ನೋಟ್ ಬಂದಿ ನಂತರ ಕಪ್ಪು ಹಣದ ಮೇಲೆ ಇನ್ನೊಂದು ಭರ್ಜರಿ ಸುರ್ಜಿಕಲ್ ಸ್ಟ್ರೈಕ್ ಮಾಡಲು ಹೊರಟಿದ್ದಾರೆ ಮೋದಿ… ಈ ಬಾರಿ ಬೇನಾಮಿ ಆಸ್ತಿ ಹೊಂದಿರುವವರು ನಿದ್ದೆಗೆಡುತ್ತಾರೆ..

0
804

ಕಪ್ಪು ಹಣ ಹೊಂದಿದವರ ವಿರುದ್ಧ ಕಳೆದ ವರ್ಷ ನವೆಂಬರ್ 8 ರಂದು, 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿಸುವ ಮೂಲಕ ಸಮರ ಸಾರಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಈಗ ಬೇನಾಮಿ ಆಸ್ತಿ ಹೊಂದಿದವರಿಗೆ ಶಾಕ್ ಕೊಟ್ಟಿದ್ದಾರೆ.

ಪ್ರಸಿದ್ಧ ‘ಹಿಂದೂಸ್ತಾನ್‌ ಟೈಮ್ಸ್‌’ ಪತ್ರಿಕೆ ಆಯೋಜಿಸಿದ್ದ ನಾಯಕತ್ವ ಸಮಾವೇಶದಲ್ಲಿ ಮಾತನಾಡಿದ ಅವರು, ಆಧಾರ್‌ ಸಂಖ್ಯೆಯ ಮೂಲಕ ಬೇನಾಮಿ ಆಸ್ತಿ ಪತ್ತೆ ಮಾಡಲಾಗುವುದು.ಬೇರೆಯವರ ಹೆಸರಿನಲ್ಲಿ ಕಪ್ಪು ಹಣ, ಆಸ್ತಿ ಸಂಪಾದಿಸುವುದನ್ನು ಪತ್ತೆ ಹಚ್ಚಲು ಆಧಾರ್‌ ನೆರವಾಗಲಿದೆ ಎಂದು ಹೇಳಿದರು.

ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಗಳಿಗೆ, ಸಿಲಿಂಡರ್-ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದಂತೆ ಆಸ್ತಿಗೂ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದರಿಂದ ಬೇನಾಮಿ ಆಸ್ತಿ ತಪ್ಪಿಸಬಹುದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲಸ ಮಾಡಲಿದೆ ಎಂದರು.

ದೇಶದ ಜನ ಮತ್ತು ಅವರ ಯೋಚನೆ ಬದಲಾಗುತ್ತಿದ್ದೆ, ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ಜನರಲ್ಲಿ ಭಯ ಹುಟ್ಟಿದೆ, ಜನ ಲಂಚ ತೆಗೆದುಕೊಳ್ಳುವುದಿರಲಿ, ಅದರ ಬಗ್ಗೆ ಕನಸಿನಲ್ಲಿಯು ಯೋಚಿಸುತ್ತಿಲ್ಲ ಎಂದರು.

ಜನ ಸ್ವಚ್ಛ, ಪರಿಶುದ್ಧ ಹಾಗು ಭ್ರಷ್ಟಾಚಾರ ಮುಕ್ತ ದೇಶಕ್ಕಾಗಿ ಪಣ ತೊಟ್ಟಿದ್ದಾರೆ ಎಂದು ಪ್ರಧಾನಿ ಹೇಳಿದರು.