ಜನವರಿ 31ರ ಚಂದ್ರ ಗ್ರಹಣಕ್ಕೆ ಯಾವ ರಾಶಿಯವರಿಗೆ ಫಲ-ಅಫಲಗಳು ಆಗಲಿವೆ ಮತ್ತು ಗ್ರಹಣ ಶಾಂತಿಯ ಬಗ್ಗೆ ಸಂಪೂರ್ಣ ಮಾಹಿತಿ..

0
11457

ಈ ವರ್ಷದ ಮೊದಲ ಭಾಗಶಃ ಚಂದ್ರಗ್ರಹಣ ಶ್ರೀ ಹೇವಿಳಂಬಿ ನಾಮ ಸಂವತ್ಸರದ ಮಾಘ ಮಾಸ ಶುಕ್ಷ ಹುಣ್ಣಿಮೆ ಜನವರಿ 31, 2018 ರಂದು ಅಶ್ಲೇಷ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಗೋಚರವಾಗುತ್ತದೆ. ಬೆಳ್ಳಿಯಂತ ಬೆಳಕು ಚೆಲ್ಲೋ ಚಂದ್ರ ಕೆಲಕಾಲ ಮಂಕು ಆವರಿಸದಂತೆ ಕಾಣುತ್ತಾನೆ.

ವಿಜ್ಞಾನದ ಪ್ರಕಾರ ಇದು ಒಂದು ಪ್ರಕೃತಿ ವಿಸ್ಮಯವಷ್ಟೇ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣವು ಮಾನವರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಂದ್ರಗ್ರಹಣದ ವೇಲೆ ನಡೆಯುವ ಕ್ರಿಯೆಗಳಿಂದ ಮಾನವರ ರಾಶಿಗಳ ಮೇಲೆ ಕೂಡ ಪರಿಣಾಮ ಬೀರುತ್ತವೆ. ಅದೇ ರೀತಿ ಈ ಗ್ರಹಣದಿಂದ ಕೆಲವು ರಾಶಿಗೆ ಶುಭ ಫಲ ದೊರೆಯುವುದು. ಇನ್ನು ಕೆಲವು ರಾಶಿಗೆ ಆಶುಭವಾಗುವುದು. ಇದರ ಫಲ ಗ್ರಹಣದ ದಿನ ಅಥವಾ ತಕ್ಷ ಣವೇ ಅನುಭವಕ್ಕೆ ಬರುವುದಿಲ್ಲ. ಎರಡು, ಮೂರು ತಿಂಗಳ ನಂತರ ಅನುಭವಕ್ಕೆ ಬರುವುದು. ಭಯ, ನಡುಕ ಹುಟ್ಟಿಸುವಂತಹದ್ದು ರಾಹು. ಹಾಗಾಗಿ ತೊಂದರೆ ಹೆಚ್ಚು.

ಯಾವ ಯಾವ ರಾಶಿಯವರ ಮೇಲೆ ಗ್ರಹಣದ ಪರಿಣಾಮ ಹೇಗಿರುತ್ತೆ ಅಂತ ತಿಳಿಯೋಣ ಬನ್ನಿ:

ವೃಷಭ, ತುಲಾ, ಕುಂಭ, ಕನ್ಯಾ ಈ ರಾಶಿಗಳು ಚಂದ್ರಗ್ರಹಣದಿಂದ ಶುಭ ಫಲ ಪಡೆಯುತ್ತವೆ. ಈ ನಾಲ್ಕು ರಾಶಿಯವರಿಗೆ ತುಂಬಾ ಒಳ್ಳೆಯದಾಗುತ್ತದೆ. ಮತ್ತು ಇವರು ಕೈ ಹಾಕಿದ ಕೆಲಸ ನೆರವೇರುತ್ತದೆ.

ಮೀನ, ಮಿಥುನ, ಮಕರ, ವೃಶ್ಚಿಕ ಈ ರಾಶಿಗಳು ಚಂದ್ರಗ್ರಹಣದಿಂದ ಮಿಶ್ರ ಫಲ ಪಡೆಯುತ್ತವೆ. ಅಂದರೆ ಈ ರಾಶಿಯವರಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಸಹ ಲಭಿಸುತ್ತವೆ. ಅಂತ್ಯ ಕಾಲದಲ್ಲಿ ಸ್ನಾನ ಮಾಡಿದರೆ ಅನಂತ ಫಲ ಸಿಗುತ್ತದೆ. ಇನ್ನು ಗ್ರಹಣ ಸಂಭವಿಸಿದ ಮೇಲೆ ಹೋಮ ಮಾಡಿದರೆ ಕೋಟಿ ಪುಣ್ಯ ಫಲ ಸಿಗುತ್ತದೆ.

ಮೇಷ, ಸಿಂಹ, ಕರ್ಕಾಟಕ, ಧನು ಈ ರಾಶಿಗಳು ಚಂದ್ರಗ್ರಹಣದಿಂದ ಅಶುಭ ಫಲ ಪಡೆಯುತ್ತವೆ. ಇದಕ್ಕೆ ಸೂಕ್ತ ಪರಿಹಾರ ಈ ನಾಲ್ಕು ರಾಶಿಯವರು ಮಾಡಿಸಿಕೊಂಡರೆ ಒಳ್ಳೆಯದು.

ಈ ವರ್ಷದ ಮೊದಲನೇ ಚಂದ್ರಗ್ರ್ರಹಣವನ್ನು ಬರಿಗಣಿನಲ್ಲಿ ನೋಡಬಹುದು ತೊಂದರೆ ಇಲ್ಲ. ನ್ಯೂ ದೆಹಲಿ, ಮುಂಬೈ, ಅಹಮದಾಬಾದ್, ಸಿಯಾಟಲ್, ಸಿಡ್ನಿ ಮತ್ತು ಸಿಂಗಾಪುರ್ ಗಳಲ್ಲಿ ಚಂದ್ರಗ್ರಹಣ ಕಾಣಸಿಗಲಿದೆ. ಅಂದು ಸಂಜೆ 5.17ಕ್ಕೆ ಗ್ರಹಣದ ಸ್ಪರ್ಶ ಕಾಲ ಆಗಲಿದ್ದು, ರಾತ್ರಿ 7.19ಕ್ಕೆ ಗ್ರಹಣ ಮಧ್ಯಕಾಲವಾಗಲಿದ್ದು, ರಾತ್ರಿ 8.41ಕ್ಕೆ ಗ್ರಹಣ ಮೋಕ್ಷ ಆಗಲಿದೆ.

ಗರ್ಭಿಣಿಯರು, ಬಾಣಂತಿಯರು, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ಪುಟಾಣಿಗಳು ಕೂಡ ಗ್ರಹಣಾಚರಣೆ ಮಾಡಬಹುದು. ಮತ್ತು ಗ್ರಹಣದ ಸಮಯದಲ್ಲಿ ಸ್ವಲ್ಪ ಅಕ್ಕಿಯನ್ನು ಒಂದು ಬಟ್ಟೆಯಲ್ಲಿ ಒಂದು ಕಡೆ ತೆಗೆದಿಟ್ಟು ಕೊಂಡಿರಿ. ಮರುದಿನ ದೇವಸ್ಥಾನಕ್ಕೆ ಅಥವಾ ಬಡವರಿಗೆ ತೆಗೆದಿಟ್ಟ ಅಕ್ಕಿಯನ್ನು ದಾನ ನೀಡಬೇಕು. ಗ್ರಹಣದ ಸಮಯದಲ್ಲಿ ಸ್ನಾನ ಮಾಡಿಕೊಂಡು ಪೂಜಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಗ್ರಹಣ ಸಂಭವಿಸಿದಾಗ ಆಹಾರ ಸ್ವೀಕಾರ ನಿಷಿದ್ಧವಾಗಿದ್ದು, ಗ್ರಹಣ ಮೋಕ್ಷವಾದ ನಂತರವೇ ಸ್ನಾನಾದಿಗಳನ್ನು ಪೂರೈಸಿ ಆಹಾರ ಸ್ವೀಕರಿಸಬೇಕು.