ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರಕ್ಕೆ ಯುವಕರು ಕೆಲಸ ಕೇಳಿದರೆ ಚಂದ್ರನನ್ನು ತೋರಿಸುತ್ತಿದೆ; ರಾಹುಲ್ ಗಾಂಧಿ

0
271

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನಿರುದ್ಯೋಗ ಬಗ್ಗೆ ಬಹಳಷ್ಟು ಬರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೇಲೆ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ ಎನ್ನುವುದು ಬಹುದಿನಗಳಿಂದ ಕೇಳಿ ಬರುತ್ತಿರುವ ದೂರು ಇದಕ್ಕೆ ವಿರೋದ್ಧ ಪಕ್ಷದವರು ಕೂಡ ಟಿಕೆ ಮಾಡುತ್ತಲೇ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿ ಕೇಂದ್ರ ಸರ್ಕಾರ ಯುವಕರು ಉದ್ಯೋಗ ಬೇಕೆಂದು ಕೇಳಿದರೆ, ಸರ್ಕಾರವು ಚಂದ್ರನನ್ನು ವೀಕ್ಷಿಸುವಂತೆ ಹೇಳುತ್ತದೆ. ಎಂದು ಹೇಳಿದ್ದಾರೆ.

Also read: ರಮೇಶ್ ಆತ್ಮಹತ್ಯೆ ಮಾಡಿಕೊಳ್ಳಲು ಐಟಿ ಅಧಿಕಾರಿಗಳು ಹೇಳಿದ್ದೇನೆ? ಪರಮೇಶ್ವರ್‌ ಪಿಎ ಬರೆದಿಟ್ಟ ಡೆತ್ ನೋಟ್ ಏನಿದೆ??

ಹೌದು ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದರಂತೆ ಕೇಂದ್ರ ಸರ್ಕಾರ ಕೂಡ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿರುವುದು ಅಸಲಿಗೆ ಸತ್ಯವಾಗಿದೆ. ಇದನ್ನು ಎತ್ತಿ ತೋರಿಸಿರುವ ರಾಹುಲ್ ಗಾಂಧಿ ಅವರ ಮಾತು 100 ರಷ್ಟು ಅಸಲಿಯಾಗಿದೆ ಎಂದು ಬೆಂಬಲಿಗರು ಸೂಚಿಸಿದ್ದಾರೆ.

ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಯುವಕರು ಕೇಂದ್ರ ಸರ್ಕಾರವನ್ನು ಕೆಲಸದ ಬಗ್ಗೆ ಕೇಳಿದಾಗ, ಬಿಜೆಪಿ
ಸರ್ಕಾರ ಚಂದ್ರನ ಕಡೆ ತೋರಿಸುತ್ತಾರೆ. ದೇಶದ ಜನರನ್ನು ಬೇರೆ ಕಡೆ ಸೆಳೆಯುತ್ತಾರೆ ಎಂದು ಬಿಜೆಪಿ ಮೇಲೆ ಕಿಡಿಕಾರಿದ್ದು. ಪ್ರಧಾನಿ ಮೊದಿ ಅವರು, ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರನ್ನು ಭೇಟಿ ಮಾಡಿದರು, ಈ ಭೇಟಿಯಲ್ಲಿ ಅವರು 2017 ಚೀನಾದ ಸೈನ್ಯ ಭಾರತೀಯ ಭೂಪ್ರದೇಶದ ಮೇಲೆ ಅಕ್ರಮಣ ಮಾಡಿದರ ಬಗ್ಗೆ ಕೇಳಿಲ್ಲ. ಮೋದಿ ಅವರು ಮೇಕ್ ಇನ್ ಇಂಡಿಯಾ ಮಾಡುತ್ತಿಲ್ಲ. ಬದಲಾಗಿ ಮೇಕ್ ಇನ್ ಚೀನಾ ಮಾಡುತ್ತಿದ್ದಾರೆ ಎಂದು ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

Also read: ಸಮುದ್ರ ದಡದಲ್ಲಿ ಕಸ ತೆಗೆಯುವ ಮೂಲಕ ಜನರಿಗೆ ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ ಅವರ ವೀಡಿಯೋ ವೈರಲ್.!

ದೇಶದ ಜನ ಉದ್ಯೋಗ ಮತ್ತು ಸಮಸ್ಯೆಗಳ ಬಗ್ಗೆ ಕೇಳಿದಾಗ, ಚಂದ್ರಯಾನ, 370ನೇ ವಿಧಿ ರದ್ದು ಈ ರೀತಿಯ ವಿಚಾರಗಳನ್ನು ತೋರಿಸಿ ಜನರ ಗಮನವನ್ನು ಬೇರೆ ಕಡೆ ಸಳೆಯುವುದು ಮಾಧ್ಯಮ, ಮೋದಿ ಮತ್ತು ಅಮಿತ್ ಶಾ ಅವರ ಕೆಲಸವಾಗಿದೆ. 370ನೇ ವಿಧಿ ಮತ್ತು ಚಂದ್ರಯಾನದ ಬಗ್ಗೆ ಸದಾ ಮಾತನಾಡುವ ಕೇಂದ್ರ ಸರ್ಕಾರ ದೇಶದ ಸಮಸ್ಯೆ ಬಗ್ಗೆ ಮೌನ ವಹಿಸಿದೆ ಎಂದು ಕಿಡಿಕಾರಿದರು.

“ನರೇಂದ್ರ ಮೋದಿ, ಅಮಿತ್ ಶಾ ಮತ್ತು ಮಾಧ್ಯಮಗಳಿಗೆ ಪ್ರಮುಖ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವುದೇ ಕೆಲಸವಾಗಿದೆ. ರೈತರ ಬವಣೆ, ಯುವಕರ ನಿರುದ್ಯೋಗ ವಿಚಾರದಲ್ಲಿ ಮಾಧ್ಯಮ ಮೌನವಾಗಿದೆ. 15 ಸಿರಿವಂತ ಜನರ 5.5 ಲಕ್ಷ ಕೋಟಿ ಸಾಲ ಮನ್ನಾ ಆಗಿದೆ. ಸಿರಿವಂತರ ಮಾಲಿಕತ್ವದ ಮರ್ಜಿಯಲ್ಲಿರುವ ಮಾಧ್ಯಮಗಳು ಸಿರಿವಂತರಿಗೆ ಆಗಿರುವ ಸಾಲ ಮನ್ನಾ ಬಗ್ಗೆಯೂ ಮೌನವಾಗಿದೆ” ಚೆನ್ನೈನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರನ್ನು ಭೇಟಿ ಮಾಡಿದ್ದ ನರೇಂದ್ರ ಮೋದಿಗೆ ರಾಹುಲ್ ಒಂದು ಪ್ರಶ್ನೆ ಮುಂದಿಟ್ಟರು. 2017ರ ಡೋಕ್ಲಾಮ್ ಬಿಕ್ಕಟ್ಟಿನ ಬಗ್ಗೆ ಚೀನೀ ಅಧ್ಯಕ್ಷರೊಂದಿಗೆ ಮೋದಿ ಏನಾದರೂ ಮಾತನಾಡಿದರಾ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.

Also read: ಮುಸ್ಲಿಂ ಮಹಿಳೆಯರಿಂದ ನರೇಂದ್ರ ಮೋದಿ ಅವರ ದೇವಾಲಯ ನಿರ್ಮಾಣ; ಕಾಂಗ್ರೆಸ್ ಗೆ ಸಪೋರ್ಟ್ ಮಾಡೋ ಮುಸ್ಲಿಂ ಮಹಿಳೆಯರು ಮೋದಿ ಬೆಂಬಲ ನಿಂತ ಕಾರಣ??

2017ರಲ್ಲಿ ಭಾರತದ ಗಡಿಭಾಗದಲ್ಲಿರುವ ಡೋಕ್ಲಾಮ್​ಗೆ ಚೀನೀ ಸೈನಿಕರು ಪ್ರವೇಶಿಸಿದ್ದರು. ಎರಡೂ ದೇಶಗಳ ನಡುವೆ ಯುದ್ಧದ ಕರಿಛಾಯೆ ಕಾಣುವ ಮಟ್ಟಕ್ಕೆ ಅದು ಹೋಗುವುದರಲ್ಲಿತ್ತು. ಮೋದಿ ಅವರ ಅಮಾನೀಕರಣದಿಂದ (ನೋಟ್ ಬ್ಯಾನ್) ಯಾರಿಗೆ ಲಾಭ ಸಿಕ್ಕಿತು. ಉದ್ಯಮಿ ನೀರವ್ ಮೋದಿ ದೇಶ ಬಿಟ್ಟು ಓಡಿ ಹೋದರು. ಪ್ರಧಾನಿ ಅವರ ನೋಟ್ ಬ್ಯಾನ್ ನಿಂದ ಬಡವರಿಗೆ ಪ್ರಯೋಜನವಾಗಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ಚಂದ್ರನ ಬಳಿ ರಾಕೆಟ್ ಕಳುಹಿಸುವುದರಿಂದ ಮಹಾರಾಷ್ಟ್ರದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಹೇಳಿದ್ದಾರೆ.