ಇಂದೇ ಜರುಗುವ ಮೈಸೂರು ದಸರಾ ಜಂಬೂಸವಾರಿಗೆ: ಏನೆಲ್ಲಾ ಸಿದ್ದತೆಗಳಾಗಿವೆ ನೋಡಿ..

0
547

ಅರ್ಜುನ ನೇತೃತ್ವದ ಆರು ಆನೆಗಳು ವಿಜೃಂಭಣೆಯ ಗಜಪಯಣದಲ್ಲಿ ಮೈಸೂರಿನ ಅರಮನೆ ಆವರಣದ ಅಂಬಾರಿ ಹೊರಲು ಮಾನಸಿಕವಾಗಿ ಸಿದ್ಧಗೊಂಡಿದು ನಾನಾ ಬಗೆಯ ತಾಲೀಮನ್ನು ಪಡೆದು ಮೆರವಣಿಗೆಯಲ್ಲಿ ದಸರೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಯಶಸ್ವಿಗೊಳಿಸಲು ಚಿನ್ನದ ಅಂಬಾರಿ ಹೊರುವ ಅರ್ಜುನ ನೇತೃತ್ವದ ಹನ್ನೆರಡು ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳಲಿವೆ.


Also read: ಇಂದೇ ಜರುಗುವ ಮೈಸೂರು ದಸರಾ ಜಂಬೂಸವಾರಿಗೆ : ಏನೆಲ್ಲಾ ಸಿದ್ದತೆಗಳಾಗಿವೆ ನೋಡಿ..

3.40 ರಿಂದ 4.10 ರೊಳಗಿನ ಶುಭ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಕ್ಯಾಪ್ಟನ್ ಅರ್ಜುನ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ಸಿಗಲಿದೆ. ಮೆರವಣಿಗೆಯಲ್ಲಿ ಹಾರಿಸುವ ಕುಶಲತೋಪುಗಳ ಶಬ್ದಕ್ಕೆ ಆನೆಗಳು ಬೆದರದಿರಲಿ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಕುಶಲ ತೋಪುಗಳನ್ನು ಇಟ್ಟು ಸಿಡಿಮದ್ದು ತಾಲೀಮು ಪಡೆದುಕೊಂಡಿವೆ. ಈ ರೀತಿ 3-4 ಬಾರಿ ಆನೆಗಳಿಗೆ ಸಿಡಿಮದ್ದಿನ ತಾಲೀಮು ನಡೆಸಲಾಗಿದೆ. ಅಲ್ಲದೆ ಮರದ ಅಂಬಾರಿಯನ್ನು ಕ್ರೇನ್‌ ಸಹಾಯದಿಂದ ಅರ್ಜುನನಿಗೆ ಕಟ್ಟಿ ಅಂಬಾರಿ ಹೊರುವ ತಾಲೀಮು, ಇದಲ್ಲದೆ ಉದ್ಘಾಟನೆಯಲ್ಲಿ ಯಾವ ಆನೆ ಎಲ್ಲಿ ಇರಬೇಕು, ಎಲ್ಲಿ ತಿರುವು ಪಡೆದುಕೊಳ್ಳಬೇಕು, ಗಣ್ಯರಿಗೆ ನಮಸ್ಕರಿಸುವುದು, ಪುಷ್ಪಾರ್ಚನೆ ಸೇರಿದಂತೆ ಒಟ್ಟಾರೆ ಜಂಬೂ ಸವಾರಿ ಉದ್ಘಾಟನೆಯ ಆನೆಗಳ ಚಟುವಟಿಕೆ ಹೇಗಿರಬೇಕು ಎಂಬುದರ ಬಗ್ಗೆ ಅರಮನೆ ಆವರಣದಲ್ಲಿ ಮೂರು ದಿನಗಳಿಂದ ಅಂತಿಮ ಹಂತದ ತಾಲೀಮು ಪಡೆದುಕೊಂಡಿವೆ.


Also read: ವಿಜಯದಶಮಿಯಂದು ಪೂಜಿಸುವ ಬನ್ನಿಯ ಮಹತ್ವ; ಬನ್ನಿಯ ಜನ್ಮ: ಮತ್ತು ಶಮಿ ವೃಕ್ಷದ ಪೌರಾಣಿಕ ಹಿನ್ನೆಲೆ..

ನಿಶಾನೆ ಆನೆಯಾದ ಬಲರಾಮ, ನೌಫೌತ್‌ ಆನೆ ಅಭಿಮನ್ಯು, ಸಾಲಾನೆಗಳಾದ ವಿಜಯ, ಪ್ರಶಾಂತ, ಧನಂಜಯ ಆನೆಗಳು ಮೆರವಣಿಗೆಯಲ್ಲಿ ಹೊರಡುತ್ತವೆ. ನಂತರ ಕಲಾ ತಂಡ, ಸ್ತಬ್ದಚಿತ್ರಗಳು ಹಾಗೂ ಪೊಲೀಸ್‌ ದಳಗಳು ಸಾಗುತ್ತವೆ. ಬಳಿಕ ದ್ರೋಣ, ಚೈತ್ರ, ಗೋಪಿ ಮತ್ತು ಪಟ್ಟದ ಆನೆಯಾದ ವಿಕ್ರಮ ಆನೆ ಹೊರಡುತ್ತದೆ. ಕಡೇದಾಗಿ ಅರ್ಜುನ ಚಿನ್ನದ ಅಂಬಾರಿ ಹೊತ್ತು ಬರುತ್ತಾನೆ. ಕುಮ್ಕಿ ಆನೆಗಳಾಗಿ ಆತನ ಎಡಭಾಗದಲ್ಲಿ ವರಲಕ್ಷ್ಮಿ, ಬಲಭಾಗದಲ್ಲಿ ಕಾವೇರಿ ಬರುತ್ತಾರೆ.

ಜಂಬೂ ಸವಾರಿಯಲ್ಲಿ ಸ್ತಬ್ದಚಿತ್ರಗಳು:

ವಿಜಯದಶಮಿ ಮೆರವಣಿಗೆಯು ಅ.19ರಂದು ನಡೆಯಲಿದೆ. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ‘ಕಾನೂನು ಸೇವೆಗಳು’, ಎನ್‌ಸಿಸಿಯ ‘ಪ್ರವಾಹ ಸಂತ್ರಸ್ತರಿಗೆ ನೆರವು ಮತ್ತು ಕ್ರೀಡೆಗಳು’, ಉನ್ನತ ಶಿಕ್ಷಣ ಇಲಾಖೆಯ ‘ವಿಶ್ವವಿದ್ಯಾನಿಲಯಗಳು ನಡೆದು ಬಂದ ದಾರಿ’, ಮೈಸೂರು ಜಿಲ್ಲಾ ಸ್ವೀಪ್‌ ಸಮಿತಿಯ ‘ನಮ್ಮ ಮತ ನಮ್ಮ ಹಕ್ಕು’ ಸ್ತಬ್ದಚಿತ್ರಗಳು ಇದೇ ಮೊದಲ ಬಾರಿಗೆ ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ.

ದಸರೆಗೆ ಡ್ರೋನ್‌ ಕಣ್ಗಾವಲು:


Also read: ನವರಾತ್ರಿ ಹಬ್ಬದ ದಿನ ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಕುಬೇರರಾಗುತ್ತಿರ…

ಭದ್ರತೆಗೆ ಐದು ಸಾವಿರಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಜಂಬೂ ಸವಾರಿ ಮೆರವಣಿಗೆ ಸಾಗುವ ‘ರಾಜಪಥ’ದ ಹೆಜ್ಜೆ ಹೆಜ್ಜೆಗೂ ಪೊಲೀಸ್‌ ಸರ್ಪಗಾವಲಿನೊಂದಿಗೆ ಡ್ರೋನ್‌, ಸಿಸಿ ಟಿವಿ ಕ್ಯಾಮರಾದ ಮೂಲಕ ಹದ್ದಿನ ಕಣ್ಣಿಡಲಾಗುತ್ತಿದೆ. ಇಷ್ಟೆಲ್ಲಾ ಬದ್ರತೆಯಲ್ಲಿ 3.40 ರಿಂದ 4.10 ರೊಳಗಿನ ಶುಭ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಆರಂಭವಾಗಲಿದ್ದು, ಕ್ಯಾಪ್ಟನ್ ಅರ್ಜುನ ಚಿನ್ನದ ಅಂಬಾರಿ ಹೊರಲಿದ್ದಾನೆ.