ಇನ್ಮುಂದೆ ಎಟಿಎಂ ಬಳಕೆ ಸುಲಭವಲ್ಲ; ಒಮ್ಮೆ ಹಣ ಡ್ರಾ ಮಾಡಿದ್ರೆ ಕನಿಷ್ಠ 6 ಗಂಟೆ ಹಣ ಡ್ರಾಗೆ ಅವಕಾಶವಿಲ್ಲ, ಏನಿದು ಹೊಸ ನಿಯಮ?

0
509

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ನಿಯಮಗಳನ್ನು ಜಾರಿಗೆ ತರುತ್ತಿದ್ದು, ಸದ್ಯ ATM ಗಳಲ್ಲಿ ಆಗುತ್ತಿರುವ ವಂಚನೆಗೆ ಹೊಸ ನಿಯಮ ತರಲು ಚಿಂತನೆ ನಡೆಸಿದ್ದು. ಎಟಿಎಂನಲ್ಲಿ ಹಣ ವಂಚನೆ, ಎಟಿಎಂ ನಲ್ಲಿ ಹಣ ಪಡೆದ ಗ್ರಾಹಕರಿಗೆ ಬೆದರಿಕೆ ಹಾಕಿ ದರೋಡೆ ಹೀಗೆ ಹಲವು ರೀತಿಯ ಎಟಿಎಂ ಸಂಬಂಧಿ ಹಣ ವಂಚನೆ ಮತ್ತು ಕಳುವು ಪ್ರಕರಣಗಳು ಹತ್ತಿಕ್ಕಲು ಎಟಿಎಂ ಕಾರ್ಡ್ ದುರ್ಬಳಕೆ ತಡೆಯುವ ಹಿನ್ನೆಲೆಯಲ್ಲಿ ದೆಹಲಿಯ ರಾಜ್ಯಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‍ಎಲ್‍ಬಿಸಿ) ಪ್ರಕಾರ ಎಟಿಎಂ ಮೂಲಕ ಎರಡು ವಹಿವಾಟಿನ ಮಧ್ಯೆ 6-12 ಗಂಟೆಗಳ ಅಂತರವಿರಬೇಕು ಎಂದಿದೆ. ಅಂದ್ರೆ ಒಮ್ಮೆ ಹಣ ಡ್ರಾ ಮಾಡಿದ ಮೇಲೆ ಕನಿಷ್ಠ 6 ಗಂಟೆ ಹಣ ಡ್ರಾಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದೆ.

Also read: ಇನ್ಮುಂದೆ ಅಂಚೆ ಕಚೇರಿಯಲ್ಲಿ ಸಿಗಲಿದೆ ಸಾಲ; ಬ್ಯಾಂಕ್ ನ ಎಲ್ಲ ಸೇವೆಗಳು ಈಗ ಅಂಚೆ ಕಚೇರಿಯಲ್ಲಿ ಲಭ್ಯ!!

ATM ಬಳಕೆಗೆ ಸಮಯ ನಿಗದಿ?

ಹೌದು ಎಸ್‍ಎಲ್‍ಬಿಸಿ ಸಮಿತಿ ಎರಡು ಎಟಿಎಂ ವ್ಯವಹಾರ ನಡುವೆ ಸಮಯ ನಿಗದಿಗೆ ಚಿಂತನೆ ನಡೆಸಿದೆ. ಒಂದು ವೇಳೆ ಎಸ್‍ಎಲ್‍ಬಿಸಿ ಸಮಿತಿಯ ಪ್ರಸ್ತಾವವನ್ನು ಬ್ಯಾಂಕ್ ಒಪ್ಪಿಕೊಂಡಲ್ಲಿ ಈ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳಿವೆ. ಒಂದು ಎಟಿಎಂ ಕಾರ್ಡ್ ನ ಎರಡು ವ್ಯವಹಾರಗಳ ನಡುವೆ ಅಂದಾಜು 6 ರಿಂದ 12 ಗಂಟೆ ಸಮಯ ನಿಗದಿಗೆ ಸಮಿತಿ ಸಲಹೆ ನೀಡಿದೆ. ಅಂದ್ರೆ ಒಮ್ಮೆ ನೀವು ಎಟಿಎಂನಿಂದ ಹಣ ತೆಗೆದರೆ ಪುನಃ 6 ರಿಂದ 12 ಗಂಟೆವರೆಗೆ ಅದೇ ಕಾರ್ಡ್ ನಿಂದ ಡ್ರಾ ಮಾಡಲು ಸಾಧ್ಯವಾಗಲ್ಲ. ಈ ಬಗ್ಗೆ ಕೇವಲ ಚರ್ಚೆಗಳು ನಡೆದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಎಟಿಎಂ ಹಣ ಕಳುವು ತಡೆಯಲು ಕೆಲವು ಸಲಹೆಗಳನ್ನು ನೀಡಿದ್ದು, ಎಟಿಎಂ ನಲ್ಲಿ ಹಣ ಪಡೆಯಲು ಸಮಯಮಿತಿ ನಿಗದಿಪಡಿಸುವ ಸಲಹೆಯನ್ನು ಸಮಿತಿಯು ನೀಡಿದೆ.

Also read: ಬ್ಯಾಂಕ್-ಗಳಿಗೆ ನೀಡಿದ ಮೊಬೈಲ್​ ನಂಬರ್ ಚೇಂಜ್ ಮಾಡುವ ಮುನ್ನ ಎಚ್ಚರ; ಯಾಕೆ ಅಂತ ಈ ಮಾಹಿತಿ ನೋಡಿ..

ಒಂದು ಬಾರಿ ಎಟಿಎಂನಿಂದ ಹಣ ಪಡೆದ ಬಳಿಕ ಮತ್ತೆ ಹಣ ಪಡೆಯಲು 6-12 ಗಂಟೆ ಅವಧಿ ಸಮಯ ನಿಗದಿಪಡಿಸುವ ಸಲಹೆಸಹ ಅದರಲ್ಲಿ ಸೇರಿದೆ. ಗ್ರಾಹಕರು ಈಗ ಎಟಿಎಂನಿಂದ ಹಣ ಪಡೆಯಲು ಯಾವುದೇ ಸಮಯ ನಿಗದಿ ಇಲ್ಲ. ಆದರೆ ಈ ನಿಯಮ ಅನ್ವಯವಾದರೆ ದಿನಕ್ಕೆ ಎರಡು ಭಾರಿ ಮಾತ್ರವೇ ಹಣ ಪಡೆಯಬಹುದಾಗಿರುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯ ಎಸ್‍ಎಲ್‍ಬಿಸಿ ಸಂಯೋಜಕರು ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಡಿ, ಸಿಇಓ ಮುಕೇಶ್ ಕುಮಾರ್ ಜೈನ್, ಎಟಿಎಂನಲ್ಲಿ ಕಾರ್ಡ್ ದುರ್ಬಳಕೆ ಅಪರಾಧ ಪ್ರಕರಣಗಳು ಹೆಚ್ಚಾಗಿ ರಾತ್ರಿ ಮತ್ತು ಬೆಳಗಿನ ಜಾವದ ನಡುವೆಯೇ ಹೆಚ್ಚಾಗಿ ನಡೆದಿವೆ.

Also read: ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು 10 ವರ್ಷದಿಂದ ಬಳಸದಿದ್ದರೆ ಏನಾಗುತ್ತೆ? ಇಲ್ಲಿದೆ ನೋಡಿ ಮಾಹಿತಿ..

ಈ ನಿಗದಿತ ಸಮಯದಲ್ಲಿ ಕಾರ್ಡ್ ದುರ್ಬಳಕೆ ಹೆಚ್ಚಾಗಿ ಕಂಡು ಬಂದಿದೆ. ಸಮಿತಿ ನಮ್ಮ ಮುಂದೆ ಪ್ರಸ್ತಾವವನ್ನು ಇಟ್ಟಿದ್ದು, ಕಳೆದ ಒಂದು ವಾರದಿಂದ 18 ಬ್ಯಾಂಕ್ ಗಳ ಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. 2018-19ರ ವೇಳೆ ದೆಹಲಿಯಲ್ಲಿ 179, ಮಹಾರಾಷ್ಟ್ರದಲ್ಲಿ 233 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. 2018-19ರ ಅವಧಿಯಲ್ಲಿ ಇದೂವರೆಗೂ ದೇಶದೆಲ್ಲಡೆ 980ಕ್ಕೂ ಅಧಿಕ ದೂರು ದಾಖಲಾಗಿವೆ. ಕಳೆದ ವರ್ಷ 911 ಪ್ರಕರಣಗಳು ದಾಖಲಾಗಿತ್ತು. ಇತ್ತೀಚೆಗೆ ಎಟಿಎಂ ಕಾರ್ಡ್ ಕ್ಲೋನಿಂಗ್ (ಬಳಕೆದಾರರ ಮಾಹಿತಿಯ ಕಳ್ಳತನ) ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ ವಿದೇಶಿ ಪ್ರಜೆಗಳು ಭಾಗಿಯಾಗಿರುವ ಶಂಕೆಗಳು ವ್ಯಕ್ತವಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಸಮಯ ನಿಗದಿಗೆ ನಿಯಮ ಜಾರಿಯಾದರೆ ಗ್ರಾಹಕನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.