ಅಂದದ ಉಗುರಿಗೆ ಚಂದದ ಆರೈಕೆ

0
678

ಅಲೀವ್ ಎಣ್ಣೆ : ಉಗುರುಗಳನ್ನು ಆರೋಗ್ಯಕರ ರೀತಿಯಲ್ಲಿ ಕಾಪಾಡಿಕೊಳ್ಳಲು ನೆರವಾಗುವ ವಿವಿಧ ಮಾರ್ಗೊಪಾಯಗಳಿವೆ. ಅವುಗಳಲ್ಲಿ ಜೊತೆಗೆ ಆಲೀವ್ ಎಣ್ಣೆ ಕೂಡ ಒಂದು ಆಲೀವ್ ಎಣ್ಣೆಯು ಒಂದು ನೈಸರ್ಗಿಕವಾದ ತೇವಕರವಾಗಿದ್ದು. ಇದು ತ್ವಚೆಯ ಶೈಲಗ್ರಂಥಿಗಳನ್ನು ಪುನರುಜ್ಜೀವನೊಳಿಸುತ್ತದೆ. ಹಿಗಾಗಿ ಉಗುರುಗಳಿಗೆ ಆಲೀವ್ ಎಣ್ಣೆ ಕೂಡ ಉಪಯೋಗಕಾರಿಯಾಗಿದೆ.

ಮೊಯಿಶ್ಚರ್: ನಿಮ್ಮ ಕೈಗಳನ್ನು ಮೊಶ್ಚರ್ ಮಾಡುತ್ತಾ ಇರಿ. ಒಂದು ವೇಳೆ ನೀವು ನೇಲ್ ಆಯಿಲ್ ಬಳಸದಿದ್ದಲ್ಲಿ, ಅದು ನಿಮ್ಮ ಉಗುರುಗಳಿಗೆ ಅಗತ್ಯವಾದ ಹೃಡ್ರೇಷನ್ ನೀಡುತ್ತದೆ. ಇದು ಉಗುರುಗಳನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ. ದಿನಾ ಮೈಗೆ ಮಾತ್ರ ಮಾಯಿಶ್ಚರೈಸರ್ ಹಚ್ಚಿಕೊಳ್ಳದೆ, ಉಗುರಿಗೂ ಹಚ್ಚಿ, ಇದರಿಂದ ಹೊಳಪಿನ ಉಗುರಿನ ಸೌಂದರ್ಯ ನಿಮ್ಮದಾಗುವುದು.

ಅಡುಗೆ ಸೋಡಾ ಮತ್ತು ಲಿಂಬೆ ರಸ: ಒಳ್ಳೆಯ ಗುಣಮಟ್ಟದ ಅಡುಗೆ ಸೋಡ ಮತ್ತು ಲಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ, ಇದನ್ನು ಉಗುರುಗಳಿಗೆ ಹಚ್ಚಿ ಇದು ಉಗುರುಗಳು ಹಳದಿಯಾಗಿದ್ದಲ್ಲಿ ಸಂಪೂರ್ಣವಾಗಿ ಉಗುರುಗಳ ಹಳದಿ ಬಣ್ಣ ಹೋಗಲಾಡಿಸಲು ಸಹಾಯವಾಗುತ್ತದೆ.

ಉಗುರುಗಳನ್ನು ಸ್ವಚ್ಛವಾಗಿಡಿ: ನಿಮ್ಮ ಉಗುರುಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇವುಗಳನ್ನು ಸ್ವಚ್ಛವಾಗಿಡಲು. ಅಪಾಯಕಾರಿ ರಾಸಾಯನಿಕಗಳನ್ನು ಬಳಸಬೇಡಿ. ಉಗುರುಗಳು ಹೆಚ್ಚು ಒಣಗದಂತೆ ನೋಡಿಕೊಳ್ಳಿ ಒಣ ಉಗುರುಗಳು ಯಾವತ್ತಿಗೂ ಅಪಾಯಕಾರಿಯೇ.

ಬೆಣ್ಣೆ : ಬೆಣ್ಣೆಯನ್ನು ನೇರವಾಗಿ ಉಗುರುಗಳಿಗೆ ಹಾಗೂ ಉಗುರುಗಳನ್ನಾವರಿಸಿಕೊಂಡಿರುವ ತ್ವಚೆಗೆ ಲೇಪಿಸಿಕೊಳ್ಳುವುದು. ಆರೋಗ್ಯಕರವಾದ ಉಗುರುಗಳನ್ನು ಕಾಪಾಡಿಕೊಳ್ಳುವ ಒಂದು ಮಾರ್ಗೋಪಾಯ, ಬೆಣ್ಣೆಯಲ್ಲಿರುವ ಕೊಬ್ಬಿನಾಂಶವು, ಉಗುರುಗಳು ಸಾಕಷ್ಟು ಪ್ರಮಾಣದಲ್ಲಿ ತೇವಾಂಶವನ್ನು ಪಡೆದುಕೊಳ್ಳಲು ಸಹಕರಿಸಿತ್ತದೆ.

ನೇಲ್ ಕಟ್ಟರ್’ಗಳು: ಹಳೆಯ ಅಥವಾ ತುಕ್ಕು ಹಿಡಿದ ನೇಲ್ ಕಟ್ಟರ್ ಗಳನ್ನು ಬಳಸಲು ಹೋಗಬೇಡಿ. ಅವುಗಳ ನಿಮ್ಮ ತ್ವಚೆಗೆ ಮತ್ತು ಉಗುರುಗಳಿಗೆ ಹಾನಿಯುಂಟು ಮಾಡಬಹುದು.

ಉಗುರಿನ ಆರೈಕೆ…

ನಿಮ್ಮ ಉಗುರುಗಳು ನೈಸರ್ಗಿಕವಾಗಿಯೇ ಗಮನ ಸಳೆಯಬೇಕು ಅಂತಾದರೆ ಆರೈಕೆ ಅತ್ಯಗತ್ಯ.

*ವಾರಕೊಮ್ಮೆಯಾದರೂ ಬೆಚ್ಚಗಿನ ನೀರಿನಲ್ಲಿ ಉಗುರುಗಳನ್ನು ಅದ್ದಿ ಹಾಗೇ ಮಸಾಜ್ ಮಾಡಿಕೊಳ್ಳಿ.

*ಮಲಗುವಾಗ ಬೆರಳುಗಳಿಗೆ ಸ್ವಲ್ಪ ಎಣ್ಣೆ ಹಚ್ಚಿದರೆ ಉಗುರುಗಳು ನೈಸರ್ಗಿಕವಾಗಿ ಹೊಳಪು ಪಡೆಯುತ್ತದೆ.

*ನಿಂಬೆಸಿಪ್ಪೆಯಿಂದ ಉಗುರನ್ನು ಮಸಾಜ್ ಮಾಡಿಕೊಳ್ಳಬೇಕು. ಇದು ಉಗುರು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.

*ನಿಂಬೆ ರಸದೊಂದಿಗೆ ಆಲಿವ್ ಎಣ್ಣೆ ಬೆರಸಿ ಮಸಾಜ್ ಮಾಡಿಕೊಂಡರೆ ಬೆರಳುಗಳು ಮಾತ್ರವಲ್ಲ ಕೈಗಳೂ ಸುಂದರವಾಗಿರತ್ತವೆ.

*ಉಗುರಿನಲ್ಲಿರುವ ನೇಲ್ ಪಾಲಿಶ್ ಅನ್ನು ಹತ್ತಿ ಅಥವಾ ನೇಲ್ ಪಾಲಿಶ್ ರಿಮೂವರ್ ಬಳಸಿ ತೆಗೆಯಿರಿ.

*ಉಗುರನ್ನು ಬೇಕಿರುವ ಆಕಾರಕ್ಕೆ ಕತ್ತರಿಸಿ ನೈಲ್ ಫಲ್ ಅಥವಾ ಶರ್ಪ ನರ್ ಬಳಸಿ ಶೇಪ್ ಕೊಡಿ ಅಂದವಾಗಿ ಕಾಣುತ್ತದೆ.