ದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಭೂಮಿಯಲ್ಲಿ ನೀರಿನ ಪ್ರಮಾಣವು ಕಡಿಮೆಯಾಗಿದೆ. ಇದರಿಂದ ಅಂತರ್ಜಲ ಪ್ರಮಾಣವು ಕುಸಿದಿದೆ. ಇದರಿಂದ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಒಂದು ಸಾರಿ ಮಳೆ ಬಂದರೆ ಮತ್ತೆ ಒಂದು ವಾರದಲ್ಲಿ ಬೆಲೆ ಬತ್ತಿಹೋಗುತ್ತಿದೆ ಇದಕ್ಕೆ ಕಾರಣ ಮಣ್ಣು ಸರಿಯಾಗಿ ನೀರನ್ನು ಹಿಡಿದಿಟ್ಟುಕೊಳ್ಳುತ್ತಿಲ್ಲ ಅಂತಾಗುತ್ತದೆ. ಅದಕ್ಕಾಗಿ ರೈತರು ಬೆಳೆವು ಬೇಗನೆ ಬತ್ತಿ ಹೋಗುತ್ತಿದೆ. ಈ ಸಂಬಂಧ ಸರ್ಕಾರವು ಹಲವು ಯೋಜನೆಗಳನ್ನೂ ಹಾಕಿಕೊಂಡು ಮಳೆ ಬರಿಸಲು ಪ್ರಯತ್ನ ಮಾಡುತ್ತಿದ್ದರೆ ಇಲ್ಲೊಬ್ಬರು ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಣ್ಣಿನ ಸಾಮರ್ಥ್ಯ ಹೆಚ್ಚಿಸುವ ‘ಜೀವರಕ್ಷಕ’ ಎಂಬ ಸಾವಯವ ಉತ್ಪನ್ನ ಕಂಡು ಹಿಡಿದು ಭಾರಿ ಮೆಚ್ಚುಗೆ ಪಡೆದಿದ್ದಾರೆ.
ಏನಿದು ‘ಜೀವರಕ್ಷಕ’?
ಹೌದು ತಿಂಗಳ ಕಾಲ ಮಳೆಯಾಗದಿದ್ದರೂ ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಣ್ಣಿನ ಸಾಮರ್ಥ್ಯ ಹೆಚ್ಚಿಸುವ ‘ಜೀವರಕ್ಷಕ’ ಎಂಬ ಸಾವಯವ ಉತ್ಪನ್ನ ಸಂಶೋಧಿಸಿದ್ದು, ಇದು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬೇರಿನಡಿ ಹಿಡಿದಿಟ್ಟು ನಿರಂತರವಾಗಿ ಬೆಳೆಗಳಿಗೆ ಹಂತ ಹಂತವಾಗಿ ಬೇಕಾಗುವ ನೀರು, ಹ್ಯೂಮಿಕ್ ಅಮ್ಲ, ಫೆಲ್ವಿಕ್ ಆಮ್ಲ, ಅಮೈನೊ ಆಮ್ಲ, ಸಿಲಿಕಾ, ಸೀವೀಡ್ ಎಕ್ಟ್ರಾಕ್ಟ್ ಆಹಾರಾಂಶಗಳನ್ನು ನೀಡುತ್ತದೆ. ಅಷ್ಟೇ ಅಲ್ಲ, ಮಣ್ಣಿನ ಹೀರಿಕೊಳ್ಳುವ ಗುಣವನ್ನು ಶೇ.100ರಷ್ಟುಹೆಚ್ಚಿಸುವ ಇದು ತೇವಾಂಶವನ್ನು ಹೊಂದಿದೆ. ಇದನ್ನು ಹಲವು ರೈತರು ಬೆಳಸಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಯಾರು ಜೀವರಕ್ಷಕ ಸಂಶೋಧಕ?
ರೈತರಿಗೆ ಅನುಕೂಲವಾಗುವಂತೆ ಹಲವು ಸಂಶೋಧನೆಗಳನ್ನು ಮಾಡುತ್ತಿರುವ ಮತ್ತು ಸಾವಯವ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮಂಜುನಾಥ ಸಾನು ಎಂಬುವರು ಈ ಸಂಶೋಧನೆ ಮಾಡಿದ್ದಾರೆ. ಅನಿಶ್ಚಿತ ಮಳೆಯಿಂದ ರೈತ ಸಂಕಷ್ಟಕ್ಕೊಳಗಾಗುತ್ತಿರುವ ಈ ವೇಳೆ ರೈತರಿಗಾಗಿ ಏನಾದರೂ ಮಾಡಲೇಬೇಕೆಂದು ಸಾವಯವ ಉತ್ಪನ್ನವೊಂದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ಮಳೆಯಾಗಿ ಜುಲೈನಲ್ಲಿ ಕೈ ಕೊಟ್ಟಾಗ ರೈತ ತಲೆ ಮೇಲೆ ಕೈ ಹೊತ್ತರೆ ಇವರು, ಇದರ ಪರಿಹಾರಕ್ಕೇನಾದರೂ ಮಾಡಬೇಕೆಂದು ತಮ್ಮ ಲ್ಯಾಬ್ ಸೇರಿದ್ದರು. ಪರಿಣಾಮ ಸಾವಯವ ಪರಿಕರಗಳಿಂದಲೆ ಉತ್ಪನ್ನವೊಂದನ್ನು ಸಂಶೋಧಿಸಿ ಅದಕ್ಕೆ ಜೀವರಕ್ಷಕ ಎಂದು ಹೆಸರಿಟ್ಟಿದ್ದಾರೆ. ಇದರ ಬೆಲೆ ಕೆ.ಜಿ.ಗೆ .950 ನಿಗದಿಸಿದ್ದಾರೆ.
ಬಳಸುವುದು ಹೇಗೆ?
ಮಳೆ ಕೈಕೊಟ್ಟವೇಳೆ 1ರಿಂದ 2 ಕೆ.ಜಿ. ಪುಡಿಯನ್ನು ಹತ್ತು ಕೆ.ಜಿ. ಮಣ್ಣಿಗೆ ಬೆರೆಸಿ ಒಂದು ಎಕರೆ ಬೆಳೆಯ ಬೇರಿಗೆ ನೀಡಿದರಾಯಿತು. ಒಂದು ಗ್ರಾಂ ಈ ಪುಡಿ 50 ಎಂ.ಎಲ್. ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಬಿತ್ತನೆ ವೇಳೆಯೂ ಇದನ್ನು ಮಣ್ಣಿಗೆ ಬೆರೆಸಬಹುದು. ಇದು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬೇರಿನಡಿ ಹಿಡಿದಿಟ್ಟು ನಿರಂತರವಾಗಿ ಬೆಳೆಗಳಿಗೆ ಹಂತ ಹಂತವಾಗಿ ಬೇಕಾಗುವ ನೀರು, ಹ್ಯೂಮಿಕ್ ಅಮ್ಲ, ಫೆಲ್ವಿಕ್ ಆಮ್ಲ, ಅಮೈನೊ ಆಮ್ಲ, ಸಿಲಿಕಾ, ಸೀವೀಡ್ ಎಕ್ಟ್ರಾಕ್ಟ್ ಆಹಾರಾಂಶಗಳನ್ನು ನೀಡುತ್ತದೆ. ಈಗಾಗಲೇ ಇದನ್ನು ಆಲೂಗಡ್ಡೆ, ಕಬ್ಬು, ಮೆಕ್ಕೆಜೋಳ ಬೆಳೆಗೆ ಬಳಸಿದ್ದು, ಜೀವರಕ್ಷಕದಿಂದಾಗಿ ಮಳೆ ಕೊರತೆ ನಡುವೆಯೂ ಬೆಳೆ ಬಾಡಿಲ್ಲ ಎನ್ನುತ್ತಾರೆ. ಅಲ್ಲದೆ ಮಳೆ ಕೊರತೆ ಎದುರಿಸುತ್ತಿರುವ ಚಿತ್ರದುರ್ಗದ ಕೆಲ ರೈತರು ಸದ್ಯ ಇದನ್ನು ಬಳಸುತ್ತಿದ್ದು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾಹಿತಿ ಪಡೆದಿದ್ದ ಮಾಜಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಜೀವರಕ್ಷಕದ ಕುರಿತು ಪರೀಕ್ಷೆ ನಡೆಸುವಂತೆ ಸೂಚಿಸಿದ್ದಲ್ಲದೆ ಕಡಿಮೆ ವೆಚ್ಚದಲ್ಲಿ ಇದನ್ನು ಜಮೀನುಗಳಲ್ಲಿ ಪ್ರಯೋಗಿಸಿ ವರದಿ ನೀಡುವಂತೆ ತಿಳಿಸಿದ್ದಾರೆ.