“ನೈಟಿ” ರಾತ್ರಿಮಾತ್ರ ತೊಡಬೇಕಾ?

0
2554

ನಾವು ಧರಿಸುವ ಉಡುಪು ನಮ್ಮ ವ್ಯಕ್ತಿತ್ವ ಮತ್ತು ಸಂಸ್ಕೃತಿಯ ಪ್ರತೀಕ. ಇಂದಿನ ಫ್ಯಾಷನ್ ಯುಗದಲ್ಲಿ ನಮ್ಮ ಉಡುಗೆ ತೊಡುಗೆಯ ಶೈಲಿ ಬದಲಾಗಿರಬಹುದು. ಆದರೆ ಆವಿಧಾನ ಅಳವಡಿಸಿಕೊಳ್ಳುವಲ್ಲಿ ನಮ್ಮ ಆಸಕ್ತಿ ಅಭಿರುಚಿಗೆ ಸಂತೃಪ್ತಿ ನೀಡುವುದರ ಜೊತೆ ಆರೋಗ್ಯಕರ ಅಭ್ಯಾಸ ಸಮಾಜಯೋಗ್ಯ, ಆಗಲೆ ನಮಗೂ ಗೌರವ, ನೋಡುವವರಿಗೂ ನೆಮ್ಮದಿ.

‘ನಾವು ಧರಿಸಿರುವ ಬಟ್ಟೆ ನಮ್ಮ ಸುತ್ತಮುತ್ತಲಿನವರಿಗೆ ನಮ್ಮ ವ್ಯಕ್ತಿತ್ವ ಎಂತಹದ್ದು ಎನ್ನುವುದನ್ನು ತಿಳಿಸುತ್ತಿರುತ್ತದೆ’ ಎನ್ನುವ ಮಾತೊಂದುದೆ, ಇದು ನೂರಕ್ಕೆ ನೂರು ಸತ್ಯ ಕೂಡಾ. ಆದ್ದರಿಂದಲೇ ಇವತ್ತು ನಾವು ಹೇಗಿದೆ ಎನ್ನುವ ವಿಷಯವೇ ಹೆಚ್ಚು ಪ್ರಮಾಉಖ್ಯತೆಯನ್ನು ವಿವಿಧ ಕಂಪನಿಗಳ, ವಿಭಿನ್ನ ಬಗೆಯ ವಿವಿಧ ಬೆಲೆಗಳ ಬಟ್ಟೆಗಳು ಮಾರ್ಕೆಟ್ಟಿಗಳಲ್ಲಿ ಚಲಾವಣೆಯಲ್ಲಿದೆ. ಅಂತಹ ಬಟ್ಟೆಗಳಲ್ಲಿ ಮಹಿಳೆಯರ ಅಚ್ಚುಮೆಚ್ಚಿನ ‘ನೈಟಿ’ ಕೂಡಾ ಒಂದು. ಇಂದಿನ ಮಹಿಳೆಯರ ಜಗತ್ತಿನ ಸೀರೆಗೆ ಮೊದಲ ಸ್ಥಾನವಾದರ, ಅದರ ನಂತರದ ಸ್ಥಾನ ಈ ನೈಟಿಯದ್ದು.

ಮಹಿಲೇಯರಿಗೆ ನೈಟಿಯ ಪರಿಚಯವಾದದ್ದು ತೀರಾ ಇತ್ತೀಚೆಗೆ. ಮೊದಲು ಹೆಂಗರೆಂದರೆ ಬರೀ ಸೀರೆ ಮಾತ್ರ ಉಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಮಹಿಳೆಯರ ಹೆಗಲು ಬಾಚಿ ಸ್ನೇಹ ಬೆಳೆಸಿದ್ದು ಚೂಡೀದಾರ್. ಅದರ ಬೆನ್ನಿಗೇ ಬಂದು ಈನೈಟಿ. ಆ ನಂತರ ಬಂದದ್ದು ಟೀಶರ್ಟು, ಟೈಟ್ಸು. ಸ್ಕಿನ್ ಟೈಟು ಇತ್ಯಾದಿ ಮೊದಮೊದಲು ನೈಟಿಯನ್ನು ಸಂಪ್ರದಾಯಸ್ಥರ ಮನೆಯ ಹೆಣ್ಣು ಮಕ್ಕಳು ಮಾರು ದೂರವಿಟ್ಟಿರು.

ಆದರೆ ಯಾವಾಗ ಅದು ಸೀರೆಯಂತೆ ಕಿರಿಕಿಯಲ್ಲ, ತುಂಬಾ ಕಂಪರ್ಟಬಲ್ ಅನ್ನಿಸತೊಡಗಿತೋ ಆಗ ಮದುವೆಯಾದ ಹುಡುಗಿಯರು ಕೂಡಾ ನೈಟಿಯನ್ನು ಮೆಚ್ಚಿಕೊಂಡರು. ನೈಟಿ ಮಹಿಳೆಯರ ಮನೆ ಮಾತಾಗಿ ಹೋಯಿತು, ಮನೆಯೊಳಗಿದ್ದಾಗ, ರಾತ್ರಿ ಮಾತ್ರ ಧರಿಸುತ್ತಿದ್ದ ನೈಟಿ ನಿಧಾನಕ್ಕೆ ಕಂಪರ್ಟಬಲ್ ಅನ್ನಿಸುವುದಕ್ಕಿಂತ ಹೆಚ್ಚಾಗಿ ಫ್ಯಾಷನ್ ಅನ್ನಿಸತೊಡಗಿದೆ. ಆಗಲೇ ಮಹಿಳೆಯರು ಹಗಲು ಹೊತ್ತಿನಲ್ಲೂ ನೈಟಿ ಧರಿಸತೊಡಗಿದ್ದಾರೆ.

ಮನೆಯಿಂದ ಶಾಲೆಯವರೆಗೆ : ಬೆಳಗ್ಗೆ  ಅಂಗಳಕ್ಕೆ ರಂಗೋಲಿ ಬಿಡುವಾಗಿನಿಂದ ಆರಂಭಿಸಿ, ಮಕ್ಕಳನ್ನು ಸ್ಕೂಲಿಗೆ ಬಿಟ್ಟು ಬರುವಾಗ, ರಸ್ತೆಯಲ್ಲಿ ತಳ್ಳು ಗಾಡಿಯವನ ಬಳಿ ತರಕಾರಿ ಖರೀದಿಸುವಾಗ, ಮನೆಗೆ ಬಂದ ನೆಂಟರನ್ನು ಬಸ್ ಸ್ಟ್ಯಾಂಡ್’ಗೆ ಬಿಟ್ಟು ಬರುವಾಗ, ಪಕ್ಕದ ಬೀದಿಯ ಶಾಪ್ ಗೆ ಹೊಗಿಬರುವಾಗ, ಕೊನೆ ಕೊನೆಗೆ ಮಹಿಳಾ ಸಮಾಜಕ್ಕೆ ಹೊಗಿ ಬುರವವರೆಗೂ ಮಹಿಳೆಯರು ನೈಟಿ ತೊಟ್ಟುಕೊಂಡೇ ಓಡಾಡಲಾರಂಭಿಸಿದರು. ಫ್ಯಾಷನ್ ಹೆಸರಿನಲ್ಲಿ ಹೀಗೆ ಜಾರಿಯಾದ ನೈಟಿ ಕೊನೆ ಕೊನೆಗೆ  ನೋಡುವವರಿಗೆ ಗಲೀಜು ಅನ್ನಿಸಲಾರಂಭಿಸಿತು.

‘ನೈಟಿ’ ಎನ್ನುವ ಹೆಸರೇ ಹೇಳುವಂತೆ ಅದು ಕೇವಲ ರಾತ್ರಿ ಮಾತ್ರ ಧರಿಸಲು ಸಿದ್ಧಪಡಿಸಿದ ಬಟ್ಟೆ, ‘ನೈಟಿ’ಎನ್ನುವುದರ ಅಪಭ್ರಂಶವೇ ‘ನೈಟಿ’. ‘ನೈಟ್ ಗೌನ್’ ಎಂಬ ದುಬಾರಿಯ, ಶ್ರೀಮಂತ ಕೂಡಾ ಅಂತಹ ಬಟ್ಟೆಗಳಲ್ಲಿ ಒಂದು.

ನೈಟಿಯನ್ನು  ಹಗಲು ಹೊತ್ತಿನಲ್ಲಿ ಹಾಕಿಕೊಂಡು ಮಾರ್ಕೆಟ್ಟಿಗೆ ಹೋಗಿ ಬರುವುದು ಖಂಡಿತ ಫ್ಯಾಶನ್ ಅಲ್ಲ. ಹಾಗೇಯೇ ಮಗುವನ್ನು ಶಾಲೆಗೆ ಕರೆದೊಯ್ಯಲು, ಕರೆತರಲು ನೈಟಿ ಧರಿಸಿ ಹೋಗುವುದು ಖಂಡಿತ ಶಿಸ್ತು, ಸಭ್ಯತೆಯ ಲಕ್ಷಣವಂತೂ ಅಲ್ಲ, ಇವತ್ತು ಬರಿ ಐವತ್ತು ರೂಪಾಯಿಯಿಂದ ಆರಂಭಿಸಿ, ಎರಡೂವರೆ ಸಾವಿರ ರೂಪಾಯಿಯವರೆಗೆ ವಿವಿಧ ಕ್ವಾಲಿಟಿಯ ನೈಟಿ ದೊರೆಯುತ್ತವೆ. ಇದರಲ್ಲಿ ನೀವು ಯಾವಿದೇ ರೀತಿಯ ನೈಟಿ ಧರಿಸಿದರೂ ಅದು ಕೇವಲ ನೈಟಿಯೇ ಹೊರೆತು, ಚೆಂದದ ಮೈಸೂರು ರೇಷ್ಮೆ ಸೀರೆಯಲ್ಲ ಎನ್ನುವುದು ನಿಮ್ಮ ನೆನೆಪಿನಲ್ಲಿರಲಿ. ಎಷ್ಟೇ ದುಬಾರಿಯ ನೈಟಿಇದ್ದರೂ ಅದನ್ನು ಮನೆಯೊಳಗಿದ್ದಾಗ ಮತ್ತು ರಾತ್ರಿ ಹೊತ್ತಿನಲ್ಲಿ ಮಾತ್ರ ಧರಿಸಲು ಪ್ರಯತ್ನಿಸಿ.