ಶ್ರೀವಿಷ್ಣುವು ಸರ್ಪವನ್ನು ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡಿರುವುದರ ಹಿನ್ನಲೆ ಗೊತ್ತಗ್ಬೇಕಾದ್ರೆ ಈ ಆರ್ಟಿಕಲ್ ಓದಿ..!

0
4701

Kannada News | Karnataka Temple History

ಶ್ರೀಮಹಾವಿಷ್ಣು ಹಾಗೂ ಆದಿಶೇಷನ ನಂಟು ತಿಳುದು ದೇವನು ದೇವತೆಗಳ ಕೃಪೆಗೆ ಪಾತ್ರರಾಗಿ..

ಧರ್ಮಸಂಸ್ಥಾಪಕ ಶ್ರೀ ಮಹಾವಿಷ್ಣು ಶೇಷಶಯನನ ಮೇಲೆ ಮಲಗಿರುವ ಅವನ ಪಾದಗಳ ಬಳಿ ಲಕ್ಷ್ಮಿಮಾತೆ, ನಾಭಿಯಲ್ಲಿ ಬ್ರಹ್ಮ ಇರುತ್ತಾನೆ. ಹಿಂದೂಧರ್ಮದಲ್ಲಿ ಈ ಮಹಾ ಸರ್ಪವನ್ನು ಶೇಷನಾಗ ಎಂದು ಕರೆಯಲಾಗಿದೆ. ವಿಷ್ಣುವು ಶೇಷನಾಗನ ಮೇಲೆಯೇ ಪವಡಿಸಿದ್ದು ಸರ್ಪದ ಐದು ತಲೆಗಳನ್ನು ವಿಷ್ಣುವಿನ ತಲೆಯ ಮೇಲೆ ನಿಮಗೆ ಕಾಣಬಹುದಾಗಿದೆ. ಆದ್ದರಿಂದಲೇ ವಿಷ್ಣುವು ಸರ್ಪದ ಮೇಲೆ ಪವಡಿಸಿರುವುದರಿಂದ ಹಿಂದೂ ಧರ್ಮದಲ್ಲಿ ಇದನ್ನು ದೇವ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.

ಶ್ರೀ ಮಹಾವಿಷ್ಣು ಶಂಖಚಕ್ರಧರನಾಗಿ ಅನಂತನ ಮೇಲೆ ಮಲಗಿರುತ್ತಾನೆ. ಹಾಗಾಗಿ ಅನಂತಶಯನ ಎಂಬ ಹೆಸರೂ ಮಹಾವಿಷ್ಣುವಿಗಿದೆ. ಹೀಗೆ ವಿಷ್ಣುವು ಅನಂತ (ಶೇಷನಾಗನ) ಮೇಲೆ ಯಾಕೆ ಮಲಗಿರುತ್ತಾನೆ….? ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದುಬರುತ್ತೇನೆ ಎಂದು ಶ್ರೀಕೃಷ್ಣಭಗವದ್ಗೀತೆಯಲ್ಲಿ ಉಲ್ಲೇಖವಿದೆ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಭೂಮಿ ಮೇಲೆ ಅವತರಿಸಿದ್ದಾಗಿ ಹೇಳುತ್ತಾರೆ. ಗರುಡ ವಾಹನದ ಮೇಲೆ ಸಂಚರಿಸುವ ವಿಷ್ಣು, ಅನಂತವಿನ ನಡುವಿನ ಅನುಬಂಧ ಬಿಡಿಸಲಾಗದ್ದು.

ಇದಕ್ಕೆ ಅನುಗುಣವಾಗುವಂತೆ ಸೂಕ್ತ ಕಾರಣಗಳು ಇಲ್ಲಿದೆ ನೋಡಿ.

  • ಶ್ರೀಹರಿ ಮತ್ತೊಂದು ಅವತಾರ ಎಂದೇ ಶೇಷಶಯನನ್ನು ಪರಿಗಣಿಸುತ್ತಾರೆ. ಹಿಂದೂ ಧರ್ಮದ ಪ್ರಕಾರ ಶೇಷನಾಗ ಮಾಹಾವಿಷ್ಣುವಿನ ಒಂದು ಶಕ್ತಿ. ಹಾಗಾಗಿ ವಿಷ್ಣುವು ತನ್ನ ಶಕ್ತಿಯ ಮೇಲೆಯೇ ಮಲಗಿರುತ್ತಾನೆ.
  • ಜಗತ್ತು ಪಾಪ ಸಮುದ್ರದಲ್ಲಿ ಮುಳುಗಿದಾಗ ಅದನ್ನು ಪುನಃಸ್ಥಾಪಿಸಲು ಮಹಾವಿಷ್ಣುವು ಮತ್ತೆ ಜನಿಸುತ್ತಾನೆಂದು ಹೇಳಲಾಗುತ್ತದೆ. ಶೇಷನಾಗ ‘ಅನಂತ’ಕ್ಕೆ ಸೂಚನೆ. ಅನಂತ ಎಂದರೆ ಕೊನೆಯಿಲ್ಲದ್ದು. ಮಾನವಕೋಟಿ ಅಸ್ತಿತ್ವದಲ್ಲಿರಲು ಅನುಕೂಲವಾಗಿರುವಂತೆ ಕಾಲಕ್ಕೆ ನಾರಾಯಣನು ಆದೇಶಿಸುತ್ತಾನೆ. ಹಾಗಾಗಿ, ಆತ ಶೇಷಶಯನ ಮೇಲೆ ಮಲಗುತ್ತಾನೆ.
  • ಶೇಷನಾಗ ನವಗ್ರಹಗಳನ್ನು ಹೊಂದಿದ್ದು ವಿಷ್ಣುಮೂರ್ತಿಯನ್ನು ಆರಾಧಿಸುವ ಭಕ್ತ. ಈ ಜಗತ್ತನ್ನು ಸಂರಕ್ಷಿಸಲು ಮಹಾವಿಷ್ಣುವು ನವಗ್ರಹಗಳಿಗೆ ನಿಲಯವಾದ ಶೇಷನಾಗನ ಮೇಲೆ ಮಲಗುತ್ತಾನಂತೆ. ಇದು ಕೇವಲ ಹಾಸಿಗೆಯಷ್ಟೇ ಅಲ್ಲ ರಕ್ಷಣೆಯಾಗಿಯೂ ಇರುತ್ತದೆ.

  • ವಿಷ್ಣುವಿನ ಅವತಾರವಾದ ಕೃಷ್ಣನು ದೇವಕಿ ಮತ್ತು ವಸುದೇವರ ಪುತ್ರನಾಗಿ ಬಿರುಗಾಳಿಯಿಂದ ಕೂಡಿದ ರಾತ್ರಿಯಲ್ಲಿ ಜನ್ಮತಾಳುತ್ತಾರನೆ. ವಸುದೇವನು ಮಗುವನ್ನು ಭೀಕರ ಮಳೆಯಲ್ಲಿ ಹೊತ್ತೊಯ್ಯುತ್ತಿದ್ದಾಗ ಎದುರಾದ ಚಂಡಮಾರುತದಿಂದ ಶೇಷಶಯನವೇ ರಕ್ಷಿಸುತ್ತದೆ.
  • ತ್ರೇತಾಯುಗದಲ್ಲಿ ಲಕ್ಷ್ಮಣನಾಗಿ, ದ್ವಾಪರ ಯುಗದಲ್ಲಿ ಬಲರಾಮನಾಗಿ ಅವತರಿಸಿತು. ಈ ಎರಡು ಅವತಾರಗಳಲ್ಲೂ ಶ್ರೀಹರಿಗೆ ಸಹಾಯ ಮಾಡಿತೆಂದು ಪುರಾಣಗಳು ತಿಳಿಸಿವೆ.
  • ‘ಶೇಷ’ ಎಂದರೆ ಮಿಕ್ಕಿರುವುದು ಮತ್ತು ಸರ್ಪ ಸಮಯಕ್ಕೆ ಸೂಚನೆ. ಶೇಷಶಯನದ ಮೇಲೆ ಮಹಾವಿಷ್ಣುವು ಮಲಗುತ್ತಾನೆಂದರೆ ಯಾವುದಕ್ಕೂ ಅತೀತವಾಗದೆ ಸಮಯವನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿದ್ದಾನೆಂದು ಅರ್ಥ.
  • ವಿಷ್ಣು ಶೇಷಶಯನ ಮೇಲೆ ಮಲಗಲು ಇಷ್ಟೆಲ್ಲಾ ಪ್ರಾಮುಖ್ಯತೆ ಇರುವುದರಿಂದಲೇ ವಿಷ್ಣುವು ಅನಂತ (ಶೇಷನಾಗನ) ಮೇಲೆ ಯಾಕೆ ಮಲಗಿರುತ್ತಾನೆ ಎಂದು ಹಿಂದೂ ಧರ್ಮಗ್ರಂಥದಲ್ಲಿ ಉಲ್ಲೇಖವಿದೆ.

Also read: ಶಿವಲಿಂಗದ ಮೇಲೆ ನೀರಿನ ಧಾರೆಯನ್ನು ಯಾಕೆ ಹರಿಯ ಬಿಡುತ್ತಾರೆ..?