ಹೈ ಕಮಾಂಡ್ ಮಾತಿಗೂ ಬೆಲೆ ಕೊಡದೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಸಂಸದ ಅನಂತ್ ಕುಮಾರ್ ಹೆಗ್ಡೆ ಸದನದಲ್ಲಿ ಅಬ್ಬರಿಸಿದ ಪ್ರತಿಪಕ್ಷಗಳು.!

0
260

ಸಂಸದ ಅನಂತ ಕುಮಾರ್ ಹೆಗ್ಡೆ ರಾಷ್ಟ್ರಪಿತ ಮಹಾತ್ಮ ಗಾಂಧಿ ವಿರುದ್ಧ ನೀಡಿದ ಹೇಳಿಕೆ ಭಾರೀ ಸದ್ದು ಮಾಡುತ್ತಿದ್ದು, ದೇಶಾದ್ಯಂತ ವಿರೋದ್ಧಕ್ಕೆ ಕೇಳಿ ಬಂದು ಇಂದು ಲೋಕಸಭೆಯಲ್ಲಿ ತೀವ್ರ ಗದ್ದಲ, ಕೋಲಾಹಲ ಕಾರಣವಾಗಿದೆ. ಇದಕ್ಕೆ ಕ್ಷಮೆ ಕೇಳುವಂತೆ ಹೈ ಕಮಾಂಡ್ ಕೂಡ ತಿಳಿಸಿದರು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವೋಲಿಸಲು ಪ್ರಯತ್ನಿಸಿದರು. ಹೆಗ್ಡೆ ಕ್ಷಮೆ ಕೇಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಟೀಲ್ ನಿವಾಸದಿಂದ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೈ ಕಮಾಂಡ್ ಆದೇಶಕ್ಕೆ ಬಗ್ಗದ ಹೆಗ್ಡೆ?

ಹೌದು ಮಹಾತ್ಮ ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ್ ಹೆಗಡೆ ವಿವಾದ ಸೃಷ್ಟಿಸಿದ್ದರು. ಇಂದು ಬೆಳಗ್ಗೆ ಅವರನ್ನು ಭೇಟಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿವಾದಿತ ಹೇಳಿಕೆಯ ಕುರಿತು ಕ್ಷಮೆ ಕೇಳಲು ಸೂಚಿಸಿದ್ದರು. ಆದರೆ, ನಳಿನ್ ಕುಮಾರ್ ಪ್ರಯತ್ನ ವಿಫಲವಾಗಿದ್ದು, ಯಾವುದೇ ಕಾರಣಕ್ಕೆ ಕ್ಷಮೆ ಯಾಚಿಸುವುದಿಲ್ಲ ಎಂದು ಅನಂತಕುಮಾರ್ ಹೆಗಡೆ ಸ್ಪಷ್ಟಡಿಸಿದ್ದಾರೆ. ಆದರೆ, ತಮ್ಮ ವಿವಾದಿತ ಹೇಳಿಕೆಯ ಕುರಿತಾಗಿ ಮಾಧ್ಯಮಗಳ ಮುಂದೆ ಕ್ಷಮೆ ಯಾಚಿಸಲು ಸಾಧ್ಯವೇ ಇಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು.

ನನ್ನ ಹೇಳಿಕೆಗೆ ನಾನು ಬದ್ಧ ಹೆಗ್ಡೆ:

ನಾನು ಮಹಾತ್ಮ ಗಾಂಧಿ ಕುರಿತು ಹೇಳಿಕೆ ನೀಡಿಲ್ಲ. ಆದರೆ ನಮ್ಮ ಸ್ವಾತಂತ್ರ್ಯ ಹೋರಾಟದ ನೈಜ ಪರಿಸ್ಥಿತಿ ವಿವರಿಸಿದ್ದೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದು, ವಿವಾದ ಸೃಷ್ಟಿಸುವ ಅಗತ್ಯವಿಲ್ಲ ನಾನು ‘ಹೈಕಮಾಂಡ್ ನೀಡಿರುವ ನೋಟಿಸಿಗೆ ಉತ್ತರ ನೀಡಿದ್ದೇನೆ.ಮುಂದಿನದನ್ನು ಹೈಕಮಾಂಡ್ ನಿರ್ಧರಿಸಲಿ. ನಾನು ನನ್ನ ಹೇಳಿಕೆಗೆ ಬದ್ದವಾಗಿರುತ್ತೇನೆ ಎಂದು ಹೇಳಿದ್ದಾರೆ. ‘ನಾನು ನಮ್ಮ ಸ್ವಾತಂತ್ರ್ಯ ಹೋರಾಟ ಹೇಗಿತ್ತು ಎಂಬುದನ್ನು ಹೇಳಿದ್ದೆ. ನನ್ನ ಭಾಷಣ ಈಗಲೂ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಯಾರು ಬೇಕಾದರೂ ಕೇಳಬಹುದು. ನಾನು ಗಾಂಧಿ ಮತ್ತು ನೆಹರು ಕುರಿತು ಒಂದೇ ಒಂದು ಪದವನ್ನೂ ಬಳಕೆ ಮಾಡಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬಂದ ವರದಿಗಳು ತಪ್ಪು, ಇದರಲ್ಲಿ ವಿವಾದದ ಪ್ರಶ್ನೆಯೇ ಇಲ್ಲ. ಹೀಗಿರುವಾಗ ಕ್ಷಮೆ ಏಕೆ ಕೇಳಬೇಕು. ನನ್ನ ಪಕ್ಷ ನನಗೆ ನೋಟಿಸ್ ನೀಡಿದೆ. ನಾನೂ ಕೂಡ ಅದಕ್ಕೆ ಉತ್ತರ ನೀಡಿದ್ದೇನೆ. ಮುಂದಿನ ನಿರ್ಧಾರ ಹೈಕಮಾಂಡ್ ಮಾಡಲಿ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸದನದಲ್ಲಿ ಅಬ್ಬರಿಸಿದ ಪ್ರತಿಪಕ್ಷಗಳು;

ರಾಮ ಭಕ್ತ ಗಾಂಧೀಜಿಯನ್ನು ಅವಮಾನಿಸುವ ಬಿಜೆಪಿ ನಾಯಕರು ರಾವಣನ ಮಕ್ಕಳು ಎಂದು ಕಾಂಗ್ರೆಸ್​ ಹಿರಿಯ ನಾಯಕ ಅಧೀರ್​ ರಂಜನ್​ ಚೌಧರಿ ಹರಿಹಾಯ್ದಿದ್ದಾರೆ. ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಸದ ಅನಂತ ಕುಮಾರ್​ ಹೆಗಡೆ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಅಲ್ಲದೇ ಈ ಕುರಿತು ಸಂಸದರು ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಆಡಳಿತ-ಪ್ರತಿಪಕ್ಷಗಳ ನಡುವೆ ಗದ್ದಲದ ವಾತವಾರಣ ನಿರ್ಮಾಣವಾಗಿ ಕೆಲಕಾಲ ಸದನವನ್ನು ಮುಂದೂಡಲಾಯಿತು.