ಮತ್ತೆ ಜ್ಯೋತಿಷ್ಯ ನುಡಿದು ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ; ಮತ್ತೆ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಘೋಷಣೆ..

0
798

ಸದಾ ಜ್ಯೋತಿಷ್ಯದ ಮೇಲೆ ನಂಬಿಕೆ ಇಟ್ಟುಕೊಂಡು ಕೈಯಲ್ಲಿ ನಿಂಬೆಹಣ್ಣು ಹಿಡಿದು ತಿರುಗಾಡುವ ರೇವಣ್ಣ ಮತ್ತೊಂದು ಜ್ಯೋತಿಷ್ಯ ನುಡಿದ್ದಾರೆ. 22, 6, 8 ನಮಗೆ ಲಕ್ಕಿ, ಎಂದು ಲೋಕಸಭೆ ಚುನಾವಣೆಯ ಅದೃಷ್ಟವನ್ನು ಸಂಖ್ಯಾಶಾಸ್ತ್ರದ ಪ್ರಕಾರ ವಿವರಿಸಿದ ಮೈತ್ರಿ ಸರ್ಕಾರದ ಸಚಿವ ಎಚ್.ಡಿ.ರೇವಣ್ಣ ಕೆಲವೊಂದಕ್ಕೆ ನಿಂಬೆಹಣ್ಣು ಬೇಕೇ ಬೇಕು ಅದಕ್ಕೆ ಹಿಡಿದುಕೊಂಡಿರುತ್ತೇನೆ. ಈಗಲೂ ಯುಪಿಎ ಅಧಿಕಾರಕ್ಕೆ ಬರಲಿದೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋಲ್ಲ. ಮೋದಿ ಪ್ರಧಾನಿ ಆದ್ರೆ ನಾನು ರಾಜಕೀಯ ನಿವೃತ್ತಿ ತಗೋತಿನಿ ಎಂದು ಸವಾಲು ಹಾಕಿದ್ದಾರೆ.

Also read: ಭವಿಷ್ಯ ನುಡಿದ ಜ್ಯೋತಿಷಿ ರೇವಣ್ಣ ನನ್ನದು ಸ್ವಾತಿ ನಕ್ಷತ್ರ ನನಗೆ ದೈವಾನುಗ್ರಹವಿದೆ; ಐಟಿ ಶಾಕ್‌ ನೀಡಲು ಹೋದ್ರೆ ಮಾಡಿಸಿದವ್ರಿಗೇ ಶಾಕ್‌ ತಿರುಗಿ ತಟ್ಟುತ್ತದೆ..

ಹೌದು ವಾಸ್ತು, ಜ್ಯೋತಿಷ್ಯವನ್ನು ಒಂದು ಕೈ ಹೆಚ್ಚೆ ಎನಿಸುವಷ್ಟು ಜ್ಯೋತಿಷ್ಯದ ಮೇಲೆ ನಂಬಿಕೆ ಇಟ್ಟುಕೊಂಡಿರುವ ರೇವಣ್ಣ ಹೋದ ಕಡೆ ನಿಂಬೆ ಹಣ್ಣಿನ ವಿಷಯ ಪ್ರಸ್ತಾಪ ಮಾಡಿ ಪರೋಕ್ಷೆವಾಗಿ ಬೆದರಿಕೆ ನೀಡುತ್ತಾರೆ, ಎನ್ನುವ ಮಾತುಗಳು ಕೇಳಿಬರುತ್ತಿದ್ದವು ಈ ವಿಷಯಕ್ಕೆ ಸ್ಪಷ್ಟತ್ತೆ ನೀಡಿದ ರೇವಣ್ಣ. ಇದೀಗ ಲೋಕಸಭಾ ಚುನಾವಣೆ ತಮಗೆ ಹೇಗೆ ಅದೃಷ್ಟವಾಗಲಿದೆ ಎಂದು ಸಂಖ್ಯಾಶಾಸ್ತ್ರದ ಪ್ರಕಾರ ವಿವರಿಸಿದ್ದು. Lok Sabha Election 2019: ’22, 6, 8 ನಮಗೆ ಲಕ್ಕಿ ಆದಕಾರಣ ನಾವೇ ಈ ಸಾರಿ ಗೆಲ್ಲೋದು ಎಂದು ನಗರದ ಖಾಸಗಿ ಹೊಟೇಲ್‍ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಪ್ರತಿಕಾಗೋಷ್ಠಿಯಲ್ಲಿ ರೇವಣ್ಣ ಮಾತನಾಡಿ, ಈ ಬಾರಿ ಮೋದಿ ಪ್ರಧಾನಿಯಾಗುವುದಿಲ್ಲ, ಒಂದು ವೇಳೆ ಅವರು ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದು “22, 6, 8 ಲಕ್ಕಿ ನಿಂದ?

Also read: ಮಂಡ್ಯದ ಸೊಸೆ ಸುಮಲತಾರವರಿಗೆ ಅವಮಾನ ಮಾಡಿದ ರೇವಣ್ಣ; ಇತ್ತ ಕಾಂಗ್ರೆಸ್-ನಿಂದಲೂ ಟಿಕೆಟ್ ಸಿಗದ ಸುಮಲತಾ ಬಿ.ಜೆ.ಪಿ. ಗೆ ಸೇರಬೇಕಾ??

ಇದೆ ವೇಳೆ ಮಾತನಾಡಿದ ಅವರು “22, 6, 8 ನಮಗೆ ಲಕ್ಕಿ ರೀ. ನಾವು 22 ಸೀಟು ಗೆಲ್ಲುತ್ತೇವೆ. ಆ 22 ನಂಬರ್ ನಮಗೆ ಲಕ್ಕಿ. ಅದು ಯಡ್ಯೂರಪ್ಪನವರಿಗೆ ಲಕ್ಕಿ ಆಗಲ್ಲ. 18 ನಂಬರ್ ಸಹ ನಮಗೆ ಲಕ್ಕಿಯೇ. 2018 ಇತ್ತು 8+1=9 ಅದಕ್ಕೆ ಕುಮಾರಸ್ವಾಮಿ ಸಿಎಂ ಆಗಿದ್ದು. ಈಗಲೂ 18 ರಂದು ಚುನಾವಣೆ ಇದೆ. 1+8 ಈಗಲೂ ಯುಪಿಎ ಅಧಿಕಾರಕ್ಕೆ ಬರಲಿದೆ. ನೋಡ್ಕೋಳಿ ಬೇಕಾದ್ರೆ ನಾವೇ ಅಧಿಕಾರಕ್ಕೆ ಬರೋದು. ಅದರಂತೆ ಈಗ ನಡೆಯುತ್ತಿರುವ ಚುನಾವಣೆಯಲ್ಲಿ ನಮಗೆ ಉತ್ತಮ ಫಲಿತಾಂಶ ದೊರೆಯಲಿದೆ. 2018 ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಭವಿಷ್ಯ ರೂಪಿತವಾಯಿತು. ಅದೇ ರೀತಿ ರಾಜ್ಯದಲ್ಲಿ ಇದೆ 18ರಂದು ಲೋಕಸಭಾ ಚುನಾವಣೆ ನಡೆಯುತ್ತಿದೆ. ಸಂಖ್ಯಾಶಾಸ್ತ್ರದ ಪ್ರಕಾರ ನಮಗೆ ಆ ದಿನ ಅನುಕೂಲವಾಗಿದೆ ಹಾಗಾಗಿ ನಾವೇ ಹೆಚ್ಚಿನ ಸ್ಥಾನಗಳಿಸುತ್ತೆವೆ. ಎಂದು ಹೇಳಿದ್ದಾರೆ.

ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ

Also read: ಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ. ಮೈತ್ರಿ ಸರ್ಕಾರವೂ ಉರುಳಿ ಬೀಳಲಿದೆ ಬಿಜೆಪಿ ಮುಖಂಡ ಕೆ. ಎಸ್ ಈಶ್ವರಪ್ಪ..

ಕೆಲವೊಂದಕ್ಕೆ ನಿಂಬೆಹಣ್ಣು ಬೇಕೇ ಬೇಕು ಅದಕ್ಕೆ ಹಿಡಿದುಕೊಂಡಿರುತ್ತೇನೆ. ನಮ್ಮ ಕುಲದೇವರು ಈಶ್ವರ. ಈಶ್ವರ ಫೋಟೋ ಜೊತೆ ನಿಂಬೆಹಣ್ಣು ಇಟ್ಟುಕೊಂಡಿರುತ್ತೇನೆ. ಸಮಾವೇಶದಲ್ಲಿ ಯಾರೋ ಕೊಟ್ಟರೂ ಅಂತಾ 5-6 ನಿಂಬೆಹಣ್ಣು ಇಟ್ಟುಕೊಂಡಿದ್ದೆ ಅಷ್ಟೇ ಕೆಲವು ಹಳ್ಳಿ ಕಡೆ ಹೋದಾಗ ಜನರು ನಿಂಬೆಹಣ್ಣು ಕೋಡ್ತಾರೆ. ಅದನ್ನ ಬಿಸಾಡೋಕೆ ಆಗುತ್ತಾ ಅಂತಾ ಪ್ರಶ್ನಿಸಿದ್ರು. ಇದೇ ವೇಳೆ ಯಡಿಯೂರಪ್ಪ, ಈಶ್ವರಪ್ಪನಿಗೂ ಒಂದು ನಿಂಬೆ ಹಣ್ಣು ಕೊಡ್ತೀನಿ.. ಪಾಪ ಅವರಿಗೂ ಯಾರು ಮಾಟ ಮಾಟ ಮಂತ್ರ ಮಾಡಿಸದ ಹಾಗೇ ಇರ್ಲಿ ಅಂತ ಎಂದು ಟೀಕೆ ಮಾಡಿದ ರೇವಣ್ಣ,

ಬಿಜೆಪಿಯವರು ಕಳೆದ 10 ವರ್ಷಗಳಿಂದಲೂ ರಾಮನ ಭಜನೆ ಮಾಡುತ್ತಿದ್ದಾರೆ. ರಾಮಮಂದಿರ ವಿಚಾರದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಬಿಜೆಪಿಯ ಎಲ್ಲ ನಾಯಕರೂ ದೇವೇಗೌಡರ ಭಜನೆ ಶುರು ಮಾಡಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ ಎಲ್ಲರೂ ದೇವೇಗೌಡರ ಭಜನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.