2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಕಾರ್ಯತಂತ್ರ ರೂಪಿಸಲು ರಾಜ್ಯಕ್ಕೆ ಬರಲಿರುವ ಷಾ ವಿವಿಧ ಹಂತಗಳ ಪ್ರಮುಖರು, ಕಾರ್ಯಕರ್ತರ ಜತೆಗೆ ಸಮಾಲೋಚನೆ ನಡೆಸಲಿರುವ ಅವರು, ವಿವಿಧ ಜಿಲ್ಲೆಗಳಲ್ಲಿನ ಪಕ್ಷದ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ.

ಇದೇ 13ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ ಗುರೂಜಿ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಮತ್ತು ಹಲವು ರಾಜಕೀಯ ವಿಚಾರಗಳನ್ನು ಕುರಿತು ಚರ್ಚೆ ನೆಡೆಯಲಿವೆ.
ಯೋಗಿ ಆದಿತ್ಯನಾಥ್ ಅವರಿಗೂ ಆದಿಚುಂಚನಗಿರಿ ಕ್ಷೇತ್ರಕ್ಕೂ ಇರುವ ಸಂಬಂಧ ಇಲ್ಲಿದೆ ನೋಡಿ:
ಗೋರಖ್ಪುರದಲ್ಲಿರುವ ನಾಥ ಪಂಥದ ದೇವಸ್ಥಾನಕ್ಕೂ ಆದಿಚುಂಚನಗಿರಿಯ ಮಠಕ್ಕೂ ಹಿಂದಿನಿಂದಲೂ ಬಾಂಧವ್ಯವಿದೆ. ಈ ಮುಂಚೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಪ್ರತಿ ವರ್ಷ ಪೀಠಾಭಿಷೇಕ ನಡೆಯುವಾಗ ಗೋರಖ್ಪುರದ ಕಾಪಾಲಿಕರು ಅಲ್ಲಿಂದ ಬಂದು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದರು. ಅವರು ಬಂದು ವಾಪಸ್ಸು ತೆರಳುವಾಗ ಆದಿಚುಂಚನಗಿರಿ ಕ್ಷೇತ್ರದಿಂದಲೂ ಗೋರಖ್ಪುರದ ಗೋರಖನಾಥ್ ದೇವಸ್ಥಾನಕ್ಕೆ ಯಥೋಚಿತ ಸತ್ಕಾರ, ಕಾಣಿಕೆಗಳನ್ನು ಸಲ್ಲಿಸುತ್ತಿತ್ತು ಮತ್ತು ಗೋರಖ್ಪುರದ ಮೂಲಕ ಅದರಲ್ಲಿ ದೊಡ್ಡ ಪಾಲು ನೇಪಾಳದ ಪಶುಪತಿನಾಥ ದೇವಾಲಯಕ್ಕೂ ಸಲ್ಲಿಕೆ ಆಗುತ್ತಿತ್ತು. ಹೀಗಾಗಿ ಆದಿಚುಂಚನಗಿರಿ ಕ್ಷೇತ್ರದ ನಿರ್ವಹಣೆಯ ವಿಷಯದಲ್ಲೂ ಗೋರಖಪುರದ ದೇವಸ್ಥಾನ ನಿಗಾ ವಹಿಸುತ್ತಿತ್ತು.

ಇದಕ್ಕೆ ಪೂರಕವಾಗಿ ಪ್ರತಿ ವರ್ಷವೂ ಗೋರಖ್ಪುರದ ಕಾಪಾಲಿಕರು ಆದಿಚುಂಚನಗಿರಿಗೆ ಬರುತ್ತಿದ್ದರು. ಆದರೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳಿಗೂ ಹಿಂದೆ ಪೀಠಾಧ್ಯಕ್ಷರಾಗಿದ್ದ ಸ್ವಾಮೀಜಿಗಳು, ಕಾಲಭೈರವೇಶ್ವರನನ್ನು ನಾವು ಪೂಜಿಸುತ್ತೇವೆ. ಹೀಗಾಗಿ ನಿರ್ವಹಣೆಯ ವಿಷಯದಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರಂತೆ. ಹೀಗಾಗಿ ಪ್ರತಿ ವರ್ಷ ಬರುತ್ತಿದ್ದ ಕಾಪಾಲಿಕರು ಈಗ ಹೊಸ ಪೀಠಾಧಿಪತಿಗಳ ನೇಮಕವಾದಾಗ ಮಾತ್ರ ಆದಿಚುಂಚನಗಿರಿಗೆ ಬರುತ್ತಾರೆ.

ಅದೇನೇ ಇದ್ದರೂ ಆದಿಚುಂಚನಗಿರಿ ಹಾಗೂ ಗೋರಖ್ನಾಥ ದೇವಾಲಯದ ಸಂಬಂಧ ಅವಿನಾಭಾವ. ಹೀಗಾಗಿಯೇ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಅವರು ಮುಂಚಿನಿಂದಲೂ ಆದಿಚುಂಚನಗಿರಿ ಕ್ಷೇತ್ರದ ಜತೆ ಸಂಪರ್ಕವಿಟ್ಟುಕೊಂಡಿದ್ದರು. ಆದಿಚುಂಚನಗಿರಿ ಮಠ ಬೆಂಗಳೂರಿನ ವಿಜಯನಗರದಲ್ಲಿ ಆಯುರ್ವೇದಿಕ್ ಕಾಲೇಜು ಪ್ರಾರಂಭಿಸಿದಾಗ ಅದರ ಉದ್ಘಾಟನೆಗೂ ಆಗಮಿಸಿದ್ದರು. ಹೀಗೆ ಆದಿಚುಂಚನಗಿರಿ ಪೀಠಾಧಿಪತಿಗಳ ಜತೆ ಯೋಗಿ ಆದಿತ್ಯನಾಥ್ ಸತತ ಸಂಪರ್ಕದಲ್ಲಿದ್ದಾರೆ.

ಆದ್ದರಿಂದಲೇ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಶ್ರೀ ನಿರ್ಮಲಾನಂದ ಸ್ವಾಮೀಜಿಗಳಿಗೂ ಆಹ್ವಾನ ಬಂದಿತ್ತು. ಹೀಗಾಗಿ ಕರ್ನಾಟಕದ ರಾಜಕೀಯದಲ್ಲಿ ಅಮಿತ್ ಷಾ ಬಂದಮೇಲೆ ಏನು ಬೇಕಾದರೂ ಆಗಬಹುದು. ನಿರ್ಮಾಲಾನಂದ ನಾಥ ಸ್ವಾಮೀಜಿಗಳು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆದ್ರೂ ಆಶ್ಚರ್ಯ ಪಡುವಾಗಿಲ್ಲ ಅನ್ಸುತ್ತೆ.