ಸಂಸದೆ ಶೊಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್‌ ದಾಖಲು; ಕೇರಳ ಸರ್ಕಾರದ ವಿರುದ್ಧ ಸಮರಕ್ಕೆ ನಿಂತ ಬಿಜೆಪಿ ನಾಯಕರು.!

0
221

ಸಂಸದೆ ಶೋಭಾ ಕರಂದ್ಲಾಜೆ ಕಳೆದ ಜನವರಿ 22 ರಂದು ತಮ್ಮ ಖಾಸಗಿ ಟ್ವಿಟರ್ ಖಾತೆಯಲ್ಲಿ ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಶೋಭಾ ಕರಂದ್ಲಾಜೆ “ಹಿಂದೂಗಳು ಅಧಿಕ ಸಂಖ್ಯೆಯಲ್ಲಿರುವ ಕೇರಳದ ಮಲಪ್ಪುರಂ ಜಿಲ್ಲೆಯ ಕಟ್ಟಿಪುರಂ ಎಂಬ ಗ್ರಾಮದ ಜನ ಕೇಂದ್ರ ಸರ್ಕಾರದ ಸಿಎಎ ಕಾಯ್ದೆಯ ಪರ ಚಳುವಳಿಯಲ್ಲಿ ತೊಡಗಿದ್ದರು. ಆದರೆ, ಇವರು ಈ ಚಳುವಳಿಯಲ್ಲಿ ಕೇಂದ್ರ ಸರ್ಕಾರದ ಪರ ಘೋಷಣೆ ಕೂಗಿದ ಮಾತ್ರಕ್ಕೆ ಈ ಗ್ರಾಮಕ್ಕೆ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ಈ ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದಕ್ಕೆ, ಸರಕಾರ ಎಫ್‌ಐಆರ್‌ ದಾಖಲಿಸಿದೆ.

ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್‌?

ಹೌದು ಸಿಎಎಗೆ ಬೆಂಬಲ ನೀಡಿದ್ದಾರೆ ಎಂಬ ಕಾರಣಕ್ಕೆ ಕೇರಳದಲ್ಲಿರುವ ಹಿಂದೂಗಳಿಗೆ ಸರ್ಕಾರ ನೀರು ನೀಡುತ್ತಿಲ್ಲ. ಈ ಮೂಲಕ ಕೇರಳ ಮತ್ತೊಂದು ಕಾಶ್ಮೀರವಾಗಲು ಹೊರಟಿದೆ ಎಂದು ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ್ದ ಮಲಪ್ಪುರಂನ ಕುಟ್ಟಿಪುರಂ ಪಂಚಾಯತ್​ನ ಕೆಲವು ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಸರಬರಾಜನ್ನು ನಿಲ್ಲಿಸಿದೆ. ಅಲ್ಲಿರುವ ಹಿಂದೂಗಳಿಗೆ ಸೇವಾ ಭಾರತಿ ವತಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದೇವರನಾಡಿನಲ್ಲಿ ಈ ರೀತಿಯ ಭೇದಭಾವ ಎಷ್ಟರ ಮಟ್ಟಿಗೆ ಸರಿ? ಎಂದು ಜ. 22ರಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಟ್ವಿಟ್ಟರ್​ನಲ್ಲಿ ಆರೋಪಿಸಿದ್ದರು.

ಈ ಟ್ವೀಟ್​ ಬಗ್ಗೆ ಸುಪ್ರೀಂ ಕೋರ್ಟ್ ವಕೀಲ ಮತ್ತು ಮಲಪ್ಪುರಂ ನಿವಾಸಿ ಸುಭಾಷ್ ಚಂದ್ರನ್ ಪೊಲೀಸರಿಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಕೇರಳ ಪೊಲೀಸರು ಐಪಿಸಿ ಸೆಕ್ಷನ್ 153 (ಎ) (ಧರ್ಮ, ವರ್ಣದ ಹೆಸರಿನಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಭಾವನೆಯನ್ನು ಉತ್ತೇಜಿಸುವುದು) ಅಡಿಯಲ್ಲಿ ಸಂಸದೆ ಶೋಭಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಕಲಿ ಸುದ್ದಿಯನ್ನು ಆಧರಿಸಿ ಕುಟ್ಟಿಪುರಂ ಬಗ್ಗೆ ಸಂಸದರು ಮಾಡಿದ ಟ್ವೀಟ್ ಧಾರ್ಮಿಕ ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸುಭಾಷ್ ಚಂದ್ರನ್ ದೂರು ನೀಡಿದ್ದರು.

ದೂರನ್ನು ವಿಚಾರಣೆ ಮಾಡಿದ ಕೇರಳ ಸರ್ಕಾರ ಸಂಸದರಾದವರು ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಬಿಟ್ಟು ಸುಳ್ಳು ಮಾಹಿತಿಯನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿde. ಅಲ್ಲದೆ, ಪ್ರಕರಣದ ಸಂಬಂಧ ಕೇರಳ ಪೊಲೀಸರು ಸಂಸದೆ ಶೊಭಾ ಕರಂದ್ಲಾಜೆ ವಿರುದ್ಧ ಕಲಂ 153 (ಎ), 120, ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ, ಸೇರಿದಂತೆ ಹಲವರು ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಕೇರಳ ಸರ್ಕಾರದ ವಿರುದ್ಧ ಶೋಭಾ ಕಿಡಿ

ದಲಿತರ ಪರ ದ್ವನಿ ಎತ್ತಿದರೆ ನನ್ನ ವಿರುದ್ಧವೇ ಮೊಕದ್ದಮೆ ದಾಖಲು ಮಾಡ್ತೀರ?; ಕೇರಳ ಸರ್ಕಾರದ ವಿರುದ್ಧ ಶೋಭಾ ಕಿಡಿಶೋಭಾ ಕರಂದ್ಲಾಜೆ. ಕೇರಳದಲ್ಲಿ ಜನ ಕೇಂದ್ರ ಸರ್ಕಾರದ ಪರ ದ್ವನಿ ಎತ್ತಿದರೆ ಅಂತವರ ವಿರುದ್ಧ ದೇವರ ಸ್ವಂತ ನಾಡಿನಲ್ಲಿ ಶೋಷಣೆ ಮಾಡಲಾಗುತ್ತಿದೆ. ಆದರೆ, ಈ ಕುರಿತು ನಾವು ದ್ವನಿ ಎತ್ತಿದರೆ ನಮ್ಮ ಮೇಲೆಯೇ ಮೊಕದ್ದಮೆ ದಾಖಲು ಮಾಡಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.