ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಹೊಸ ಕೇಬಲ್ ನಿಯಮದಂತೆ ಕನ್ನಡ ಚಾನೆಲ್ ದರ ಮತ್ತು ಆಯ್ಕೆ ಹೇಗೆ?

0
1640

ಫೆಬ್ರವರಿ 1 ರಿಂದ ಜಾರಿಗೆ ಬರಲಿ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊರ ತಂದಿರುವ ಹೊಸ ಕೇಬಲ್ ನೀತಿ ಕುರಿತಂತೆ ಕೇಬಲ್ TV ಮತ್ತು DTH ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಈ ಮಾಹಿತಿ ಅನ್ವಯ ಶೇಕಡಾ 90 ರಷ್ಟು ಗ್ರಾಹಕರು ಟ್ರಾಯ್ ನೀತಿಗೆ ಬದಲಾಗಿರುತ್ತಾರೆ ಎಂದು ಟ್ರಾಯ್ ತಿಳಿಸಿದೆ. ಈ ಹಿಂದೆ ತಿಳಿಸಿರುವ ಹಾಗೆ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೇಜ್ ಗೆ 154ರು ಗಳಾಗಲಿವೆ. ಚಂದಾದಾರರಿಗೆ 154ರು ಮೊತ್ತ ಮತ್ತು 130ರು ತೆರಿಗೆ ಮೊತ್ತ ಸೇರಲಿದೆ ಎಂದು ತಿಳಿಸಿದೆ.

ಉಚಿತ ಚಾನಲ್-ಗಳು:

ಟ್ರಾಯ್ ತಿಳಿಸಿರುವ ಹಾಗೆ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದು ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು GST ಸೇರಿದರೆ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ.

ಚಾನೆಲ್-ಗಳ ಆಯ್ಕೆ ಹೇಗೆ?

ಟ್ರಾಯ್ ನೀತಿಯಂತೆ ಒಂದು ಚಾನೆಲ್ ಅಥವಾ ಚಾನೆಲ್ ಗಳ ಪ್ಯಾಕೆಜ್ ಹಾಕಿಸಿಕೊಳ್ಳಬಹುದು. ಅದರಂತೆ ZEE, SONY, STAR, COLORS, ವಿವಿಧ ಚಾನೆಲ್ ಗಳ ಬಗ್ಗೆ ಡಿಟಿಎಚ್ ಅಪರೇಟರ್ ಸಂಪರ್ಕಿಸಿ, ಬೇಕಾದ ಪ್ಯಾಕೇಜ್ ಪಡೆಯಬಹುದು. ವೆಬ್ ಸೈಟ್-ನಲ್ಲಿ ಟ್ರಾಯ್ ಚಾನೆಲ್ ಸೆಲೆಕ್ಟರ್ ಆಪ್ ಹಾಗೂ ಚಾನೆಲ್ ಸೆಲೆಕ್ಟರ್ ಅಪ್ಲಿಕೇಷನ್ ಬಳಸಿ ಗ್ರಾಹಕರಿಗೆ ಅವಶ್ಯವಿರುವ ಚಾನೆಲ್ ಗಳನ್ನು ಪಡೆಯಬಹುದು. ಕೇಬಲ್ ಟಿವಿ ಅಥವಾ ಡಿಟಿಎಚ್ ಅಡಿಯಲ್ಲಿನ 100 ಅಥವಾ ಅದಕ್ಕಿಂತ ಹೆಚ್ಚು ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಆಯ್ಕೆ ಮಾಡಿದ ಒಟ್ಟು ಚಾನೆಲ್ ಹಾಗೂ ಒಟ್ಟು ಮೊತ್ತವನ್ನು ವೆಬ್ ಸೈಟ್ ನ ಮೇಲ್ಭಾಗದಲ್ಲಿ ನೋಡಬಹುದು. ಕೇಬಲ್ ಟಿವಿ ಬಿಲ್ ಮತ್ತು ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಟ್ರಾಯ್ ವೆಬ್ ಸೈಟ್ ಗೆ ಭೇಟಿ ಕೊಡಿ.

ಟ್ರಾಯ್ ಸಹಾಯವಾಣಿ:

ಏರ್ ಟೆಲ್, ಡಿಶ್ ಟಿವಿ, ಹಾಥ್ವೇ, ಸಿಟಿ ಕೇಬಲ್, ಸ್ಥಳೀಯ ಕೇಬಲ್ ಆಪರೇಟರ್ ಗಳು ತಮ್ಮ ದರ ಪಟ್ಟಿಯನ್ನು ಈಗಾಗಲೇ ಚಂದಾದರಿಗೆ ಪ್ರದರ್ಶಿಸತೊಡಗಿವೆ. ಪ್ರಸಾರಕಾರರು, ಡಿಟಿಎಚ್ ಆಪರೇಟರ್ ಗಳು ಮತ್ತು Multi System Operators(MSO)ಗಳ ಜತೆ ಟ್ರಾಯ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ ಬಳಿಕ ದರಗಳನ್ನು ನಿಗದಿ ಮಾಡಲಾಗಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಡೌಟ್​ಗಳಿದ್ದರೆ 011-23237922 ಮತ್ತು 011-23220209 ಇಲ್ಲವೇ ಇ- ಮೇಲ್​ advbcs-2@trai.gov.in ಅಥವಾ arvind@gov.in. ಗೆ ಸಂಪರ್ಕಿಸಬಹುದು.

ಕನ್ನಡ ಚಾನೆಲ್ ಗಳ ದರ ನಿಗಧಿ:

ಸ್ಟಾರ್ ಸ್ಪೋರ್ಟ್ಸ್ ಕನ್ನಡ 19 ರೂ, ಚಿಂಟು ಟಿವಿ ಕನ್ನಡ 6 ರೂ, ಉದಯ ಕಾಮಿಡಿ 6 ರೂ, ಉದಯ ಮೂವೀಸ್ 16 ರೂ, ಉದಯ ಮ್ಯೂಸಿಕ್ 6 ರೂ, ಉದಯ ಟಿವಿ 17 ರೂ, ಕಲರ್ಸ್ ಕನ್ನಡ 19 ರೂ, ಸ್ಟಾರ್ ಸುವರ್ಣ 19 ರೂ, ಜೀ ಕನ್ನಡ 19 ರೂ, ಸುವರ್ಣ ಪ್ಲಸ್ ಚಾನಲ್ ಗೆ 5 ರೂ, ಡಿಸ್ಕವರಿ ಚಾನೆಲ್ ಗೆ 4 ರೂ, ಡಿಸ್ಕವರಿ ಕಿಡ್ಸ್ ಚಾನೆಲ್ ಗೆ 3 ರೂ, ಅನಿಮಲ್ ಪ್ಲಾನೆಟ್ ಗೆ 24 ರೂ, ಸೋನಿ ಇ.ಎಸ್.ಪಿ.ಎನ್. HD 7 ರೂ, ಸೋನಿ ಇ.ಎಸ್.ಪಿ.ಎನ್. ಗೆ 5 ರೂ, ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಗೆ 4 ರೂ. ದರ ನಿಗಧಿ ಮಾಡಿದೆ. ಇದರಂತೆ ಗ್ರಾಹಕರು ಟಿವಿ ಚಾನೆಲ್ ಪಡೆಯಬಹುದು.

Also read: ಮುಂದಿನ ತಿಂಗಳಿಂದ 153 ರೂ. ನಲ್ಲಿ 100 ಚಾನೆಲ್​ಗಳನ್ನು ನೋಡಬಹುದು; ಜನವರಿ 31 ರೊಳಗೆ 100 ಚಾನೆಲ್ ಗಳನ್ನು ಆರಿಸಿಕೊಳ್ಳಿ..