ಈ ದೇವಾಲಯಕ್ಕೆ ಬಂದು ನರಸಿಂಹ ಸ್ವಾಮಿಯ ಮೂಲ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಸಕಲ ಕಾರ್ಯಗಳಲ್ಲಿ ಯಶಸ್ಸು ಶತಸಿದ್ಧ..!

1
3585

Kannada News | Health tips in kannada

ಸಮಗ್ರ ಜೀವನ ದೃಷ್ಟಿ, ಜೀವಕೋಟಿಗಳ ಸೌಖ್ಯದ ಬದುಕಿಗೆ ಭಾರತೀಯ ಸಂಸ್ಕೃತಿಯಲ್ಲಿ ಋಷಿ-ಮುನಿಗಳು ತಮ್ಮದೇ ಆದ ವಿಶೇಷ ಮಹತ್ವಗಳನ್ನು ನೀಡಿದ್ದಾರೆ. ಅದರಲ್ಲಿ ಕಣ್ವ ಮಹರ್ಷಿಗಳು ಪ್ರತಿಷ್ಠಾಪಿಸಿದ ಈ ನದಿ ನರಸಿಂಹಸ್ವಾಮಿ ದೇವಾಲಯದ ಬಗ್ಗೆ ತಿಳಿದರೆ ಅಚ್ಚರಿ ಪಡುತ್ತೀರಿ.. ಏಕೆಂದರೆ ಇಲ್ಲಿನ ದೇವರ ಮಹಿಮೆಯೆ ಅಂತಹುದು.

ರೇಷ್ಮೆಯ ನಾಡು ಎಂದೇ ಹೆಸರಾದ ಚನ್ನಪಟ್ಟಣದ ಹೊರವಲಯದಲ್ಲಿರುವ ದೊಡ್ಡ ಮಳೂರಿನ ಬಳಿ ಪುರಾತನ ದೇವಾಲಯವಿರುವ ನದಿ ನರಸಿಂಹಸ್ವಾಮಿಯ ದೇವಸ್ಥಾನ ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿಶಾಲಿ ದೇವಾ ನರಸಿಂಹ ಸ್ವಾಮಿ ಕ್ಷೇತ್ರ. ನರಸಿಂಹ ಸ್ವಾಮಿಯನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಇವರ ಸ್ಮರಣೆಯಿಂದ ದಾರಿದ್ರವನ್ನು ದೂರಮಾಡಿ ಸಕಲ ಮಂಗಳ ಕಾರ್ಯಗಳು ಜರಗುತ್ತವೆ.

ದೇವಾಲಯದ ಹಿನ್ನಲೆ

ಒಮ್ಮೆ ಕಣ್ವ ಮಹರ್ಷಿಗಳ ಕನಸಿನಲ್ಲಿ ಬಂದ ಲಕ್ಷ್ಮೀನಾರಾಯಣ, ಕಾವೇರಿಯ ತಟದಲ್ಲಿ ತನ್ನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಸೂಚಿಸಿದನಂತೆ. ಕಣ್ವ ಮಹರ್ಷಿಗಳು ಪ್ರತಿಷ್ಠಾಪಿಸಿದ ಈ ನರಸಿಂಹಸ್ವಾಮಿ ನದಿಯ ಪಕ್ಕದಲ್ಲಿರುವ ಕಾರಣ ನದಿ ನರಸಿಂಹ ಎಂದೇ ಖ್ಯಾತನಾಗಿದ್ದಾನೆ.

ಒಮ್ಮೆ ಪ್ರವಾಹ ಬಂದು ಊರಿಗೆ ಊರೇ ಮುಳುಗಿಹೋಯಿತು. ಆಗ ಇಲ್ಲಿ ಉಳಿದಿದ್ದೆಲ್ಲಾ ಬರಿ ಮರಳು. ಹೀಗಾಗಿ ಊರು ಮರಳೂರು ಎಂದು ಹೆಸರಾಯ್ತು. ಚಿಕ್ಕ ಮರಳೂರು, ದೊಡ್ಡ ಮರಳೂರು ಎಂಬ ಭಾಗವೂ ಆಯ್ತು. ದೊಡ್ಡ ಮರಳೂರು ಅಪ್ರಮೇಯನ ದೇವಾಲಯದಿಂದ ಖ್ಯಾತವಾದರೆ, ಚಿಕ್ಕಮರಳೂರು ನರಸಿಂಹಸ್ವಾಮಿಯಿಂದ ಖ್ಯಾತವಾಯ್ತು.

ದೇವಾಲಯದ ವಿಶೇಷತೆ

ಈ ದೇವಾಲಯದ ಇನ್ನೊಂದು ವಿಶೇಷತೆಯೇನೆಂದರೆ ದೇವಾಲಯದ ಗರ್ಭಗೃಹದ ಮುಂದೆ ಜನರು ಸಾಲುಗಟ್ಟಿ ನಿಲ್ಲಲು ನಿರ್ಮಿಸಿರುವ ಕಬ್ಬಿಣದ ಸರಳುಗಳಿಗೆ ಸುಲಿಯದ ತೆಂಗಿನ ಕಾಯಿಗಳನ್ನು ಭಕ್ತರು ಕಟ್ಟುವುದು. ಇಲ್ಲಿ ಹರಕೆ ಹೊತ್ತು ತೆಂಗಿನ ಕಾಯಿ ಕಟ್ಟಿದರೆ ನೆರವೇರುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಅಂತೆಯೇ ವಿವಿಧ ಧಾನ್ಯಗಳನ್ನು ಕೈಯಲ್ಲಿ ಹಿಡಿದು ಅಗರಬತ್ತಿ ಹಚ್ಚಿಸಿ ಅದರಲ್ಲಿ ಸಿಕ್ಕಿಸಿ ದೇವಾಲಯಕ್ಕೆ 48 ಪ್ರದಕ್ಷಿಣೆ ಹಾಕಿದರೆ ಅಂದುಕೊಂಡದ್ದು ನಡೆಯುತ್ತದೆ ಎಂದೂ ಜನ ನಂಬಿದ್ದಾರೆ.

ಈ ಶಕ್ತಿಶಾಲಿ ದೇವಾಲಯದಲ್ಲಿ ಲಕ್ಷ್ಮಿ ಸಮೇತನಾಗಿ ಇಲ್ಲಿ ನರಸಿಂಹಸ್ವಾಮಿ ನೆಲೆಸಿರುವುದರಿಂದ ಲಕ್ಷ್ಮೀನರಸಿಂಹ ದೇವಾಲಯ ಎಂತಲೂ ಇದು ಕರೆಯಲ್ಪಡುತ್ತದೆ. ಈ ದೇವಾಲಯಕ್ಕೆ ಬಂದು ಮೂಲಮಂತ್ರವನ್ನು ಜಪಿಸಿ ಭಕ್ತಿಯಿಂದ ಸ್ವಾಮಿಯನ್ನು ಬೇಡಿದವರ ಸಕಲ ಕಷ್ಟಗಳು ನಿವಾರಣೆಯಾಗಿದೆ ಎಂದು ಹೇಳಲಾಗುತ್ತದೆ. ಹಾಗಾಗಿ ಇಂದಿಗೂ ಈ ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿ ಒಳಿತು ಕಂಡಿದ್ದಾರೆ ಹಾಗೂ ಕಾಣುತ್ತಲೂ ಇದ್ದಾರೆ.