ಅನೇಕ ಬ್ಯುಸಿನೆಸ್-ಗಳು ಕೋವಿಡ್ ಸಮಯದಲ್ಲಿ ನಷ್ಟ ಅನುಭವಿಸುತ್ತಿದ್ದರೂ, ಜಿಯೋ ಒಡೆಯ ಅಂಬಾನಿ ಈಗ ವಿಶ್ವದ 5ನೇ ದೊಡ್ಡ ಶ್ರೀಮಂತ!!

0
468

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಈಗ ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಅಗ್ರ 5ನೇ ಸ್ಥಾನಕ್ಕೇರಿದ್ದಾರೆ. ಇಷ್ಟೇ ಅಲ್ಲದೆ ವಿಶ್ವದ ಖ್ಯಾತ ಹೂಡಿಕೆದಾರ ಅಮೆರಿಕಾದ ವಾರೆನ್ ಬಫೆಟ್ ಅವರನ್ನೇ ಹಿಂದಿಕ್ಕಿದ್ದಾರೆ.

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರೀಗ ವಿಶ್ವದ 5ನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಮುಕೇಶ್ ಅಂಬಾನಿಯವರ ಸಂಪತ್ತು 68.3 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ. ಒಂದು ಕಾಲದ ನಂಬರ್ 1 ಶ್ರೀಮಂತ ವಾರೆನ್ ಬಫೆಟ್ ಅವರ ಸಂಪತ್ತು 67.9 ಶತಕೋಟಿ ಡಾಲರ್.

ಫೋರ್ಬ್ಸ್ನ ರಿಯಲ್ ಟೈಮ್ ಡೇಟಾದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಸದ್ಯ ಅಂಬಾನಿ ಆಸ್ತಿ 68.3 ಶತಕೋಟಿ ರೂಪಾಯಿ ಆದರೆ, ನಾಲ್ಕನೇ ಸ್ಥಾನದಲ್ಲಿರುವ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಆಸ್ತಿ ಮೌಲ್ಯ 6.63 ಲಕ್ಷ ಕೋಟಿ ರೂಪಾಯಿ ಆಗಿದೆ.

ಬೆರ್ಜ್ಶೈರ್ ಹಾತ್ವೇ ಇಂಕ್ ಷೇರುಗಳು ಮೌಲ್ಯ ಕಳೆದುಕೊಳ್ಳಲು ಆರಂಭಿಸಿದ್ದವು. ಈ ಬೆನ್ನಲ್ಲೇ ವಾರೆನ್ ಭಪೆಟ್ ದೊಡ್ಡ ಪ್ರಮಾಣದ ಷೇರುಗಳನ್ನು ಮಾರಿದ್ದರು. ಈ ಬೆನ್ನಲ್ಲೇ ಭಪೆಟ್ ಆಸ್ತಿ ಮೌಲ್ಯ ಕಡಿಮೆ ಆಗಿತ್ತು. ಹೀಗಾಗಿ ವಾರೆನ್ ಸ್ಥಾನ ಕುಸಿದಿದೆ. ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಶ್ರೀಮಂತರ ಸಾಲಿನಲ್ಲಿ ಮೊದಲಿದ್ದಾರೆ. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿದ್ದಾರೆ. LVMH ಸಂಸ್ಥೆಯ ಒಡೆಯ ಬರ್ನಾಟ್ ಅರ್ನಾಡ್ ಮೂರನೇ ಸ್ಥಾನದಲ್ಲಿದ್ದರೆ, ಫೇಸ್ಬುಕ್ ಸ್ಥಾಪಕ ಮಾರ್ಕ್ ಜುಕರ್ಬರ್ಗ್ ನಾಲ್ಕನೇ ಸ್ಥಾನದಲ್ಲಿ ಹಾಗೂ ಅಂಬಾನಿ ಐದನೇ ಸ್ಥಾನದಲ್ಲಿದ್ದಾರೆ.

ಸತತವಾಗಿ ಜಿಯೋ ಸಂಸ್ಥೆಯ ಮೇಲೆ ಹೂಡಿಕೆ ಆದ ಬೆನ್ನಲ್ಲೇ ರಿಲಾಯನ್ಸ್ ಷೇರುಗಳ ಮೌಲ್ಯ ದ್ವಿಗುಣವಾಗಿದೆ. ಹೀಗಾಗಿ ಅಂಬಾನಿ ಆಸ್ತಿ ಮೌಲ್ಯ ಹೆಚ್ಚಿದೆ. ಈ ಮೊದಲು ಅಂಬಾನಿ ವಿಶ್ವದ ಏಳನೇ ಶ್ರೀಮಂತರಾಗಿದ್ದರು. ಇತ್ತೀಚೆಗೆ ಅವರು ಆರನೇ ಸ್ಥಾನಕ್ಕೆ ಜಿಗಿದಿದ್ದರು. ಅಂಬಾನಿಯ ನಾಯಕತ್ವದಲ್ಲಿ, ರಿಲಯನ್ಸ್ ತೈಲ ಮತ್ತು ಇಂಧನ ಕಂಪನಿಯಿಂದ ಚಿಲ್ಲರೆ ಅಂಗಡಿಗಳು, ಮೊಬೈಲ್ ಮತ್ತು ಬ್ರಾಡ್ಬ್ಯಾಂಡ್ ವಾಹಕ, ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುವ ವಿಸ್ತಾರವಾದ ಸಂಘಟನೆಯಾಗಿ ಬೆಳೆದಿದೆ.