ಮನೇಲಿ ಹಾಲು ಇರ್ಬೇಕಾದ್ರೆ ಬೇರೆ ಸೌಂದರ್ಯ ವರ್ಧಕಗಳು ಯಾಕ್ರೀ ಬೇಕು?

0
1873

ಪ್ರತಿನಿತ್ಯ ಉಪಯೋಗಿಸುವ ಆಹಾರದಲ್ಲಿ ಹಾಲು ಬಹಳ ಮುಖ್ಯವಾದ ದ್ರವರೂಪದ ಆಹಾರ. ಹಾಲು ಪೌಷ್ಟಿಕವಾದದಷ್ಟೇ ಅಲ್ಲ ಸೌಂದರ್ಯ ವರ್ಧಕಃವೂ ಸಹ..

೧) ಮೊಡವೆಗಳ ಮತ್ತು ಕಪ್ಪು ಕಲೆಗಳ  ನಿವಾರಣೆಗೆ:

ಎರಡು ಬಾದಾಮಿ ಬೀಜಗಳನ್ನು  ಹಾಲಿನಲ್ಲಿ ಅರೆದು ಅದಕ್ಕೆ ಬ್ರೆಡ್ಡಿನ ತುಣಕುಗಳನ್ನು ಬೆರೆಸಿ ಮುಖವನ್ನುಪ್ರತಿದಿನ ಈ ಮಿಶ್ರಣದಿಂದ ೧೫ ನಿಮಿಷಗಳ ಕಾಲ  ಉಜ್ಜಿದ್ದಲ್ಲಿ ಒಂದು ವಾರದೊಳಗೆ ಫಲಿತಾಂಶ ದೊರೆಯುವುದು.

೨) ಚರ್ಮ ಕಾಂತಿಯುಕ್ತವಾಗಲು:

ರಾತ್ರಿಯ ವೇಳೆ ಹಾಲನ್ನು ಕುದಿಸಿ ಆ ಹಾಲಿಗೆ ಒಂದು ನಿಂಬೆಹಣ್ಣು ಕತ್ತರಿಸಿ ರಸ ಹಿಂಡಿ ೧೫ ನಿಮಿಷ ಆರಲು ಬಿಡಿ. ನಂತರ ಹಾಲನ್ನು ಮುಖ,ಕೈ ಕಾಲುಗಳಿಗೆ ಹಚ್ಚಿ ತೇವ ಆರಿದ ನಂತರ ಬಿಸಿನೀರಿನಿಂದ ತೊಳೆದಲ್ಲಿ ಮುಖ ಕಾಂತಿಯುಕ್ತವಾಗುತ್ತದೆ.

೩)ಚರ್ಮ ಒಡೆಯುವುದನ್ನು ತಡೆಗಟ್ಟಲು:

ಸ್ನಾನದ ನೀರಿಗೆ ಸ್ವಲ್ಪ ಹಾಲು ಬೆರೆಸಿ ಸ್ನಾನ ಮಾಡುವುದರಿಂದ ಚರ್ಮ ಒಡೆಯುವುದು ಕಡಿಮೆಯಾಗುತ್ತದೆ.
ಹಾಲಿನ ಕೆನೆಯಲ್ಲಿ ಮಾಲೀಶು ಮಾಡಿದ್ದಲ್ಲಿ ಚರ್ಮ ಒಡೆಯುವುದನ್ನು ತಡೆಗಟ್ಟಬಹುದು.
ಚಳಿಯಿಂದ ಒಡೆದಿರುವ ತುಟಿ,ಅಂಗೈ-ಅಂಗಾಲುಗಳಿಗೆ ಅರಿಶಿನದ ಗಂಧವನ್ನು ಹಾಲಿನ ಕೆನೆಯಲ್ಲಿ ಮಸೆದು ಹಚ್ಚುವುದರಿಂದ ಗುಣವಾಗುತ್ತದೆ.

೪)ಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟಲು:

ನಾಲ್ಕು ಟೀ ಚಮಚ ಹಾಲಿಗೆ ಒಂದು ಚಿಟಿಕೆ ಅಡುಗೆ ಉಪ್ಪು ಸೇರಿಸಿ ಮುಖಕ್ಕೆ ಆ ಮಿಶ್ರಣವನ್ನು ಹಚ್ಚಿದ್ದಲ್ಲಿ ಸುಕ್ಕುಗಟ್ಟುವುದನ್ನು ನಿವಾರಿಸಬಹುದು.