ಮೈಸೂರು ಅರಮನೆಯ ರೋಚಕ ದೀಪಗಳ ಹಿಂದಿನ ಕಥೆ …

0
1141

 ನಕ್ಷತ್ರ ಲೋಕದೊಳಗೆ ಬಂಗಾರದ ಅರಮನೆ!!!

ಈ ವಿಡಿಯೋ ನೋಡಿ ಚಾಮುಂಡಿಬೆಟ್ಟದ ಮೇಲಿಂದ ರಾತ್ರಿ ಬೆಳಗುವ ಮೈಸೂರು ನಗರ ಕಂಡದ್ದು ಹೀಗೆ. ನಿಮ್ಮನು ಒಂದು ಹೊಸ ಲೋಕಕ್ಕೆ ಕರೆದೊಯುತ್ತದೆ.

ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಚಾಮುಂಡಿಬೆಟ್ಟದ ಮೇಲಿಂದ ರಾತ್ರಿ ಬೆಳಗುವ ಮೈಸೂರು ನಗರ ನೋಡಲು ತುಂಬಾ ಸುಂದರ.

ಎಲ್ಲರೂ ಮೈಸೂರಿನ ಅರಮನೆಯನ್ನು ಹತ್ತಿರ ದಿಂದ ನೋಡಿರುತ್ತಾರೆ. ಆದರೆ ಅದೇ ಅರಮನೆಯನ್ನು ಚಾಮುಂಡಿ ಬೆಟ್ಟದ ಮೇಲಿಂದ ರಾತ್ರಿ ವೇಳೆ ನೋಡುವ ಮಜವೇ ಬೇರೆ. ರಾತ್ರಿವೇಳೆಯಲ್ಲಿ ದೀಪಗಳ ಚಿತ್ತಾರದಲ್ಲಿ ಮಿನುಗುವ ಅರಮನೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ. ಒಟ್ಟು ಅರಮನೆ ಮೇಲೆ ಅಳವಡಿಸಿರುವ 1 ಲಕ್ಷ ದೀಪಗಳು ರಾತ್ರಿ ಒಮ್ಮೆಲೇ ಹೊತ್ತಿಕೊಂಡ ಉರಿಯುತ್ತವೆ. ವಿದ್ಯುತ್‌ ಉಳಿಸುವ ಸಲುವಾಗಿ ನಿತ್ಯ ಮೂರು ನಿಮಿಷ ಮಾತ್ರ ಅರಮನೆಯನ್ನು ಬೆಳಗಿಸಲಾಗುತ್ತಿದೆ. ನವರಾತ್ರಿಗಳಲ್ಲಿ ಅದು ಎರಡು ಗಂಟೆಗಳವರೆಗೆ (ರಾತ್ರಿ 7 ರಿಂದ 9) ಉರಿಯುತ್ತವೆ.

ನವರಾತ್ರಿ ಆರಂಭವಾಗಿದೆ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆದರೆ, ಆ ನಂತರ ವಿಜಯದಶಮಿಯಂದು ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿದು ಬಿಡುತ್ತದೆ. ಈ ಹತ್ತು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿವೆಯಲ್ಲ, ಅವು ದಸರಾಕ್ಕೆ ಮೆರುಗು ನೀಡುತ್ತವೆ.

ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ಹೀಗೆ ವಿವಿಧ ಕಾರ್ಯಕ್ರಮಗಳು ನಡೆದರೆ, ದಸರಾ ಪ್ರಯುಕ್ತ ಕೆಲವು ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತವೆ.