ಪ್ರಯಾಣಿಕರಿಗೆ ಅಚ್ಚರಿ ನೀಡಿದ ನಮ್ಮ ಮೆಟ್ರೋ, ಇನ್ನು ಮುಂದೆ ಮೆಟ್ರೋ ಪಯಣ ಇನ್ನು ಸುಲಭ…

0
726

ವಿಶ್ವದ ಅತಿ ಹೆಚ್ಚು ಸಂಚಾರ ದಟ್ಟಣೆಯ ಮೆಟ್ರೋಗಳಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಕೂಡ ಒಂದು ಎಂಬ ಹೆಗ್ಗಳಿಕೆ ಇದೆ. ನಿತ್ಯ ಬೆಂಗಳೂರಿನ ನಮ್ಮ ಮೆಟ್ರೊ ರೈಲಿನಲ್ಲಿ ಪ್ರತಿ ಕಿ.ಮೀ. ನಡುವೆ 10 ಸಾವಿರ ಜನ ಸಂಚರಿಸುತ್ತಿದ್ದಾರೆ. ಇಷ್ಟು ಜನರಿಗೆ ಒಂದು ಒಳ್ಳೆಯ ಸೇವೆ ನೀಡಲು BMRCL ಒಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ, ಏನದು ನೀವೇ ನೋಡಿ.

ನಮ್ಮ ಮೆಟ್ರೊ ರೈಲಿನಲ್ಲಿ ಹೆಚ್ಚು ಸಂಚಾರ ದಟ್ಟಣೆ ಕಂಡು ಬರುತ್ತಿರುವುದರಿಂದ ಸಂಸ್ಥೆ BMRCL ಈಗಾಗಲೇ ಇರುವ 3 ಬೋಗಿಗಳ ಮೆಟ್ರೊವನ್ನು 6 ಬೋಗಿಗೆ ಏರಿಸುವ ಚಿಂತನೆ ನಡೆಸಿದೆ. ಇನ್ನು ಇದಕ್ಕೆ 1,421 ಕೋಟಿ. ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಈ ಯೋಜನೆಗೆಂದೇ BEML ಜೊತೆ ನಮ್ಮ ಮೆಟ್ರೋ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ, ಈ ಒಪ್ಪಂದದ ಪ್ರಕಾರ BEML ಸಂಸ್ಥೆ 150 ಹೆಚ್ಚು ಮೆಟ್ರೋ ರೈಲು ಬೋಗಿಗಳನ್ನು ಸಿದ್ಧಪಡಿಸಿ ಕೊಡಲಿದೆಯಂತೆ, ಇನ್ನು ಈ ಹೆಚ್ಚುವರಿ 3 ಬೋಗಿಗಳಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಬಹುದು, ಈ ಹೆಚ್ಚುವರಿ ಬೋಗಿಗಳಿಂದ 2000 ಕ್ಕೂ ಅಧಿಕ ಜನರಿಗೆ ನಿತ್ಯ ಉಪಯೋಗವಾಗಲಿದೆಯೆಂತೆ.

BEML ಸಂಸ್ಥೆ ಕೂಡ ತನ್ನ ಹಳೆಯ 2 ಘಟಕಗಳಿಗೆ ಇನ್ನೊಂದು ಹೊಸ ಘಟಕ ಸೇರಿಸಿ ಒಟ್ಟು 3 ಉತ್ಪಾದನ ಘಟಕಗಳಾಗಿವೆ, ನಮ್ಮ ಮೆಟ್ರೋ ಕೊಟ್ಟ ಈ ಒಪ್ಪಂದವನ್ನು ನಿಗದಿಪಡಿಸಿದ ಗುರಿ ಡಿಸೆಂಬರ್ 2019 ರೊಳಗೆ ಇದು ಪ್ರತಿ ತಿಂಗಳಿಗೆ 6 ರಿಂದ 9 ಬೋಗಿಯಂತೆ ಒಟ್ಟು 150 ಬೋಗಿಗಳನ್ನು ಪೂರೈಸಲಿದೆಯಂತೆ.

ಒಟ್ಟಿನಲ್ಲಿ ಹೊಸ ವರ್ಷಕ್ಕೆ ನಮ್ಮ ಮೆಟ್ರೋ ಸಂಸ್ಥೆ ತನ್ನ ಪ್ರಯಾಣಿಕರಿಗೆ ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ…!