ಕೃಷಿ ಕ್ಷೇತ್ರವನ್ನು ಕಾಡಲಿದೆ ಬೀಜ ಉದ್ಯಮದ ಏಕಸ್ವಾಮ್ಯ!!

0
690

ಜಗತ್ತಿನಾದ್ಯಂತ ಬೀಜ ಉದ್ಯಮ ಕೇಂದ್ರೀಕರಣಗೊಳ್ಳುತ್ತಿರುವುದು ಚಿಂತೆಗೆ ಕಾರಣವಾಗಿದೆ. ವಿಶ್ವದ ಮೂರು ಮುಖ್ಯ ಕಂಪನಿಗಳು ಇಡೀ ಬೀಜ ಉದ್ಯಮದಲ್ಲಿ ಏಕಸ್ವಾಮ್ಯ ಸಾಧಿಸುವತ್ತ ತ್ವರಿತಗತಿಯಲ್ಲಿ ದಾಪುಗಾಲಿಕ್ಕುತ್ತಿವೆ. ಬೀಜೋದ್ಯಮ ಕ್ಷೇತ್ರದಲ್ಲಿ ಈ ಮೂರೇ ಕಂಪನಿಗಳ ಪಾಲು ಶೇ. 50ಕ್ಕೂ ಹೆಚ್ಚಾಗಿದೆ. ಇಷ್ಟು ಮಾತ್ರವಲ್ಲ ಬೀಜೋತ್ಪಾದನೆ ಕ್ಷೇತ್ರದಲ್ಲಿ ಈ ಕಂಪನಿಗಳ ಏಕಸ್ವಾಮ್ಯ ಶೀಘ್ರಗತಿಯಲ್ಲಿ ಆಗುವ ಎಲ್ಲ ಸೂಚನೆಗಳು ಇವೆ.

ಇದರ ಸಂಕೇತ ಎರಡು ಮುಖ್ಯ ಕಂಪನಿಗಳ ಮಧ್ಯೆ ನಡೆದ ಸಂಧಾನದಲ್ಲಿ ಕಾಣಸಿಗುತ್ತದೆ. ರಸಾಯನಿಕ ಉತ್ಪಾದನೆಯಲ್ಲಿ ತೊಡಗಿರುವ ಜಗತ್ತಿನ ಅತ್ಯಂತ ದೊಡ್ಡ ಕಂಪನಿ ಎನ್ನಿಸಿಕೊಂಡ `ಬಾಯರ್’ ಬೀಜೋತ್ಪಾದನಾ ಕ್ಷೇತ್ರದಲ್ಲಿ ವಿಶ್ವದ ಮತ್ತೊಂದು ದೊಡ್ಡ ಕಂಪನಿಯಾದ ಮಾನ್ಸಾಂಟೋವನ್ನು 66 ಸಾವಿರ ಕೋಟಿ ಡಾಲರ್ ಮೊತ್ತಕ್ಕೆ ಕೊಂಡುಕೊಂಡಿದೆ. ಇವೆರಡೂ ಕಂಪನಿಗಳ ಸಂಯೋಜನೆಗೆ ಸಂಬಂಧಿಸಿದಂತೆ ನಿಯಮಾವಳಿಯ ಒಪ್ಪಿಗೆ ಮಾತ್ರ ದೊರೆಯಬೇಕಿದೆ.ಇದೇ ರೀತಿ ಪ್ರಸಕ್ತ ಸಾಲಿನಲ್ಲಿ ನಡೆದ ಮತ್ತೊಂದು ದೊಡ್ಡ ವ್ಯವಹಾರದಲ್ಲಿ ಚೀನಾ ದೇಶದ ರಾಷ್ಟ್ರೀಯ ರಸಾಯನಿಕ ನಿಗಮ ಬಹುರಾಷ್ಟ್ರೀಯ ಕಂಪನಿಯಾದ `ಸಿಂಜೆಂಟಾ ಎಜಿ’ ಕಂಪನಿಯನ್ನು 43 ಸಾವಿರ ಡಾಲರ್ ಮೊತ್ತಕ್ಕೆ ಖರೀದಿಸಿದೆ.ಇವೆರಡೂ ದೊಡ್ಡ ವ್ಯವಹಾರಗಳಿಂದ ತಿಳಿದುಬರುವ ವಿಷಯವೇನೆಂದರೆ ಬೀಜೋತ್ಪಾದನೆ ಕ್ಷೇತ್ರದಲ್ಲಿ ಏಕಸ್ವಾಮ್ಯದ ಪ್ರಕ್ರಿಯೆ ಅತ್ಯಂತ ತ್ವ-ರಿತಗತಿಯಲ್ಲಿ ನಡೆಯುತ್ತಿರುವುದೇ ಆಗಿದೆ.

ಏಕಸ್ವಾಮ್ಯ ಸಾಧಿಸುವ ಹುನ್ನಾರಈ ಪ್ರಕ್ರಿಯೆಯಿಂದ ಗೋಚರಿಸುವ ವಿಚಾರ ಏನೆಂದರೆ ಕೃಷಿ ಕ್ಷೇತ್ರದಲ್ಲಿ ಬಳಕೆಯಾಗುವ ಬೀಜ ಮತ್ತು ರಸಾಯನಿಕ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳು ಒಂದರೊಳಗೊಂದು ಸೇ-ರಿಕೊಳ್ಳುತ್ತಿರುವುದೇ ಆಗಿದೆ. ಈ ಪ್ರಕ್ರಿಯೆ ಅತ್ಯಂತ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಬೀಜ ಕಂಪನಿಗಳು ತನಗೆ ಸಂಬಂಧಿಸಿದ ರಸಾಯನಿಕಗಳನ್ನೇ ಬಳಸುವಂತಹ ಸ್ಥಿತಿಯನ್ನು ನಿರ್ಮಿಸುವ ಹುನ್ನಾರ ಅಡಗಿದೆ.
ಸರ್ಕಾರಗಳು ತಮ್ಮ ತಮ್ಮ ಕೃಷಿಕರ ಹಿತವನ್ನು ರಕ್ಷಿಸಲು ಮುಂದಾಗಲೇಬೇಕಾದ ಸಮಯ ಬಂದೊದಗಿದೆ. ಇದರೊಂದಿಗೆ ಪರಿಸರ ಸಂರಕ್ಷಣೆಗೋಸ್ಕರವೂ ಆಯಾ ಪ್ರದೇಶದ ಕೃಷಿ ವೈವಿಧ್ಯವನ್ನು ಕಾಯ್ದುಕೊಳ್ಳಲು ಮುಂದಾಗಬೇಕಾದ ಅಗತ್ಯವಿದೆ.ಕೃಷಿಕರ ರಕ್ಷಣೆಯೇ ಆದ್ಯತೆ ಆಗಬೇಕುಈ ದಿಶೆಯಲ್ಲಿ ಸರ್ಕಾರಗಳು ಯೋಚಿಸದೇ ಇದ್ದಲ್ಲಿ ಕೃಷಿ ಕ್ಷೇತ್ರ ಸಂಕಷ್ಟವನ್ನು ಎದು-ರಿಸುವುದರಲ್ಲಿ ಸಂದೇಹವೇ ಇಲ್ಲ. ವಿಶ್ವ ಮಟ್ಟದ ಕೃಷಿ ಕ್ಷೇತ್ರ ಮತ್ತು ಕೃಷಿ ಸಂಬಂಧಿ ಉದ್ಯಮಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಗಂಭೀರವಾಗಿ ಗಮನ ಹರಿಸದೇ ಇದ್ದಲ್ಲಿ ಸಮಸ್ಯೆಗೆ ಸಿಕ್ಕಿಕೊಳ್ಳುವುದು ನಿಶ್ಚಿತ. ನಮ್ಮ ಕೃಷಿಕರ ಪರಿಸ್ಥಿತಿ ಮತ್ತಷ್ಟು ದಯನೀಯ ಆಗುವುದರಲ್ಲಿ ಅನುಮಾನವೇ ಇಲ್ಲ. ಆದುದರಿಂದ ಬೀಜೋತ್ಪಾದನಾ ಕಂಪನಿಗಳು ಮತ್ತು ರಸಾಯನಿಕ ಉತ್ಪಾದನಾ ಕಂಪನಿಗಳ ನಡುವೆ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಗಮನದಲ್ಲಿ ಇರಿಸಿಕೊಂಡು ನಮ್ಮ ಕೃಷಿಕರ ಹಿತಾಸಕ್ತಿಯನ್ನು ರಕ್ಷಿಸಲು ಮುಂದಾಗಲೇಬೇಕಿದೆ.