ಈ IASಅಧಿಕಾರಿ ಸ್ವತಃ ತಾವೇ ಸಾರ್ವಜನಿಕ ಶೌಚಾಲಯಗಳನ್ನು ಶುಚಿ ಮಾಡುತ್ತಾರೆ!!

0
838
ಐಶಾರಾಮಿ ಜೀವನ, ಬಂಗಲೇ, ದೊಡ್ಡ ಕಾರು, ದೊಡ್ಡ ಹುದ್ದೇ ಈ ಎಲ್ಲ ನಮ್ಮ ಕೈಯೊಳಗಿದ್ದರೆ, ನಮ್ಮಂತಹ ಸುಖಿ ಪುರುಷ ಇನ್ನೊಬ್ಬ ಇಲ್ಲ ಎನ್ನುವ ಭಾವನೆ ಬರುತ್ತಾದೆ. ಆದರೆ ಇವರು ಕೇಂದ್ರ ಸಚಿವಾಲಯದ ಕಾರ್ಯದರ್ಶಿಯಾಗಿ ಇವರು ಮಾಡಿದ ಕೆಲಸಕ್ಕೆ ಒಂದು ಸೆಲ್ಯೂಟ್ ಹೊಡೆಯಲೇಬೇಕು.

ಪರಮೇಶ್ವರ್ ಅಯ್ಯರ್ ಉನ್ನತ ಹುದ್ದೇಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ದೊಡ್ಡ ಅಧಿಕಾರಿ. ಇವರು ಇತ್ತೀಚಿಗೆ ವರಂಗಲ್ ಜಿಲ್ಲೆಯ ಗಂಗದೇವನಹಳ್ಳಿಗೆ ಭೇಟಿ ನೀಡಿದ್ದರು. ಅಲ್ಲಿ ಎಲ್ಲರೂ ಇವರು ಮಾಡಿದ ಕೆಲಸವನ್ನು ನೋಡಿ ಮೂಕ ವಿಸ್ಮಿತರಾದರು.

 

Source: News Crunch
ಹಳ್ಳಿಗಳಲ್ಲಿ ಶೌಚಾಲಯವನ್ನು ಶುಚಿ ಮಾಡವನು ಹಾಗೂ ಸಂಪಿನಲ್ಲಿ ಹೊಲಸನ್ನು ಎತ್ತಲ್ಲು ಕೆಳ ಜಾತಿಯ ವ್ಯಕ್ತಿಗಳಿಗೆ ಹೇಳುತ್ತಾರೆ. ಆದರೆ ಈ ಕೆಲಸ ದೊಡ್ಡ ಸವಾಲುದಾಯಕ. ಇದನ್ನೆಲ್ಲಾ ಅರಿತ ಅಯ್ಯರ್ ಅವರು ಜನರ ಮನಸ್ಥಿತಿಯನ್ನು ಬದಲಾಯಿಸಲು ಶೌಚಾಲಯದಲ್ಲಿ ಹೊಲಸು ಎತ್ತುವ ಕೆಲಸವನ್ನು ಮಾಡುತ್ತಾರೆ. ಇವರು ಫೆಬ್ರವಾರಿ ತಿಂಗಳಿನಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿದಾಗ ಸ್ವಚ್ಛತೆ ಹಾಗೂ ಸುರಕ್ಷತೆಯ ಸಂದೇಶವನ್ನು ಸಾರುವ ಉದ್ದೇಶವನ್ನು ಹೊಂದಿದ್ದರು. ಅಯ್ಯರ್ ಅವರೊಂದಿಗೆ ಅಧಿಕಾರಿಗಳು ಹಾಗೂ ಎನ್‌ಜಿಓಗಳ ಸಿಬ್ಬಂದಿ ಸೇರಿ ಸುಮಾರು ೪೦ ಜನ ಇದ್ದರು.
ಇವರು ಮೊದಲು ಸಂಪಿನಲ್ಲಿ ತುಂಬಿದ್ದ ಹೊಲಸನ್ನು ಗಮನಿಸಿ ಅಲ್ಲಿಯೇ ತಮ್ಮ ಪಾದರಕ್ಷೆಗಳನ್ನು ಬಿಟ್ಟು, ಸಂಪಿಗೆ ಇಳಿದೇ ಬಿಟ್ಟರು. ಇವರ ಈ ನಿರ್ಧಾರ ಅಲ್ಲಿ ನೆರದವರನ್ನು ವಿಸ್ಮಿತ ಗೊಳಿಸಿತು. ಇಷ್ಟಕ್ಕೆ ಸುಮ್ಮನಾಗದ ಅಯ್ಯರ್ ಅವರು ಹೊಲಸು ಎತ್ತಿ ಹೊರ ಹಾಕಲು ಆರಂಭಿಸಿದರು. ಕ್ರಮೇಣ ನೆರದವರೆಲ್ಲಾ ಕೈ ಜೋಡಿಸಿದರು.
ಈ ಬಗ್ಗೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡರು. ಇದನ್ನು ಗಮನಿಸಿದ ಪ್ರಧಾನಿ ನಿಷ್ಠ ಅಧಿಕಾರಿಯ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.