ರಾಜಕಾರಣಿಗಳು ಕೇವಲ ದುಡ್ಡು ಮಾಡುತ್ತಾರೆ. ಅವರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲ. ಒಂದು ಬಾರಿ ಚುನಾವಣೆಯಲ್ಲಿ ಗೆದ್ದರೆ ಸಾಕು ಈ ಕಡೆ ತಲೆಯು ಹಾಕುವುದಿಲ್ಲ ಎನ್ನುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಈ ಸಂಸದರು ಮಾಡಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ಇವರು ಏನು ಮಾಡಿದರು ಎಂದು ತಿಳಿದರೆ ಖಂಡಿತ ಖುಷಿ ಪಡುತ್ತೀರ.
ಮಧ್ಯಪ್ರದೇಶದ ಬಿಜೆಪಿ ಸಂಸದರದ ಜನಾರ್ದನ ಮಿಶ್ರಾ ಅವರು ಕೈಯಲ್ಲಿ ಟಾಯ್ಲೆಟ್ ಸ್ವಚ್ಛಗೊಳಿಸಿದ್ದಾರೆ. ಕಮೋಡ್ನಲ್ಲಿ ಕಟ್ಟಿದ್ದ ಮಣ್ಣು ಹಾಗೂ ಕಸವನ್ನು ತೆಗೆದಿದ್ದಾರೆ. ಮಿಶ್ರಾ ಅವರ ಕಾರ್ಯಕ್ಕೆ ಜನರಿಂದ ಶ್ಲಾಘನೆಯ ಮಹಾಪುರ್ರವೆ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಈ ವಿಡಿಯೋ ವೈರಲ್ ಆಗಿದೆ.
ಬಿಜೆಪಿ ಸಂಸದರದ ಜನಾರ್ದನ ಮಿಶ್ರಾ ಅವರು ತಮ್ಮ ಕ್ಷೇತ್ರದ ಶಾಲೆಯೊಂದಕ್ಕೆ ಹಾಗೆ ಭೇಟಿ ನೀಡಿದ್ದರು. ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯವನ್ನು ಬಳಸದೇ ಹೊರಗಡೆ ಹೋಗ್ತಿದ್ದಿದ್ದು ಕಂಡು ಇವರಿಗೆ ಅಚ್ಚರಿಯಾಗಿದೆ. ಶಾಲೆಯಲ್ಲಿ ಶೌಚಾಲಯವಿದ್ದರೂ ಯಾಕೆ ಈ ಮಕ್ಕಳು ಬಯಲಿಗೆ ಹೋಗುತ್ತಿದ್ದಾರೆ ಎಂದು ವಿಚಾರಿಸಿದ್ದಾರೆ.
ಸಂಸದರ ವಿಚಾರಣೆ ಮಾಡಿ, ಮಿಶ್ರಾ ಶಾಲೆಯ ಶೌಚಾಲಯಗಳಿಗೆ ಹೋಗಿ ಪರಿಶೀಲಿಸಿದ್ರು. ತುಂಬಾ ಸಮಯದಿಂದ ಶೌಚಾಲಯವನ್ನ ಸ್ವಚ್ಛ ಮಾಡದೇ ಇದ್ದಿದ್ದು ಕಾಣಿಸಿತ್ತು. ಶೌಚಾಲಯ ಸ್ವಚ್ಛ ಗೊಳಿಸದೆ ಮಣ್ಣುಕಟ್ಟಿ ಬ್ಲಾಕ್ ಆಗಿರುವುದು ತಿಳಿದು ಬಂದಿದೆ.
ಶಾಲೆಯವರು ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಿರದ ಕಾರಣ ವಿದ್ಯಾರ್ಥಿಗಳಿಗೆ ಆದ ತೊಂದರೆಗೆ ಮಿಶ್ರಾ ಕೋಪಗೊಂಡರು. ಈ ಸಮಸ್ಯೆಯನ್ನು ಈಗಲೇ ಬಗೆಹರಿಸಬೇಕು ಎಂದು ತಾವೇ ಕೈಯಲ್ಲೇ ಟಾಯ್ಲೆಟ್ ಸ್ವಚ್ಛಗೊಳಿಸಿದ್ದಾರೆ. ಸಂಸದರು ಎಡಗೈ ಮೂಲಕ ಟಾಯ್ಲೆಟ್ನಲ್ಲಿ ಸಿಲುಕಿಕೊಂಡಿದ್ದ ಕಸವನ್ನು ತೆಗೆದಿರುವ ವಿಡಿಯೋ ಈಗ ಎಲ್ಲೆಡೆ ಸಡ್ಡು ಮಾಡುತ್ತಿದೆ. ಇವರ ಈ ಸಾಮಾಜಿಕ ಕಳಕಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.