ತಮಿಳುನಾಡಿನಲ್ಲಿ ನಾಗರಹಾವು ಚಿತ್ರಕ್ಕೆ ನಿಷೇಧ

0
921

ತಮಿಳುನಾಡಿನಲ್ಲಿ ವಿಷ್ಣುದಾದ ಅವರ 201ನೇ ಚಿತ್ರ ನಾಗರಹಾವು ಚಿತ್ರಕ್ಕೆ ನಿಷೇಧ.  ನ್ಯಾಯಾಧೀಕರಣದ ತೀರ್ಪನ್ನು ನಾವು ಪಾಲಿಸಿದ ಮೇಲೂ ಅಲ್ಲಿನ ಜನ ಕಾಲು ಕೆರೆದು ಜಗಳಕ್ಕೆ ಬರುವ ಮನಸ್ಥಿತಿಯನ್ನು ಬಿಡಲು ಸಿದ್ಧರಿಲ್ಲವೆನಿಸುತ್ತೆ! ಕನ್ನಡ ನಾಗರಹಾವು ಚಿತ್ರದ ತಮಿಳು ಅವತರಣಿಕೆ ಅಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲವಂತೆ. ಪ್ರದರ್ಶಿಸಲು ಪ್ರಯತ್ನಿಸುವ ಚಿತ್ರಮಂದಿರವನ್ನು ಸುಡುವುದಾಗಿ ಬೆದರಿಕೆ ಒಡ್ಡಿದ್ದಾರೆ!!

14642632_10208731371540683_786865002_n

ಹಾಗ್ ನೋಡೋದಾದ್ರೆ ಅನ್ಯಾಯವಾಗಿರೋದು ನಮಗೆ ಮತ್ತು ನಮ್ಮ ರೈತರಿಗೆ. ತೀರಾ ಕಷ್ಟದ ಸ್ಥಿತಿಯಲ್ಲಿ ಅಲ್ಲಿನ ಜನತೆಗೆ ನೀರು ಹರಿಸಿದ್ದೇವೆ. ನಮ್ಮ ರೈತರ ಕಷ್ಟದಲ್ಲೂ ಅವರ ರೈತರಿಗೆ ನೆರವಾಗಿದ್ದೇವೆ. ನಮ್ಮವರಿಗೆ ಥಳಿಸಿದ ಮೇಲೂ ಇಲ್ಲಿನ ತಮಿಳರ ಜೊತೆ ಸಾಮರಸ್ಯದಿಂದ ಹೆಜ್ಜೆ ಹಾಕ್ತಿದ್ದೇವೆ. ಆದ್ರೂ ನಮ್ಮತನ ಅವರಿಗೆ ಅರಿವಾಗುತ್ತಿಲ್ಲ. “ಬಹುಶಃ ಅವರಿಗೆ ಅವರದೇ ರೀತಿಯಲ್ಲಿ ಬುದ್ದಿ ಹೇಳಬೇಕೇನೋ ಅನಿಸುತ್ತೆ” ಎಂದು ಸಾಮಾನ್ಯ ಕನ್ನಡಿಗ ತಂಡದ ಅಧ್ಯಕ್ಷ ಸಂದೀಪ್  ಪಾರ್ಶ್ವನಾಥ್ ಹೇಳಿದರು

ಸಾಮಾನ್ಯ ಕನ್ನಡಿಗ ತಂಡ ಇದನ್ನು ಖಂಡಿಸಿ ಒಂದು ಪೋಸ್ಟ್ ಹಾಕಿದ್ದು ಇದಕ್ಕೆ ಕನ್ನಡಿಗರಿಂದ ತುಂಬಾ ಬೆಂಬಲ ದಾರೇತಿದ್ದು . ಕರ್ನಾಟಕದಲ್ಲಿ ತಮಿಳು ಫಿಲಿಮ್ ಗಳ ನಿಷೇದಕೆ ಒಕ್ಕೂಟದ ಧ್ವನಿ ಕೆಲ್ಲಿ ಬರುತಿದೆ

ಕರ್ನಾಟಕ ವಿಷ್ಣು ಸೇನೆ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಉರ್ಗ್ರ ಹೋರಾಟಕೆ ಸಿದ್ದರಾಗಿ ಎಂದು ಕರೆ ಕೊಟ್ಟಿದಾರೆ

“ಇಂದು ಸಂಜೆ ಮೆಜೆಸ್ಟಿಕ್ ಬಳಿಯ ಮೌರ್ಯ ವೃತ್ತದ ಬಳಿ ಪ್ರತಿಭಟನಾ ಸಭೆ ಇದೆ. ಅಲ್ಲಿಂದ ತೆರಳಿ ಸರ್ಕಾರ ಮತ್ತು ವಾಣಿಜ್ಯ ಮಂಡಳಿಗೆ ಈ ಸಂಬಂಧ ಸೂಕ್ತಕ್ರಮಕೈಗೊಳ್ಳುವಂತೆ ಮನವಿ ಮಾಡಲಿದ್ದೇವೆ. ದಯಮಾಡಿ ಬನ್ನಿ.”

–ವೀರಕಪುತ್ರ_ಶ್ರೀನಿವಾಸ