ವಾಹನದ ಯಾವುದೇ ದಾಖಲೆಗಳಿಲ್ಲವೆಂದು ದಂಡ ಕಟ್ಟುವುದು ಬೇಡ; ಈ ಡಿಜಿಲಾಕರ್-ನಿಂದ ದಂಡ ಕಟ್ಟದೆ ತಪ್ಪಿಸಿಕೊಳ್ಳಲುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.!

0
986

ಸಂಚಾರಿ ನಿಯಮಕ್ಕೆ ಸಂಬಂಧಿಸಿದಂತೆ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಸೇರಿ ಹಲವು ದಾಖಲಾತಿಗೆ ಸಾವಿರಾರು ರೂ. ದಂಡವನ್ನು ವಸೂಲಿ ಮಾಡುತ್ತಿರುವ ಪೊಲೀಸ್-ರಿಂದ ತಪ್ಪಿಸಿಕೊಳ್ಳಲು ಕಳೆದ ವರ್ಷವೇ ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಯ (ITA) ನಿಯಮಗಳಂತೆ ಟ್ರಾಫಿಕ್ ಪೊಲೀಸರು ಮತ್ತು ರಾಜ್ಯ ಸರ್ಕಾರಗಳು, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಪತ್ರ ಮತ್ತು ಇನ್ಶೂರೆನ್ಸ್ ದಾಖಲೆ ಪತ್ರಗಳನ್ನು ಡಿಜಿಲಾಕರ್ ಮೂಲಕ ಪರಿಶೀಲನೆಗೆ ಮುಂದಾಗಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ಸೂಚಿಸಿದೆ. ನೀವು ಸರಳವಾಗಿ ದಂಡದಿಂದ ತಪ್ಪಿಸಿಕೊಳ್ಳಬಹುದು ಅದು ಹೇಗೆ ಅಂತ ಕೆಳಗಿನ ಮಾಹಿತಿ ನೋಡಿ.

Also read: ನೆರೆ ಸಂತ್ರಸ್ತರಿಗೆ ಹಣ ಸಹಾಯ ಮಾಡಲು ಕನ್ನಡದ ಕೋಟ್ಯಧಿಪತಿ ಬರುತ್ತಿರುವ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ; ಕೋಟಿ ಗೆಲ್ಲುವುದು ನಿಜವಾ?

ಹೌದು ಡಿಜಿಲಾಕರ್ ಮತ್ತು ಎಂಪರಿವಾಹನ್ ನಂತಹ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಡಿಎಲ್‌ಗಳು ಮತ್ತು ಆರ್‌ಸಿಗಳನ್ನು ಸ್ಥಳದಲ್ಲಿಯೇ ಪಡೆಯಬಹುದು. ಇದರಿಂದ ನಿಮ್ಮ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರದ ಹಾರ್ಡ್ ಪ್ರತಿಗಳನ್ನು ಕೊಂಡೊಯ್ಯುವ ಅವಶ್ಯಕತೆ ಇರುವುದಿಲ್ಲ, ಅಷ್ಟೇ ಅಲ್ಲದೆ ದಂಡವು ಕೂಡ ಬಿಳ್ಳುವುದಿಲ್ಲ. ಹಾಗಾದ್ರೆ ಡಿಜಿಲಾಕರ್ ಮತ್ತು ಎಂಪರಿವಾಹನ್ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆ ಮಾಡುವುದು ಹೇಗೆ? ಎನ್ನುವುದು ಇಲ್ಲಿದೆ.

ಡಿಜಿ ಲಾಕರ್ ಅಂದ್ರೆ ಏನು ?

ಡಿಜಿ ಲಾಕರ್ ಒಂದು ವೈಯಕ್ತಿಕ ಸಂಗ್ರಹ ಸ್ಥಳ, ಇದನ್ನು ಪ್ರತಿ ನಿವಾಸಿಯ ಆಧಾರ್ ಸಂಖ್ಯೆಯನ್ನು ಆಧರಿಸಿ ಲಿಂಕ್ ಮಾಡಲಾಗಿ ಮೀಸಲಿಟ್ಟ ವೈಯಕ್ತಿಕ ಸಂಗ್ರಹ ಸ್ಥಳ ಎಂದು ಪರಿಗಣಿಸಬಹುದು. ಇ-ದಾಖಲೆಗಳು, ಯುನಿಫಾರ್ಮ್ ರಿಸೋರ್ಸ್‌ ಐಡೆಂಟಿಫೈಯರ್‌ (ಯುಆರ್‌ಐ) (ಧ್ವನಿ ಮುದ್ರಿಕೆ, ವಿಡಿಯೋ, ಬರಹ) ಇತ್ಯಾದಿಗಳನ್ನೂ ಇದರಲ್ಲಿ ಶೇಖರಿಸಿಡಬಹುದು. ಡಿ ಜಿ ಲಾಕರ್ ಅನ್ನು ವೆಬ್ ಪೋರ್ಟಲ್ ಅಥವಾ ಮೊಬೈಲ್ ಅಪ್ಲೀಕೆಷನ್ ಮೂಲಕ ಪ್ರವೇಶಿಸಬಹುದಾಗಿದೆ.

ಡಿಜಿಲಾಕರ್ ಬಳಕೆ ಮಾಡುವುದು ಹೇಗೆ?

Also read: ವಾಹನ ಮಾಲೀಕರಿಗೆ ಬಿಗ್ ಶಾಕ್; ರಸ್ತೆಯಲ್ಲಿ, ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಲಿಸಿದ್ರೆ ಬೀಳುತ್ತೆ ಭಾರಿ ದಂಡ.!

ಮೊಬೈಲ್ ಪ್ಲೆಸ್ಟೋರ್ ಮೂಲಕ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡ ನಂತರ ಸೈನ್‌ ಇನ್‌ ಆಯ್ಕೆ ಕ್ಲಿಕ್‌ ಮಾಡಿ ಲಾಗಿನ್‌ ಆಗಿ. ಇಲ್ಲಿ ನಿಮ್ಮ ಅಧಿಕೃತ ಮೊಬೈಲ್‌ ನಂಬರ್‌ ನೀಡಬೇಕು. ಆ ನಂಬರ್‌ಗೆ ಒನ್‌ ಟೈಮ್‌ಪಾಸ್‌ವರ್ಡ್‌ (ಒಟಿಪಿ) ಬರುತ್ತದೆ. ಓಟಿಪಿ ನಂಬರ್ ಬಳಸಿ ಮೊಬೈಲ್‌ ನಂಬರನ್ನು ಖಚಿತ ಪಡಿಸಿ. ಇದೇ ವೇಳೆ ಆ್ಯಪ್‌ ನಿಮ್ಮ ಯೂಸರ್‌ ನೇಮ್‌, ಪಾಸ್‌ವರ್ಡ್‌ ಹಾಕಲೂ ಹೇಳುತ್ತದೆ. ಪಾಸ್‌ ವರ್ಡ್‌ ನೀಡಿದ ಬಳಿಕ ನಿಮ್ಮ ಆಧಾರ್‌ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಂತರ ಬಲಭಾಗದಲ್ಲಿರುವ “ಲಿಂಕ್‌ ಆಧಾರ್‌’ ಬಟನ್‌ ಅದುಮಿ 12 ಸಂಖ್ಯೆಗಳ ಆಧಾರ್‌ ಅನ್ನು ನಮೂದಿಸಿ. “ಕಂಟಿನ್ಯೂ’ ಕೊಟ್ಟಾಗ ನಿಮ್ಮ ಅಧಿಕೃತ ಮೊಬೈಲ್‌ ನಂಬರ್‌ಗೆ ಒಟಿಪಿ ಬರುತ್ತದೆ.ಎಲ್ಲಾ ಪರಿಶೀಲನೆ ಪ್ರಕ್ರಿಯೆಗಳು ಮುಗಿದ ನಂತರ, ನಿಮ್ಮ ಇಂಟರ್ಫೇಸ್‌ನಲ್ಲಿ ನಿಮ್ಮ ಪರವಾನಗಿ ಅಥವಾ ವಾಹನ ನೋಂದಣಿ ಪ್ರಮಾಣಪತ್ರದ ಚಿತ್ರವನ್ನು ಅಪ್‌ಲೋಡ್ ಮಾಡಬಹುದು ಮತ್ತು ಸಂಗ್ರಹಿಸಬಹುದು.

ಕಾಪಿಗಳನ್ನು ಹೇಗೆ ಸಂಗ್ರಹಿಸುವುದು?

ಎಂಪಿರಿವಾಹನ್ ಅಪ್ಲಿಕೇಶನ್‌ನಲ್ಲಿ ಡಾಕ್ಯುಮೆಂಟ್‌ಗಳ ಡಿಜಿಟಲ್ ಕಾಪಿಗಳನ್ನು mParivahan ಅಪ್ಲಿಕೇಶನ್ ಅಖಿಲ ಭಾರತ ಆರ್‌ಟಿಒ ವಾಹನ ನೋಂದಣಿ ಸಂಖ್ಯೆ ನೋಡುವ ಸರ್ಕಾರಿ ಅಪ್ಲಿಕೇಶನ್ ಆಗಿದ್ದು. ತಮ್ಮ ದಾಖಲೆಗಳನ್ನು mParivahan ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲು ಬಯಸುವವರು, ನಿಮ್ಮ RC ಮತ್ತು DL ವಿವರಗಳನ್ನು ಹುಡುಕಲು Google Play Store ಅಥವಾ iOS App Store ನಿಂದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಪ್ಲಿಕೇಶನ್‌ನ ಮೇಲ್ಭಾಗದಲ್ಲಿ ವಿವರಗಳನ್ನು ಹಾಕಿ ನಂತರ ನೀವು ಯಾವುದೇ ವಾಹನ ನೋಂದಣಿ ಪ್ರಮಾಣಪತ್ರ ಅಥವಾ ಚಾಲನಾ ಪರವಾನಗಿ ವಿವರ ವಿರುವ ಪ್ರತಿಯನ್ನು ಪಡೆಯಬಹುದು.

Also read: ನಿನ್ನೆ ವಾಹನ ಸವಾರರಿಗೆ ಹಾಕಿದ ಭಾರಿ ದಂಡಕ್ಕೆ ಹೆದರಿ ತಪ್ಪಿಸಿಕೊಳ್ಳಲು ಬೈಕ್ ಸವಾರರು ಮಾಡಿದ ‘ದೇಸೀ ಉಪಾಯ’ಕ್ಕೆ ಪೋಲಿಸರೇ ಬೆರಗಾದ ವಿಡಿಯೋ ವೈರಲ್.!

ಡಿಜಿ ಲಾಕರ್‌ನ ಉಪಯೋಗಗಳು ಏನು ?

1. ದಾಖಲೆಗಳನ್ನು ಸುರಕ್ಷಿತ ಮಾರ್ಗದಲ್ಲಿ ಹಂಚಿಕೆ ಮಾಡಬಹುದು
2. ನಿಮ್ಮ ದಾಖಲೆಗಳ ನಕಲಿ ಬಳಕೆ ಮಾಡಲು ಅವಕಾಶ ಇರುವುದಿಲ್ಲ
3. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ದಾಖಲೆಗಳನ್ನು ಪಡೆದುಕೊಳ್ಳಬಹುದು
4. ನಿಮ್ಮ ದಾಖಲೆಗಳ ಅನವಶ್ಯಕ ಉಪಯೋಗ ತಡೆದು ಸವಕಳಿ ಆಗದಂತೆ ಮಾಡುತ್ತದೆ
5. 10 ಎಂಬಿ ಡಾಟಾ ಅವಕಾಶ ನಿಮ್ಮ ಬಳಿ ಇರುತ್ತದೆ.

ಯಾವ ದಾಖಲೆ ಸಂಗ್ರಹಿಸಿಡಬಹುದು?

ಶಿಕ್ಷಣ ಪ್ರಮಾಣಪತ್ರಗಳು, ಆಧಾರ್‌ ಮಾಹಿತಿ, ಡ್ರೈವಿಂಗ್‌ ಲೈಸೆನ್ಸ್‌, ಪಾಸ್‌ಪೋರ್ಟ್‌, ಪಡಿತರ ಪತ್ರ, ಪಾನ್‌ ಕಾರ್ಡ್‌ ಚುನಾವಣೆ ಗುರುತು ಚೀಟಿ.