.