ಸಾಮಾನ್ಯವಾಗಿ ಮೆಟ್ರೋ ಪ್ರಯಾಣಿಕರು ನಿಲ್ದಾಣದ ಒಳಗೆ ಯಾವುದೇ ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಎನ್ನುವ ನಿಯಮವಿದೆ ಈ ಬಗ್ಗೆ ನೋಟೀಸ್ ಕೂಡ ಅಂಟಿಸಲಾಗಿದೆ. ಹಾಗೇನಾದರೂ ಹರಿತವಾದ ವಸ್ತು, ಅಪಾಯಕಾರಿ ವಸ್ತುಗಳನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರೆ ತಪಾಸಣೆ ಮಾಡುವಾಗಲೇ ಅದನ್ನು ತೆಗೆದಿಟ್ಟುಕೊಳ್ಳಲಾಗುತ್ತದೆ. ಇಲ್ಲ ಆ ವ್ಯಕ್ತಿಯನ್ನು ಮೆಟ್ರೋದ ಒಳಗಡೆ ಬಿಡುವುದಿಲ್ಲ ಆದರೆ ಮಹಿಳೆಯರಿಗಾಗಿ ಹೊಸ ನಿಯಮ ಮಾಡಲಾಗಿದ್ದು ಮೆತ್ರೋದಲ್ಲಿ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಬಹುದು.
ಮೆಟ್ರೋದಲ್ಲಿ ಪೆಪ್ಪರ್ ಸ್ಪ್ರೇ ಅವಕಾಶ?
ಹೌದು ದೇಶದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಳೆದ ವಾರದಿಂದ ಅಂತು ದಿನಕ್ಕೆ ಮೂರು ನಾಲ್ಕು ಅತ್ಯಾಚಾರಗಳು ನಡೆಯುತ್ತಾನೆ ಇವೆ. ಅದರಲ್ಲಿ ಹೈದರಾಬಾದ್ನ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ರಾಂಚಿಯ ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ತಮಿಳುನಾಡು ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ, ಗುಜರಾತ್ ಬಾಲಕಿ ಮೇಲಿನ ಅತ್ಯಾಚಾರ ಹೀಗೆ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಮಹಿಳೆಯರು ಧೈರ್ಯವಾಗಿ ಓಡಾಡಲು ಆತಂಕ ಪಡುವ ಸ್ಥಿತಿ ಎದುರಾಗಿದೆ.
Also read: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಚ್ ಡಿಕೆ, ಡಿಕೆಶಿ ಭೇಟಿ!! ಉಪಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತ??
ಈ ಎಲ್ಲ ಘಟನೆಗಳನ್ನು ನೋಡಿ ಮಹಿಳೆಯರು ತಮ್ಮ ಆತ್ಮ ರಕ್ಷಣೆಗಾಗಿ ಕಾರದ ಪುಡಿ, ಹರಿತವಾದ ವಸ್ತುಗಳನ್ನು ಇಟ್ಟುಕೊಳ್ಳಬೇಕು ಎನ್ನುವ ಸಂದೇಶಗಳು ಕೇಳಿ ಬರುತ್ತಿದ್ದವು, ಆದರೆ ಬೆಂಗಳೂರಿನಂತ ಮೆಟ್ರೋ ನಿಲ್ದಾಣಗಳಲ್ಲಿ ಆಯುದ ವಸ್ತುಗಳು, ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಹೇಗೆ ಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಅವಕಾಶ ನೀಡುವ ಸಲುವಾಗಿ ಮೆಟ್ರೋದಲ್ಲಿ ಓಡಾಡುವ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಬಿಎಂಆರ್ಸಿಎಲ್ ಅವಕಾಶ ಕಲ್ಪಿಸಿದೆ.
ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿರುವ ಬಿಎಂಆರ್ಸಿಎಲ್ ಮೆಟ್ರೋ ಸ್ಟೇಷನ್ಗಳಲ್ಲಿ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇಗಳನ್ನು ಕೊಂಡೊಯ್ಯಲು ಅವಕಾಶ ನೀಡಬೇಕು ಎಂದು ಸೂಚಿಸಿದ್ದು, ಅದರಂತೆ ನಿಲ್ದಾಣದೊಳಗೆ ಯಾವುದೇ ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಹಾಗೇನಾದರೂ ಹರಿತವಾದ ವಸ್ತು, ಅಪಾಯಕಾರಿ ವಸ್ತುಗಳನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರೆ ತಪಾಸಣೆ ಮಾಡುವಾಗಲೇ ಅದನ್ನು ತೆಗೆದಿಟ್ಟುಕೊಳ್ಳಲಾಗುತ್ತದೆ. ಆದರೆ, ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಮಹಿಳೆಯರಿಗೆ ವಿಶೇಷ ಅನುಮತಿ ನೀಡಲು ಬಿಎಂಆರ್ಸಿಎಲ್ ಸಂಸ್ಥೆ ಮುಂದಾಗಿದೆ.
Also read: ಉಪಚುನಾವಣೆಯಲ್ಲಿ ಜೋರಾಗಿದೆ ಹಣ, ಚಿಕನ್ ಪಾಲಿಟಿಕ್ಸ್; ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲು.!
ಇದರ ಉದ್ಧೇಶ ಕೆಲವರ ಆಫೀಸ್ ಮುಗಿಯುವಾಗ ಸಂಜೆಯಾಗುತ್ತದೆ. ಆಫೀಸ್ ಮುಗಿಸಿ ಮೆಟ್ರೋದಲ್ಲಿ ಬಂದ ನಂತರ ಮನೆ ಸೇರಲು ಬೇರೆ ವಾಹನಗಳಲ್ಲಿ ಹೋಗಬೇಕಾಗುತ್ತದೆ ಅಥವಾ ನಡೆದುಕೊಂಡು ಹೋಗಬೇಕಾಗುತ್ತದೆ. ಈ ವೇಳೆಯಲ್ಲಿ ನಮ್ಮ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡಿರುತ್ತೇವೆ. ಅದಕ್ಕೂ ಯಾಕೆ ಅಡ್ಡಿಪಡಿಸುತ್ತೀರಿ? ಎಂದು ಹಲವರು ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದರು. ಹೀಗಾಗಿ, ಮೆಟ್ರೋ ಸ್ಟೇಷನ್ಗಳ ಎಲ್ಲ ಸೆಕ್ಯುರಿಟಿ ಸಿಬ್ಬಂದಿಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಅವರಿಗೆ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.