1. ಮೋಮಾ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್
ಆಧುನಿಕ ಕಲೆಯ ಪ್ರೇಮಿಗಳಿಗೆ ಇಷ್ಟವಾಗುವ ತಾಣ ಈ ಮ್ಯೂಸಿಯಂ. ಮೋಮಾ ಮ್ಯೂಸಿಯಂ ನ್ಯೂಯಾರ್ಕ್ನಲ್ಲಷ್ಟೇ ಅಲ್ಲ ವಿಶ್ವದಲ್ಲೇ ಪ್ರಖ್ಯಾತವಾಗಿದೆ. ಆಧುನಿಕ ಕಲೆಯ ಅದ್ಭುತ ಪ್ರದರ್ಶನ ಇಲ್ಲಿದೆ. ಜೊತೆಗೆ ಅದ್ಭುತ ರೆಸ್ಟಾರೆಂಟ್, ಕೋಜಿû ಕೆಫೆ ಹಾಗೂ ಅತ್ಯುತ್ತಮ ಅಂಗಡಿಗಳೂ ಇವೆ.
2. ಮೆಟ್ರೋಪಾಲಿಟನ್ ಮ್ಯೂಸಿಯಂ
ಇದು ಉತ್ತಮ ಮ್ಯೂಸಿಯಂ ಅಷ್ಟೇ ಅಲ್ಲ ನ್ಯೂಯಾರ್ಕ್ನ ಆಕರ್ಷಕ ತಾಣವೂ ಹೌದು. ಹತ್ತೊಂಬತ್ತು ವಿವಿಧ ವಿಭಾಗಗಳಿದ್ದು, 2 ಮಿಲಿಯನ್ ಕಲಾಕೃತಿಗಳು ಇಲ್ಲುಂಟು. ಸದಾ ಕಾಲ ಇವನ್ನು ವೀಕ್ಷಿಸಬಹುದಾಗಿದ್ದು ಯುರೋಪಿನ ಮಾಸ್ಟರ್ಸ್, ಪ್ರಾಚೀನ ಈಜಿಪ್ಟ್, ಪುರಾತನ ಹಾಗೂ ಸಮಕಾಲೀನ ಅಮೆರಿಕದ ಕಲಾಕೃತಿಗಳನ್ನು ಇಲ್ಲಿ ನೋಡಬಹುದಾಗಿದೆ.
3. ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ
ಜೀವಿತಾವಧಿಯಲ್ಲಿ ಒಮ್ಮೆ ನೋಡಲೇಬೇಕಾದ ಮ್ಯೂಸಿಯಂ ಇದು. ಇತಿಹಾಸದಲ್ಲಿ ಆಸಕ್ತಿ ಇಲ್ಲದವರಿಗೂ ಆಸಕ್ತಿ ಹುಟ್ಟಿಸುವ ತಾಣ, 124 ಮಿಲಿಯನ್ ವಸ್ತುಗಳು, ಅದ್ಭುತವೆನಿಸುವ ವಿಷಯಗಳು ಇಲ್ಲಿವೆ. ಅಮೆರಿಕನ್ ನ್ಯಾಚುರಲ್ ಹಿಸ್ಟರಿಯ ಪರಿಸರದಲ್ಲಿ ಇಡೀ ದಿನ ಕಳೆದರೂ ಸಾಲದು ಎಂಬಷ್ಟು ವಿಶೇಷತೆಗಳಿವೆ.
4. ಸೊಲೋಮನ್ ಆರ್.ಗಗೇನ್ಹೀಮ್ ಮ್ಯೂಸಿಯಂ
ಹಲವು ವಿಶೇಷತೆಗಳಿಗೆ ಈ ಮ್ಯೂಸಿಯಂ ಹೆಸರುವಾಸಿಯಾಗಿದೆ. ಅಮೆರಿಕದ ಪ್ರಖ್ಯಾತ ಡಿಸೈನರ್ ಫ್ರಾಂಕ್ ಲಾಯ್ಡ್ ಇದರ ವಿನ್ಯಾಸಗಾರ. 20-21ನೇ ಶತಮಾನದ ಪ್ರಖ್ಯಾತ ಕಲಾವಿದರ ಕೃತಿಗಳ ಜೊತೆಗೆ ಸಮಕಾಲೀನ ಕಲಾಕೃತಿಗಳೂ ಇವೆ.
5. ನ್ಯೂ ಮ್ಯೂಸಿಯಂ
ಈ ಮ್ಯೂಸಿಯಂನ ವಿನ್ಯಾಸವೇ ಅದ್ಭುತ. ವಿಶ್ವದೆಲ್ಲೆಡೆಯ ಕಲಾವಿದರ ಆಧುನಿಕ ಕಲಾಕೃತಿಗಳು ಇಲ್ಲಿವೆ. ಚಿಲಿಯಿಂದ ಚೀನಾದವರೆಗಿನ ಎಲ್ಲ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ಇಲ್ಲಿ ಅವಕಾಶವಿದೆ.
6.ಫ್ರಿಕ್ ಕಲಕ್ಷನ್
ಇದೊಂದು ಅತ್ಯುತ್ತಮ ಮ್ಯೂಸಿಯಂ ಎಂದು ಅಮೆರಿಕ ಮತ್ತು ವಿಶ್ವದಲ್ಲಿ ಗುರುತಿಸಲ್ಪಟ್ಟಿದೆ. ಹಳೆಯ ಕಲಾ ದಿಗ್ಗಜರ ಕೃತಿಗಳು, ಓರಿಯಂಟಲ್ ರಗ್ಗುಗಳು, ಫ್ರೆಂಚ್ ಪೀಠೋಪಕರಣ, ನಿಗೂಢ ಶಿಲ್ಪಗಳು, ಅದ್ಭುತ-ಅನನ್ಯ ಕಲಾಕೃತಿಗಳು ಇವೆ. ಕೆಲವೊಮ್ಮೆ ಸಂಗೀತ ಕಛೇರಿಗಳನ್ನೂ ಏರ್ಪಡಿಸಲಾಗುತ್ತದೆ.
7. ಮ್ಯೂಸಿಯಂ ಆಫ್ ಆಟ್ರ್ಸ್ ಅಂಡ್ ಡಿಸೈನ್
ಅಮೆರಿಕದ ಶ್ರೇಷ್ಠ ಕಲಾವಿದರ ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳು ಇಲ್ಲಿವೆ. ವಸ್ತುಸಂಗ್ರಹಾಲಯಗಳ ಕುರಿತು ಅಭಿರುಚಿ ಹುಟ್ಟಿಸುವ ಅನೇಕ ಆಸಕ್ತಿದಾಯಕ ವಿಷಯಗಳು ಇಲ್ಲಿವೆ.