ಮುಂಬೈನ ಸ್ಪೆಷಲ್ “ತವಾ ಪುಲಾವ್” ಮಾಡುವ ಸಿಂಪಲ್ ವಿಧಾನ ನಿಮಗಾಗಿ..!

0
1176

ಮುಂಬೈ ಎಂದಕೂಡಲೇ ನೆನಪಾಗುವದು ಅಲ್ಲಿಯ ಸ್ಟ್ರೀಟ್ ಫುಡ್. ಪಾವ್ ಭಾಜಿ, ವಡಾಪಾವ್, ಪಾನಿ ಪುರಿ, ಮೀಸಲ ಪಾವ್, ಕುಲ್ಫಿ ಹೀಗೆ ಹತ್ತು ಹಲವು ಬಗೆಯ ಸ್ಟ್ರೀಟ್ ಪುಡ್ ತಿಂಡಿಗಳು ತುಂಬಾ ಜನಪ್ರೀಯವಾದುದ್ದು, ಇಂತಹದೇ ಒಂದು ಮುಂಬೈ ನ ಸ್ಪೆಷಲ್ ಪುಲಾವ್ ಈ “ತವಾ ಪುಲಾವ್”. ಇದನ್ನು ಮಾಡುವ ಸಿಂಪಲ್ ವಿಧಾನ ನಿಮಗಾಗಿ.

Also read: ಆರೋಗ್ಯಕ್ಕೆ ತುಂಬಾ ಒಳ್ಳೆಯದಾದ ಹಾಗೂ ರುಚಿಕರವಾದ ಬಾಳೇಕಾಯಿ ಪಲ್ಯ ಮಾಡೋ ವಿಧಾನ !

ಬೇಕಾಗುವ ಸಾಮಗ್ರಿಗಳು:

 • 1 ಕಪ್ ಬಾಸ್ಮತಿ ಅಕ್ಕಿ
 • ¼ ಟೀಸ್ಪೂನ್ ಅರಿಶಿನ
 • 1 ಟೀಸ್ಪೂನ್ ಎಣ್ಣೆ
 • 2 ಟೀಸ್ಪೂನ್ ಬೆಣ್ಣೆ
 • 1 ಟೀಸ್ಪೂನ್ ಜೀರಿಗೆ
 • ½ ಈರುಳ್ಳಿ
 • 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
 • 1 ಕ್ಯಾರೆಟ್
 • 2 ಕ್ಯಾಪ್ಸಿಕಂ
 • ಸ್ವಲ್ಪ ಅವರೆಕಾಳು
 • ಸ್ವಲ್ಪ ಬೀನ್ಸ್
 • ರುಚಿಗೆ ತಕ್ಕಷ್ಟು ಉಪ್ಪು
 • 2 ನುಣ್ಣಗೆ ಕತ್ತರಿಸಿದ ಮಾಟ
 • 2¼ ಟೀಸ್ಪೂನ್ ಪಾವ್ ಬಾಜಿ ಮಸಾಲಾ
 • ¼ ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
 • 1 ಆಲೂಗಡ್ಡೆ ಬೇಯಿಸಿದ
 • ಸ್ವಲ್ಪ ಕೊತ್ತಂಬರಿ ಸೊಪ್ಪು
 • 1 ಟೀ ಸ್ಪೂನ್ ನಿಂಬೆ ರಸ

Also read: ನಿಮ್ಮ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲ ಎಂಬ ಚಿಂತೆ ಬಿಟ್ಟು.. ರಾಗಿ-ಅಕ್ಕಿ ದೋಸೆ ಮಾಡಿ ಕೊಡಿ..!!!

ಮಾಡುವ ವಿಧಾನ:

 • ಮೊದಲಿಗೆ, 1 ಕಪ್ ಬಾಸ್ಮತಿ ಅಕ್ಕಿಯನ್ನು 20 ನಿಮಿಷಗಳ ಕಾಲ ನೆನೆಯಲು ಬಿಡಿ.
 • ಈಗ ದೊಡ್ಡ ಪಾತ್ರೆಯಲ್ಲಿ 6 ಕಪ್ ನೀರನ್ನು ಹಾಕಿ ಅದಕ್ಕೆ ¼ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಎಣ್ಣೆ ಮತ್ತು ½ ಟೀಸ್ಪೂನ್ ಉಪ್ಪುನ್ನು ಹಾಕಿ ಕುದಿಯಲು ಬಿಡಿ.
 • ನಂತರ ನೆನೆಸಿಟ್ಟ ಅಕ್ಕಿಯನ್ನು ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 13 ನಿಮಿಷಗಳ ಕಾಲ ಬೇಯಲು ಬಿಡಿ.
 • ಬೆಂದ ಅಕ್ಕಿಯನ್ನು ನೀರಿನಿಂದ ಬೇರ್ಪಡಿಸಿ ತದನಂತರ ಒಂದು ಕಪ್ ತಣ್ಣನೆಯ ನೀರಿನಿಂದ ಬೆಂದ ಅನ್ನವನ್ನು ತಣ್ಣಗಾಗಲು ಬಿಡಿ.
 • ಈಗ ಒಂದು ಪತ್ರೆಗೆ 2 ಟೀಸ್ಪೂನ್ ಬೆಣ್ಣೆ ಹಾಕಿ ಅದಕ್ಕೆ 1 ಟೀಸ್ಪೂನ್ ಜೀರಿಗೆ ಮತ್ತು ಉದ್ದನೆಯದಾಗಿ ಕತ್ತರಿಸಿದ ½ ಈರುಳ್ಳಿಯನ್ನು ಹಾಕಿ ಈಗ ಅದಕ್ಕೆ 1 ಟೀಸ್ಪೂನ್ ಶುಂಠಿಯ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
 • ಇದಕ್ಕೆ ಬೇಯಿಸಿದ ತರಕಾರಿಯನ್ನು (1 ಕ್ಯಾರೆಟ್, 2 ಟೀಸ್ಪೂನ್ ಕ್ಯಾಪ್ಸಿಕಂ, 2 ಟೀಸ್ಪೂನ್ ಬಟಾಣಿ, ಮತ್ತು ಬೀನ್ಸ್ ಅನ್ನು ಮೊದಲೇ ಬೇಯಿಸಿ ಇಟ್ಟುಕೊಳ್ಳಿ) ಹಾಕಿ ಬೇಯಿಸಿ.
 • ಈಗ ಇದಕ್ಕೆ ಸಣ್ಣಗೆ ಹೆಚ್ಚಿಕೊಂಡಿರುವ ಟೊಮ್ಯಾಟೊ ಸೇರಿಸಿ ಮತ್ತು ಟೊಮೆಟೊ ಮೃದು ಬರುವ ತನಕ ಬೇಯಿಸಿಕೊಳ್ಳಿ.

 • ಈಗ ಇದಕ್ಕೆ 2 ಟೀಸ್ಪೂನ್ ಪಾವ್ ಬಾಜಿ ಮಸಾಲಾ ಮತ್ತು ¼ ಟೀಸ್ಪೂನ್ ಮೆಣಸಿನ ಪುಡಿ ಸೇರಿಸಿ. ಮಸಾಲಾ ಪೇಸ್ಟ್ ನಿಂದ ಎಣ್ಣೆ ಬಿಡುವವರೆಗೂ ಚೆನ್ನಾಗಿ ಮಸಲವನ್ನು ಸಣ್ಣನೆಯ ಉರಿಯಲ್ಲಿ ಬೇಯಿಸುತ್ತಿರಿ.
 • ಈಗ ಇದಕ್ಕೆ ಬೇಯಿಸಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 • ಈಗ ಮೊದಲೇ ಬೇಯಿಸಿ ಇಟ್ಟುಕೊಂಡಿರುವ ಅನ್ನವನ್ನು ತಯಾರಿಸಿದ ಮಸಾಲೆಗೆ ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
 • ಕೊನೆಯದಾಗಿ ಮಿಶ್ರಣಕ್ಕೆ ಸಣ್ಣದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಮತ್ತು 1 ಟೀಸ್ಪೂನ್ ನಿಂಬೆ ರಸ ಹಾಕಿ ಚೆನ್ನಾಗಿ ಬೆರೆಸಿ.
 • ಈಗ ಮುಂಬೈ ನ ಸ್ಪೆಷಲ್ ಪುಲಾವ್ “ತವಾ ಪುಲಾವ್” ಸವಿಯಲು ಸಿದ್ದ.