ಅನಾಥಶ್ರಮದಲ್ಲಿದ್ದ ಅಮ್ಮನನ್ನು ನೆನಪು ಮಾಡಿದ ಬ್ಲಾಕ್ Money

0
1053

ವಯಸ್ಸಾದ ಅಮ್ಮಂದಿರ ಮಕ್ಕಳು ಅವರವರ ಹೆಂಡತಿ ಜೊತೆ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಕೈತುಂಬಾ ಸಂಬಳ ಬರುತ್ತೆ. ವೀಕೆಂಡ್ನಲ್ಲಿ ಸಾಕಷ್ಟು ಖರ್ಚು ಮಾಡುತ್ತಾರೆ. ಆದ್ರೆ ಹೆತ್ತಮ್ಮ ಮಾತ್ರ ಅವರಿಗೆ ಬೇಡವಾಗಿದ್ದಾರೆ. ಹೆತ್ತು ಹೊತ್ತು ಸಾಕಿದ ಅಮ್ಮನಿಗೆ ಈಗ ಯಾರೂ ಇಲ್ಲ. ಅಂತಹ ತಾಯಂದಿರಿಗೆ ಸಹಾಯವಾಗಲೆಂದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಮೋದಿಯವರ ಈ ನಿರ್ಧಾರದಿಂದ ಕೆಲವರಿಗೆ ಮರೆತುಹೋಗಿದ್ದ ಅಮ್ಮ ನೆನಪಾಗಿದ್ದಾಳೆ. ಏನಪ್ಪಾ ಇವರು ಏನ್ ಹೇಳ್ತಿದೀರಾ ಅಂತ ಯೋಚನೆ ಮಾಡ್ತಾ ಇದ್ದೀರಾ??

ಒಬ್ಬ ವ್ಯಕ್ತಿ ತನ್ನ ಖಾತೆಗೆ ಎರಡೂವರೆ ಲಕ್ಷ ರೂಪಾಯಿಯನ್ನು ಜಮಾ ಮಾಡಬಹುದು. ಇದು ಹಿರಿಯರು ಹಾಗೂ ಮಹಿಳೆಯರಿಗೂ ಈ ಅವಕಾಶ ನೀಡಲಾಗಿದೆ. ಯಾವುದೇ ಮಹಿಳೆ ಖಾತೆಗೆ ಎರಡೂವರೆ ಲಕ್ಷ ರೂಪಾಯಿ ಜಮಾ ಆದ್ರೆ ಆದಾಯ ಇಲಾಖೆ ಯಾವುದೇ ಪ್ರಶ್ನೆ ಮಾಡೋದಿಲ್ಲ. ಎಂಬ ಮಾತು ಹೊರಬಿದ್ದಂತೆ ಅಮ್ಮನಿಗೆ ಆಶ್ರಯ, ಗೌರವ ನೀಡದೆ ಇದ್ದ ಮಕ್ಕಳು ಈಗ ಅಮ್ಮನ ಅಕೌಂಟ್ ನಲ್ಲಿ ಹಣ ಹಾಕಲು ಶುರುಮಾಡಿದ್ದಾರೆ. ಅನಾಥಾಶ್ರಮದಲ್ಲಿ ಬಿಟ್ಟ ತಾಯಿಯನ್ನು ಮನೆಗೆ ಕರೆ ತಂದು ಆಕೆಯ ಖಾತೆಗೆ 2.5 ಲಕ್ಷ ರೂಪಾಯಿ ಜಮಾ ಮಾಡ್ತಿದ್ದಾರೆ. ಈ ರೀತಿಯಾಗಿ ಬಂಡವಾಳ ಮಾಡಿಕೊಂಡಿರುವ ಮಕ್ಕಳಿಗೆ ತಾಯಿಯ ನೆನಪಾಗಿದೆ. ಕಪ್ಪುಹಣ ಸಂಗ್ರಹಿಸಿಟ್ಟವರು ಬ್ಲ್ಯಾಕ್ ಮನಿಯನ್ನು ವೈಟ್ ಮನಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದ ಕೆಲವರು ಮನೆಯಲ್ಲಿರುವ ಮಹಿಳೆಯರ ಹೆಸರಲ್ಲೂ ಹಣ ಜಮಾವಣೆ ಮಾಡ್ತಿದ್ದಾರೆ. ಎಂಥ ವಿಪರ್ಯಾಸ ಅಲ್ವಾ ಸ್ನೇಹಿತರೆ!!!