ತೆರೆಗೆ ಬರಲಿದೆ ಕಾಂಗ್ರೆಸ್ ಟ್ರಬಲ್ ಶೂಟರ್, ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಜೀವನಾಧಾರಿತ ಚಿತ್ರ?

0
265

ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಹೆಸರು ವಾಸಿಯಾದ ಡಿ.ಕೆ ಶಿವಕುಮಾರ್ ತಿಹಾರ್​ ಜೈಲಿನಲ್ಲಿದ್ದು, ಇವರ ಜೀವನಾಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಸ್ಯಾಂಡಲ್‍ವುಡ್‍ನಲ್ಲಿ ತಯಾರಿ ನಡೆಯುತ್ತಿದೆ. ಈಗಾಗಲೇ ಸಿನಿಮಾ ಕುರಿತು ಹಲವು ತಯಾರಿ ನಡೆದಿದ್ದು, ನಿರ್ದೇಶಕ ನಾಗೇಶ್ ‘ಕನಕಪುರ ಬಂಡೆ’, ‘ಕನಕಪುರ ಕೆಂಪೇಗೌಡ’, ‘ಕನಕಪುರ ಬೆಳಗಾವಿ ಎಕ್ಸ್‌ಪ್ರೆಸ್‌’ ಎಂಬ ಮೂರು ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ.

Also read: ಮಾಜಿ ಸಚಿವ ಡಿಕೆ ಶಿವಕುಮಾರ್‌ ಬಂಧನದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹತ್ತಿದ ಹೋರಾಟದ ಬೆಂಕಿ; ಮುಂದೇನಾಗುತ್ತೆ??

ಡಿಕೆಶಿ ಜೀವನಾಧಾರಿತ ಚಿತ್ರ?

ಹೌದು ಕಾಂಗ್ರೆಸ್​ ಪ್ರಭಾವಿ ನಾಯಕ ಡಿಕೆ ಶಿವಕುಮಾರ್​ ವಿಚಾರಣೆ ಎದುರಿಸುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಅವರ ಕುರಿತು ಸಿನಿಮಾ ನಿರ್ಮಾಣ ಮಾಡಲು ಸ್ಯಾಂಡಲ್​ವುಡ್​​ನಲ್ಲಿ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ನಿರ್ದೇಶಕ ನಾಗೇಶ್​ ಸಿನಿಮಾಗೆ ಟೈಟಲ್​ ನೋಂದಣಿ ಮಾಡಿಸಲು ಕರ್ನಾಟಕ ಫಿಲ್ಮ್​ಚೇಂಬರ್​ ಕದ ತಟ್ಟಿದ್ದು, ಇದು ಡಿಕೆಶಿ ಕುರಿತ ಸಿನಿಮಾ ಎನ್ನಲಾಗುತ್ತಿದೆ. ಕನಕಪುರ ಬಂಡೆ’, ‘ಕನಕಪುರ ಕೆಂಪೇಗೌಡ’, ‘ಕನಕಪುರ ಬೆಳಗಾವಿ ಎಕ್ಸ್‌ಪ್ರೆಸ್‌’ ಎಂಬ ಮೂರು ಟೈಟಲ್ ಇಟ್ಟುಕೊಂಡು ಸಿನಿಮಾ ಸಿದ್ದತ್ತೆ ನಡೆಯುತ್ತಿದೆ. ಈ ಮೂರರಲ್ಲಿ ಯಾವ ಟೈಟಲ್ ಅನ್ನು ಚೇಂಬರ್ ನೀಡದಿದ್ದರೆ ಕೋರ್ಟ್ ಮೊರೆ ಹೋಗಲು ಸಿದ್ಧ ಎಂದು ನಾಗೇಶ್ ತಿಳಿಸಿದ್ದಾರೆ.

Also read: ಇಂಧನ ಸಚಿವ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಎಷ್ಟು ಪತ್ತೆಯಾಗಿದೆ ಗೊತ್ತಾ.!

ಜಾರಿ ನಿರ್ದೇಶನಾಲಯದ ಕೈಯಲ್ಲಿ ಸಿಲುಕಿದ ಡಿಕೆಶಿ ಸಿನಿಮಾಗೆ ನಾಗೇಶ್ ಅವರು ಆಯ್ಕೆ ಮಾಡಿಕೊಂಡಿರುವ ಟೈಟಲ್‍ಗಳನ್ನು ನೋಡಿದರೆ ಇದು ಡಿಕೆಶಿ ಅವರು ಜೀವನಾಧಾರಿಕ ಚಿತ್ರನಾ? ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ನಾಗೇಶ್ ಅವರು ಡಿಕೆಶಿ ಅವರ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರೆ ಅದರಲ್ಲಿ ಅನುಮಾನ ಬೇಡ ಎಂಬ ಊಹಪೋಹದ ಮಾತುಗಳು ಕೂಡ ಕೇಳಿ ಬರುತ್ತಿದೆ. ಟೈಟಲ್ ನೋಡಿದರೆ ಮೇಲ್ನೋಟಕ್ಕೆ ಈ ಚಿತ್ರ ಕಾಂಗ್ರೆಸ್ ಟ್ರಬಲ್ ಶೂಟರ್ ಕುರಿತಾಗಿಯೇ ಇರುತ್ತದೆ ಎನಿಸುತ್ತಿದ್ದರೂ, ಈ ಬಗ್ಗೆ ನಾಗೇಶ್ ಅವರು ಸ್ಪಷ್ಟನೆ ನೀಡಿದ ಮೇಲೆಯೇ ಸತ್ಯಾಂಶ ತಿಳಿಯಬೇಕಿದೆ. ಆದರೆ ಕೆಲವು ಮಾಹಿತಿ ಪ್ರಕಾರ ಈ ಸಿನಿಮಾ ಪಕ್ಕಾ ಡಿ.ಕೆ ಶಿವಕುಮಾರ್ ಅವರದೇ ಎನ್ನಲಾಗುತ್ತಿದೆ.

184 ಜನರಿಗೆ ನೀಡಿದ ನೋಟಿಸ್ ಬಗ್ಗೆ ಸಿನಮಾ?​

Also read: ಬಂಧನದ ಭೀತಿಯಲ್ಲಿರುವ ಡಿಕೆಶಿ, ದೆಹಲಿಯಲ್ಲಿ ಸಿಕ್ಕ ಹಣ ನನ್ನದೆಂದು ಒಪ್ಪಿಕೊಂಡು ಬಿಚ್ಚಿಟ್ಟ ಸತ್ಯವೇನು??

ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ದೆಹಲಿ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್​ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಇಡಿ ಡಿಕೆಶಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಡಿಕೆಶಿ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್​ ಸೇರಿ 184 ಜನರಿಗೆ ನೋಟಿಸ್​ ನೀಡಲಾಗಿದೆ. ಇದೇ ವಿಚಾರ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನುವ ಅನುಮಾನ ಮೂಡಿದೆ. ಆದರೆ ಸಿನಿಮಾ ಕುರಿತು ಇದಕ್ಕೆ ಆರು ಹೀರೋ ಯಾವ ಕತೆಯನ್ನು ಆದರಿಸಿ ಸಿನಿಮಾ ಮಾಡಲಾಗುತ್ತಿದೆ ಎನ್ನುವ ಬಗ್ಗೆ ನಿರ್ದೇಶಕರೇ ಅಧಿಕೃತ ಮಾಹಿತಿ ನೀಡಬೇಕಿದೆ.

ಸದ್ಯ ತಿಹಾರ್ ಜೈಲಿನಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸೆಲ್ ನಂ. 7 ನಿಗದಿ ಮಾಡಲಾಗಿದೆ. ಆರ್ಥಿಕ ಅಪರಾಧಿಗಳಿಗೆ ಮೀಸಲಾದ ಈ ಸೆಲ್​ನಲ್ಲಿ ಅತ್ಯಂತ ಹೆಚ್ಚು ಭದ್ರತಾ ವ್ಯವಸ್ಥೆ ಇರಲಿದೆ. ಇದೇ ಸೆಲ್ ನಂ. 7ರಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಕೂಡ ಇದ್ದಾರೆ. ಇಲ್ಲಿ ಡಿ.ಕೆ. ಶಿವಕುಮಾರ್​ಗೆ ವಿಶೇಷ ಸೌಲಭ್ಯಗಳಿರುವುದಿಲ್ಲ. ಎಂದು ಮಾಹಿತಿ ತಿಳಿಸಿದೆ.