ನಿಮ್ಮ ಆಧಾರ್ ಕಾರ್ಡ್-ನಲ್ಲಿ ಈ 6 ತಿದ್ದುಪಡಿಗೆ ಯಾವುದೇ ದಾಖಲೆ ಬೇಕಿಲ್ಲ; ಹಾಗಾದ್ರೆ ಯಾವವು 6 ಬದಲಾವಣೆ ಇಲ್ಲಿದೆ ಮಾಹಿತಿ.!

0
5980

ಮುಖ್ಯ ದಾಖಲೆಯಾದ ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಬೇಕೇಬೇಕು ಆದರೆ ಮೊದಲು ಕಾರ್ಡ್ ಮಾಡಿಸುವ ವೇಳೆ ಆದ ಕೆಲವು ತಪ್ಪುಗಳಿಂದ ಆಧಾರ್ ಕಾರ್ಡ್ ತಪ್ಪಾಗಿರುತ್ತೆ, ಅದನ್ನು ತಿದ್ದುಪಡಿ ಮಾಡಲು ದಿನಪೂರ್ತಿ ಲೈನ್-ನಲ್ಲಿ ನಿಂತು ಯಾರು ಮಾಡಿಸಬೇಕು ಎನ್ನುವುದು ಜನರ ಅಭಿಪ್ರಾಯವಾದರೆ ಇದಕ್ಕೆ ಯುಐಡಿಎಐ ಸರಳವಾದ ಕೆಲವು ಮಾರ್ಗಗಳನ್ನು ತಿಳಿಸಿದ್ದು, ಈ 6 ಬದಲಾವಣೆಗಳಿಗೆ ದಾಖಲೆ ಬೇಕಿಲ್ಲ ಎಂದು ಹೇಳಿದೆ. ಒಂದು ವೇಳೆ ನಿಮ್ಮ ಆಧಾರ್ ದಲ್ಲಿ ತಿದ್ದುಪಡಿ ಇದ್ದರೆ ಈ ಮಾಹಿತಿ ತಿಳಿಯುವುದು ಅತಿಮುಖ್ಯವಾಗಿದೆ.

ಹೌದು ನೀವೂ ಸಹ ಆಧಾರ್ ನವೀಕರಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ನಿಯಮ ತಿಳಿದಿರಲಿ.

1. ಫೋಟೋಗ್ರಾಫ್
2. ಬಯೋಮೆಟ್ರಿಕ್ ಫಿಂಗರ್ ಫ್ರಿಂಟ್
3. ಐರಿಸ್ ಸ್ಕ್ಯಾನ್
4. ಲಿಂಗ
5. ಮೊಬೈಲ್ ನಂಬರ್
6. ಇ-ಮೇಲ್ ಐಡಿ

ಈ ಬದಲಾವಣೆಗಳಿಗೆ ಯಾವುದೇ ದಾಖಲಾತಿಯನ್ನು ಒದಗಿಸುವ ಅಗತ್ಯವಿಲ್ಲ. ಈ ಆರು ಬದಲಾವಣೆಗಳಿಗಾಗಿ ನಿಮ್ಮ ಆಧಾರ್ ಕಾರ್ಡ್ ಜೊತೆ ತೆರಳಿದರೆ ನಿಮ್ಮ ಆಧಾರ್ ಚೀಟಿ ಅಪ್‍ಡೇಟ್ ಆಗಲಿದೆ.

ವಿಳಾಸವನ್ನು ಬದಲಾಯಿಸಲು?

ಆಧಾರ್ ಕಾರ್ಡ್ ನಲ್ಲಿಯ ನಿಮ್ಮ ವಿಳಾಸವನ್ನು ಬದಲಾಯಿಸಲು ತೆರಳುತ್ತಿದ್ದರೆ ಅಗತ್ಯ ದಾಖಲೆ ಜೊತೆ ನೊಂದಾಯಿಸಿಕೊಂಡ ಮೊಬೈಲ್ ನಂಬರ್ ತೆಗೆದುಕೊಂಡು ಹೋಗಬೇಕು. ವಿಳಾಸ ಬದಲಾವಣೆ ಸಮಯದಲ್ಲಿ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ.

ಜನ್ಮ ದಿನಾಂಕ ತಪ್ಪಾದರೆ?

ಆಧಾರ್ ನಲ್ಲಿ ಜನ್ಮ ದಿನಾಂಕದಲ್ಲಿ ತಪ್ಪಾಗಿದ್ದಲ್ಲಿ ಸರಿಪಡಿಸಲು ಯುಐಡಿಎಐ ಷರತ್ತು ವಿಧಿಸಿದೆ. ಇದರ ಪ್ರಕಾರ, ನಿಮ್ಮ ಜನ್ಮ ದಿನಾಂಕ ಮೂರು ವರ್ಷದೊಳಗಿನ ವ್ಯತ್ಯಾಸ ಹೊಂದಿದ್ದರೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ದಾಖಲೆ ತೆಗೆದುಕೊಂಡು ಹೋಗಿ ಸರಿಪಡಿಸಿಕೊಳ್ಳಬಹುದು. ಮೂರು ವರ್ಷಗಳಿಗಿಂತ ಹೆಚ್ಚು ವ್ಯತ್ಯಾಸವಿದ್ದರೆ ಪ್ರಾದೇಶಿಕ ಮೂಲ ಕೇಂದ್ರಕ್ಕೆ ದಾಖಲಾತಿಗಳೊಂದಿಗೆ ಹೋಗಬೇಕಾಗುತ್ತದೆ. ಒಮ್ಮೆ ಮಾತ್ರ ಈ ಬದಲಾವಣೆ ಸಾಧ್ಯವೆಂದು ಯುಐಡಿಎಐ ಹೇಳಿದೆ. ಅದರಂತೆ ಹುಟ್ಟಿದ ದಿನಾಂಕ, ಬದಲಾವಣೆಗಾಗಿ ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಗ್ರೂಪ್-ಎ ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣೀಕೃತ ಜನ್ಮ ದಿನಾಂಕ, ಫೋಟೋ ಗುರುತಿನ ಚೀಟಿಯ ಪ್ರಮಾಣಪತ್ರ, ಕೇಂದ್ರ ಸರ್ಕಾರಿ ಆರೋಗ್ಯ ಸೇವಾ ಯೋಜನೆ ಫೋಟೋ ಕಾರ್ಡ್ ಅಥವಾ ಮಾಜಿ ಸೈನಿಕರ ಫೋಟೋ ಐಡಿ, 10 ನೇ ತರಗತಿ ಅಥವಾ 12 ನೇ ತರಗತಿ ಪ್ರಮಾಣಪತ್ರ ಈ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು.

ಆಧಾರ್ ಕಾರ್ಡ್ ಕಳೆದುಕೊಂಡಾಗ ಏನು ಬೇಕು?

ನೀವು ಆಧಾರ್ ಕಳೆದುಕೊಂಡರೆ ಆನ್ಲೈನ್ ಮೂಲಕ ಮನವಿ ನಕಲಿ ಕಾರ್ಡ್ ಪ್ರಿಂಟ್ ಮಾಡಬಹುದು. ಇದಕ್ಕಾಗಿ ನಾಮಿನಲ್ ಮೊತ್ತ ರೂ. 50 ಪಾವತಿಸಬೇಕಾಗುತ್ತದೆ. ಜೊತೆಗೆ ನಿಮ್ಮ Virtual Identification number ಗೊತ್ತಿರಬೇಕು. ಮೊಬೈಲ್ ನಂಬರ್ ಆಧಾರ್ ನೊಂದಿಗೆ ಲಿಂಕ್ ಆಗಿದ್ದರೆ ನಿಮ್ಮ ಮೊಬೈಲ್ ಒಟಿಪಿ ಬರುತ್ತದೆ.

Also read: ಪೊಲೀಸರು ಮಹಿಳೆಯರನ್ನು ಬಂಧಿಸುವ ಸಯಮದಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕು.!