ಸಂಸದರ ಸ್ಥಾನಕ್ಕೆ ಪರಿಕ್ಕರ್, ಯೋಗಿ ಇನ್ನು ರಾಜಿನಾಮೆ ನೀಡಿಲ್ಲ ಯಾಕೆ ಗೊತ್ತೆ ಇಲ್ಲಿ ನೋಡಿ..!

0
608

ಯೋಗಿ ಆದಿತ್ಯಾನಾಥ್ ಹಾಗೂ ಮನೋಹರ್ ಪರಿಕ್ಕರ್ ಸಿಎಂ ಆದರೂ ಇನ್ನು ಸಂಸದರ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಟ್ಟಿಲ್ಲ ಗೊತ್ತೇ ಇಲ್ಲಿ ನೋಡಿ ನಾವು ಹೇಳ್ತಿವಿ.

ಈ ಬಾರಿ ಶತಾಯಗತಾಯ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನೇ ರಾಷ್ಟ್ರಪತಿಯಾಗಿ ಆಯ್ಕೆ ಮಾಡಬೇಕು ಎಂದು ಈಗಾಗಲೇ ಕಸರತ್ತು ಆರಂಭಿಸಿರುವ ಬಿಜೆಪಿ ಇದೇ ಕಾರಣಕ್ಕೆ ತನ್ನ ಸಂಸದರಿಗೆ ರಾಜಿನಾಮೆ ನೀಡದಂತೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಗೋವಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರಿನ್ನೂ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ. ಅಂತೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರೂ ಕೂಡ ಸಂಸದರಾಗಿದ್ದು, ಸಿಎಂ ಆದ ಬಳಿಕ ಅವರೂ ರಾಜಿನಾಮೆ ನೀಡಿಲ್ಲ. ಕೇವಲ ಇವರಿಬ್ಬರು ಮಾತ್ರವಲ್ಲದೇ ಉತ್ತರ

ಮನೋಹರ್ ಪರಿಕ್ಕರ್ ಹಾಗೂ ಯೋಗಿ ಆದಿತ್ಯಾನಾಥ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ 6 ತಿಂಗಳ ಅವಧಿಯೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿದೆ.
ಈ ಮೂವರು ನಾಯಕರ ನಡೆ ಹಿಂದೆ ಬಿಜೆಪಿ ಹೈಕಮಾಂಡ್ ನಿಂತಿದ್ದು,

ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತೀಯೊಂದು ಮತಕೂಡ ಮುಖ್ಯಎಂದು ಬಿಜೆಪಿ ಮನಗಂಡಿದೆ. ಇದೇ ಕಾರಣಕ್ಕೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಿಜೆಪಿ ಮತ್ತು ಎನ್ ಡಿಎ ಸದಸ್ಯರಿದ್ದರೂ ಕೂಡ ರಾಷ್ಟ್ರಪತಿ ಚುನಾವಣೆ ಬಳಿಕ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಗಸ್ಟ್ ನಲ್ಲಿ ಉಪ ರಾಷ್ಟ್ರಪತಿ ಆಯ್ಕೆ ನಡೆಯಲಿದೆ.