ಈ ಹೊಸ ಸೆನ್ಸರ್ ಮತ್ತು ಆಪ್ ಹೃದಯಾಘಾತ ಆಗುವ ಹತ್ತು ದಿನಗಳ ಮುಂಚೆಯೇ ಎಚ್ಚರಿಕೆ ನೀಡಿ ಜೀವ ಉಳಿಸುತ್ತೆ ಅಂತೆ!! ಇದನ್ನು ಬಳಸುವಿರ??

0
1112

ಹೃದಯಾಘಾತಕ್ಕೆ ವಯಸ್ಸಿನ ಅಂತರವಿಲ್ಲದ ಸಂಭವಿಸುತ್ತೇ, ಅದರಂತೆ ವಯಸ್ಸಾದವರಲ್ಲಿ ಹೆಚ್ಚಿಗೆ ಕಂಡು ಬರುವುದು ಸಹಜವಾಗಿದೆ. ಹೃದಯ ಸ್ತಂಭನದಿಂದ ಚಿಕ್ಕ ವಯಸ್ಸಿನಲ್ಲಿ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಸಾವು ಸಂಭವಿಸುತ್ತಿದೆ. ಹೃದಯದ ನಾಳಗಳಲ್ಲಿ ತೊಂದರೆ ಇದ್ದರೆ ದೇಹವೇ ಕೆಲವು ಸೂಚನೆಗಳನ್ನು ಸೂಚ್ಯವಾಗಿ ನೀಡುತ್ತದೆ. ಈ ಸೂಚನೆಗಳನ್ನು ಗಮನಿಸಿ ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಒಳ್ಳೆಯದು ಆದರೆ ಕೆಲವು ಸಂದರ್ಭದಲ್ಲಿ ಯಾವುದೇ ಸೂಚನೆ ಇಲ್ಲದೆ ಹೃದಯಾಘಾತ ಆಗುತ್ತೆ. ಇದಕ್ಕಾಗಿ ಒಂದು ಹೊಸ ಆ್ಯಪ್ ಬಂದಿದ್ದು, ಹಾರ್ಟ್‌ ಅಟ್ಯಾಕ್‌ ಆಗುವ 10 ದಿನದ ಮುನ್ನವೇ ಪತ್ತೆ ಹಚ್ಚಬಹುದು.

ಹೌದು ಸದ್ಯದ ತಂತ್ರಜ್ಞಾನ ಎಷ್ಟೊಂದು ಮುಂದುವರಿದಿದೆ ಈಗ ಒಬ್ಬ ಮಾನವನಿಗೆ ಸಾವು ಸಹ ಯಾವಾಗ ಸಂಭವಿಸಲಿದೆ ಎಂಬುದು ಮೊದಲೇ ತಿಳಿದುಕೊಳ್ಳುವ ಮಟ್ಟಿಗೆ ಬೆಳವಣಿಗೆ ಹೊಂದಿದೆ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ನಮಗೆ ಆಗುವ ಹಾರ್ಟ್‌ ಅಟ್ಯಾಕ್‌ ಅನ್ನು ಮೊದಲೇ ಇನ್ಮುಂದೆ ತಿಳಿದುಕೊಳ್ಳಬಹುದಂತೆ. ಅದು ಒಂದು ಸಣ್ಣ ಬ್ಲೂಟೂತ್ ಸೆನ್ಸಾರ್ ಸಹಾಯದಿಂದ ಈ ಸೆನ್ಸಾರ್‌ ಮಾನವನಿಗೆ ಹೃದಯ ವೈಫಲ್ಯ ಆಗಲಿರುವುದನ್ನು 10 ದಿನಕ್ಕೂ ಮೊದಲೇ ಪತ್ತೆ ಮಾಡುತ್ತದೆ. ಅಲ್ಲದೆ ಇದು ಶೇ.80 ರಷ್ಟು ನಿಖರವಾಗಿ ಹಾರ್ಟ್ ಫೆಲ್ಯೂರ್ ಸಂಭವವನ್ನು ಮೊದಲೇ ತಿಳಿಸಲಿದೆ. ಈ ಬ್ಲೂಟೂತ್ ಸೆನ್ಸಾರ್ ಸ್ಮಾರ್ಟ್ ಫೋನ್ಗಳಿಗೆ ಸಂಪರ್ಕ ನೀಡಿದರೆ ಆ್ಯಪ್ ಮೂಲಕ ಹೃದಯ ಬಡಿತ, ಉಸಿರಾಟ, ಕಾಲ್ನಡಿಗೆಯ ಲೆಕ್ಕ ಸೇರಿ ವಿವಿಧ ಚಟುವಟಿಕೆಗಳ ಮೇಲೆ ನಿಗಾವಹಿಸಬಹುದಾಗಿದೆ.

ಇಂತಹ ಸಂಶೋಧನೆಯನ್ನ ಉತ್ತಾಹ್ ಯೂನಿವರ್ಸಿಟಿಯ ವಿಜ್ಞಾನಿಗಳು ಹೇಳುವಂತೆ, ಈ ಹೊಸ ತಂತ್ರಜ್ಞಾನದ ಬಳಕೆಯಿಂದಾಗಿ ತುರ್ತು ಚಿಕಿತ್ಸೆಗೆ ಒಳಗಾಗುವವರ ಸಂಖ್ಯೆ ಕ್ಷೀಣಿಸಲಿದೆಯಂತೆ. ಹಾಗೇನಾದರೂ ಈ ಸೆನ್ಸಾರ್‌ ಕೆಲಸ ಮಾಡುವುದು ನಿಜವಾದರೇ ನಮ್ಮ ದೇಶದಲ್ಲಿ ಎದುರಾಗಬಹುದಾದ ಹೃದಯಾಘಾತ ಸಮಸ್ಯೆಗೆ ಬಹುಬೇಗನೆ ನಾವು ಪರಿಹಾರ ಕಂಡುಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮ ಆಯಸ್ಸು ಅರವತ್ತು ದಾಟಿದ್ದು ಸ್ಥೂಲಕಾಯ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳಿದ್ದರೆ ಹೃದಯಾಘಾತದ ಸಾಧ್ಯತೆಗಳನ್ನು ಈ ಸ್ಥಿತಿಗಳು ಹೆಚ್ಚಿಸುತ್ತವೆ. ಆದ್ದರಿಂದ ಹೃದಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಅದಕ್ಕಾಗಿ ಈ ಆ್ಯಪ್ ಸಹಾಯ ಮಾಡುತ್ತೆ. ಅದರಂತೆ ಸಾಮಾನ್ಯವಾಗಿ ಕಂಡು ಬರುವ ಕೆಲವು ಲಕ್ಷಣಗಳನ್ನ ತಿಳಿಸಲಾಗಿದ್ದು ಇಲ್ಲಿವೆ ನೋಡಿ.

ಹೃದಯಾಘಾತದ ಸೂಚನೆಗಳು?

ಉಸಿರು ಕಟ್ಟುವುದು:

ಉಸಿರು ಕಟ್ಟುವುದು ಹೃದಯವು ನಿತ್ರಾಣವಾದಾಗ ಅದು ಶ್ವಾಸಕೋಶಕ್ಕೆ ಸರಿಯಾಗಿ ರಕ್ತಸಂಚಾರ ಮಾಡಲು ವಿಫಲವಾಗುತ್ತದೆ. ಇದರಿಂದ ಉಸಿರಾಟದಲ್ಲಿ ತೊಂದರೆಯಾಗುವುದು.

ಅಧಿಕ ರಕ್ತದೊತ್ತಡ:

ದೀರ್ಘ ಸಮಯದಿಂದ ರಕ್ತದೊತ್ತಡ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ, ನಿಮ್ಮ ಹೃದಯ ತೊಂದರೆಗೆ ಒಳಗಾಗುವ ಸಂಭವ ಇರುತ್ತದೆ. ಪ್ರತಿ ಸೆಕೆಂಡ್‌ಗೆ ಹೆಚ್ಚಿನ ಒತ್ತಡದಿಂದ ನಿಮ್ಮ ಹೃದಯ ರಕ್ತವನ್ನು ಪಂಪು ಮಾಡಬಹುದು. ಅಧಿಕ ರಕ್ತದೊತ್ತಡದ ಶಮನಕ್ಕೆ ಲಿಂಬೆಯ ಚಮತ್ಕಾರ.

ನಿರಂತರ ಕೆಮ್ಮು:

ರಕ್ತ ಕಟ್ಟಿದ ಹೃದಯ ಸ್ತಂಭನವನ್ನು ಹೊಂದಿದ್ದಲ್ಲಿ, ನಿಮ್ಮ ಹೃದಯದ ಮೂಲಕ ಕೆಲವೊಂದು ದ್ರವ್ಯಗಳು ಶ್ವಾಸಕೋಶದಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ಇದು ನಿರಂತರ ಕೆಮ್ಮಿಗೆ ಕಾರಣವಾಗುತ್ತದೆ. ಜನರು ಇದನ್ನು ಸಾಮಾನ್ಯ ಕೆಮ್ಮು ಎಂದೇ ಭಾವಿಸುತ್ತಾರೆ. ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!

ಕೈಕಾಲುಗಳು ಊದಿಕೊಳ್ಳುವುದು:

ನಿಮ್ಮ ಕೈಗಳು ಮತ್ತು ಕಾಲುಗಳು ಆಗಾಗ್ಗೆ ಊದಿಕೊಳ್ಳುತ್ತಿದೆ ಎಂದಾದಲ್ಲಿ ನಿಮ್ಮ ಹೃದಯ ಸಮಸ್ಯೆಯಲ್ಲಿ ಇದೆ ಎಂದರ್ಥವಾಗಿದೆ. ನಿಮ್ಮ ಕೈಕಾಲುಗಳನ್ನು ತಲುಪಬಲ್ಲ ರಕ್ತವನ್ನು ಪಂಪು ಮಾಡಲು ಹೃದಯವು ಅಸಮರ್ಥಗೊಂಡಿರಬಹುದು. ಇದರಿಂದ ಅಭಿಧಮನಿಗಳು ದ್ರವಗಳನ್ನು ತಳ್ಳುತ್ತವೆ ಮತ್ತು ಈ ಕಾರಣದಿಂದ ನಿಮ್ಮ ಕೈಕಾಲುಗಳು ಊದಿಕೊಳ್ಳುತ್ತವೆ.

Also read: ನಿಮ್ಮ ಮೊಬೈಲ್-ನಲ್ಲಿ ಈ ಆ್ಯಪ್‌-ಗಳು ಇದ್ದರೆ ಈಗಲೇ ಡಿಲೀಟ್ ಮಾಡಿ, ಇಲ್ಲಾಂದ್ರೆ ಖದೀಮರು ಈ ಆ್ಯಪ್‌-ಗಳ ಮೂಲಕ ನಿಮ್ಮ ಖಾತೆಯ ಹಣ ಕದಿಯಬಹುದು!!