ಅಬ್ಬಾ !! ಎಂಟೆದೆ ಗಂಡು ನಮ್ಮ ಪ್ರಧಾನಿ… ಮೋದಿ ಭಾಷಣದ ಹೈಲೈಟ್ಸ್ ಓದಿ ಖುಷಿ ಪಡ್ತಿರಾ…

0
1952

“ನಮ್ಮ ಸರ್ಕಾರ ಬಡವರ ಉದ್ಧಾರಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ, ಆರ್ಥಿಕಾಭಿವೃದ್ಧಿಯಲ್ಲಿ ಭಾರತ ತುಂಬಾ ವೇಗವಾಗಿ ಮುನ್ನುಗ್ಗುತ್ತಿದೆ. ಆದರೆ ಜಾಗತಿಕ ಭ್ರಷ್ಟಾಚಾರ ಪಟ್ಟಿಯಲ್ಲೂ ಭಾರತ ಮೇಲಿದೆ. ಬಡತನದ ವಿರುದ್ಧ ನಮ್ಮ ಸರ್ಕಾರ ಹೋರಾಡುತ್ತದೆ. ಆರ್ಥಿಕತೆಯಲ್ಲಿ ಬಡವರು ಒಳಗೊಳ್ಳಬೇಕು, ಬಡವರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ಸರ್ಕಾರದ ಉದ್ದೇಶ ಎಲ್ಲರ ಜೊತೆಗೂ ಎಲ್ಲರ ಅಭಿವೃದ್ಧಿ ಆಗಿದೆ. 125 ಕೋಟಿ ಜನರು ಇರುವ ಭಾರತದ ವಿಶ್ವದ ಆರ್ಥಿಕತೆಯಲ್ಲಿ ಭಾರತ ಶೈನಿಂಗ್ ಆಗುತ್ತಿದೆ.”

ಇನ್ಮುಂದೆ 1 ಸಾವಿರ ರೂಪಾಯಿ ನೋಟು ಚಲಾವಣೆ ಇರಲ್ಲ. 500, 2000 ಸಾವಿರ ಮುಖಬೆಲೆಯ ಹೊಸ ನೋಟುಗಳನ್ನು ಜಾರಿ ತರಲಾಗುತ್ತೆ. ಚೆಕ್, ಡಿಡಿ, ಕ್ರೆಡಿಟ್, ಡಿಬಿಟ್ ಕಾರ್ಡ್ ಮೂಲಕ ವ್ಯವಹಾರ ಮಾಡಬಹುದು.ನೋಟು ಬದಲಾವಣೆಗೆ 50 ದಿನಗಳ ಕಾಲಾವಕಾಶವಿದ್ದು, ಪಾನ್ ಕಾರ್ಡ್, ಆಧಾರ್ ಕಾರ್ಡ್ ತೋರಿಸಿ ನೋಟ್‍ಗಳನ್ನು ಬದಲಾವಣೆ ಮಾಡಬೇಕು. ಪ್ರತಿದಿನ 20 ಸಾವಿರ ಮಾತ್ರ ಹಣ ಬದಲಾಯಿಸಿಕೊಳ್ಳಬಹುದು.

ಆದರೆ ಆಸ್ಪತ್ರೆ, ಮೆಡಿಕಲ್ ಪೆಟ್ರೋಲ್ ಬಂದ್, ಬಸ್, ಏರ್‍ಪೋರ್ಟ್, ರೈಲ್ವೇ ಬುಕ್ಕೀಂಗ್, ಚಿತಾಗಾರದಲ್ಲಿ ನವಂಬರ್ 11ರ ತನಕ ನೋಟು ಕೊಡಬಹುದಾಗಿದೆ.ಆನ್‍ಲೈನ್ ಹಣ ವರ್ಗಾವಣೆಗೆ ಯಾವುದೇ ಸಮಸ್ಯೆ ಇಲ್ಲ. ಒಂದು ದಿನ ಎಟಿಎಂನಿಂದ 4 ಸಾವಿರ ರೂ. ಮಾತ್ರ ಪಡೆದುಕೊಳ್ಳಲು ಅವಕಾಶ. ನವೆಂಬರ್ 9 ಹಾಗೂ 10ರಂದು ಎಟಿಎಂ ಬಂದ್, ನಾಳೆ ಎಲ್ಲಾ ಬ್ಯಾಂಕ್‍ಗಳು ಬಂದ್ ಮಾಡಲಾಗುತ್ತಿದ್ದು. ಭ್ರಷ್ಟಾಚಾರ, ನಕಲಿ ನೋಟು, ಭಯೋತ್ಪಾದನೆ ದೇಶದ ಆರ್ಥಿಕತೆಗೆ ಹಾನಿ ಮಾಡುತ್ತಿದೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಗಡಿಯಲ್ಲಿ ನಮ್ಮ ಶತ್ರುಗಳು ಕಳೆದ 4 ವರ್ಷಗಳಿಂದ ವ್ಯವಹಾರ ಮಾಡುತ್ತಿದ್ದು, ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆಯಿಂದ ಭಾರತ ಮೇಲೆ ಪರಿಣಾಮ ಬೀರಿದೆ. ಇದನ್ನು ಶಾಶ್ವತವಾಗಿ ನಿಲ್ಲಿಸುವ ದೃಷ್ಟಿಯಿಂದ ಇಂದು ಮಧ್ಯರಾತ್ರಿಯಿಂದಲೇ 500 ಹಾಗೂ 1000 ರೂ.ನೋಟು ಗಳ ಚಲಾವಣೆಯನ್ನು ನಿಷೇಧಿಸಲಾಗಿದ್ದು, ನವಂಬರ್ 10ರಿಂದ ಡಿಸೆಂಬರ್ 30ರೊಳಗೆ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸಿನಲ್ಲಿ ಹಳೇ ನೋಟು ಕೊಟ್ಟು ಹೊಸ ನೋಟು ಪಡೆದುಕೊಳ್ಳಬೇಕು.