‘ನೋ ಪಾರ್ಕಿಂಗ್’ ವಾಹನ ನಿಲ್ಲಿಸಿದವರ ಮಾಹಿತಿ ನೀಡಿದವರಿಗೆ 200 ರೂ. ಬಹುಮಾನ

0
1293

ಕೇಂದ್ರ ಸರಕಾರ, ‘ನೋ ಪಾರ್ಕಿಂಗ್‌’ ಜಾಗದಲ್ಲಿ ವಾಹನ ನಿಲ್ಲಿಸುವವರ ಮೇಲೆ ಗದಾಪ್ರಹಾರ ಮಾಡಲು ಮುಂದಾಗಿದೆ.

ಕಾರು ಪಾರ್ಕಿಂಗ್ ಮಾಡಲು ಜಾಗ ಲಭ್ಯವಿದೆ ಎಂಬುದನ್ನು  ಸ್ಥಳೀಯ ಸಂಸ್ಥೆಗಳಿಗೆ ಪ್ರಮಾಣ ಪತ್ರವನ್ನು ಪ್ರಸ್ತುತ ಬಳಿಕವೇ ಹೊಸ ಕಾರು ಕೊಳ್ಳುವುದಕ್ಕೆ ಅನುಮತಿಯನ್ನು ನೀಡುವುದು ಎಂದು ಸರ್ಕಾರ ಹೊಸನಿಯಮ ಜಾರಿಗೆ ತರಲು ಚಿಂತನೆ ನಡೆಸಿದ್ದು, ಅದರಂತೆಯೇ ವಾಹನ ನಿಲುಗಡೆ ಪ್ರದೇಶವಲ್ಲದ ಕಡೆ ವಾಹನ ನಿಲ್ಲಿಸಿದವರಿಗೆ ಈಗ ವಿಧಿಸಲಾಗುತ್ತಿರುವ 200 ರೂ. ದಂಡವನ್ನು 5 ಪಟ್ಟು ಹೆಚ್ಚಿಸಲಾಗುವುದು ಹಾಗೂ ‘ನೋ ಪಾರ್ಕಿಂಗ್’ ಜಾಗದಲ್ಲಿ ವಾಹನ ನಿಲ್ಲಿಸಿರುವ ಕುರಿತು ಮಾಹಿತಿ ನೀಡಿದವರಿಗೆ 200 ರೂ. ಬಹುಮಾನ ನೀಡುವ ಹೊಸ ನಿಯಮವನ್ನು ಜಾರಿಗೆ ತರಲಿದ್ದಾರೆ.

08bgpparking1_1291339g

ಈ ಸಂಬಂಧ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಮಾತುಕತೆ ನಡೆಸಲಿರುವ ವೆಂಕಯ್ಯ ನಾಯ್ಡು ನಗರ ಪ್ರದೇಶಗಳ ಸೂಕ್ಷ್ಮತೆಯ ಬಗ್ಗೆ ಪರಿಶೋಧನೆ ನಡೆಸಲಿದ್ದು, ದಿಟ್ಟ ಹೆಜ್ಜೆಯನ್ನಿಡಲಿದ್ದಾರೆ.

55061466

ವಾಹನ ನಿಲುಗಡೆ ಪ್ರದೇಶವಲ್ಲದ ಕಡೆ ವಾಹನ ನಿಲ್ಲಿಸಿದವರಿಗೆ ಈಗ ವಿಧಿಸಲಾಗುತ್ತಿರುವ 200 ರೂ. ದಂಡವನ್ನು 5 ಪಟ್ಟು ಹೆಚ್ಚಿಸಲಾಗುವುದು. ಅಂದರೆ 1 ಸಾವಿರ ರೂ.ಗೆ ಏರಿಸಲಾಗುವುದು ಎಂದು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಅಲ್ಲದೆ ‘ನೋ ಪಾರ್ಕಿಂಗ್‌’ ಜಾಗದಲ್ಲಿ ವಾಹನ ನಿಲ್ಲಿಸಿರುವ ಕುರಿತು ಮಾಹಿತಿ ನೀಡಿದವರಿಗೆ 200 ರೂ. ಬಹುಮಾನ ನೀಡುವ ನೀತಿಯನ್ನೂ ಜಾರಿಗೆ ತರುವುದಾಗಿ ಅವರು ತಿಳಿಸಿದ್ದಾರೆ.

heavy-fines-for-no-parking-zone2

ನಾಗಪುರ ಸ್ಮಾರ್ಟ್‌ಸಿಟಿ ಯೋಜನೆ ಕುರಿತು ಜನಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಕ್ರಮ ವಾಹನಗಳಿಂದ ರಸ್ತೆಗಳನ್ನು ಮುಕ್ತಗೊಳಿಸಲು ನೀತಿ ಬೇಕಾಗಿದೆ. ಆ ನೀತಿ ವಾಸ್ತವ ರೂಪಕ್ಕೆ ಬಂದರೆ, ಇಂತಹ ಪಾರ್ಕಿಂಗ್‌ಗಳಿಗೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು. ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಂತಿರುವ ಫೋಟೋ ತೆಗೆದು ಅದನ್ನು ಸಂಚಾರಿ ಪೊಲೀಸರು ಅಥವಾ ಸಾರಿಗೆ ಇಲಾಖೆಯ ವ್ಯವಸ್ಥೆಗೆ ನೀಡಿದವರಿಗೆ 200 ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದರು. ಆದರೆ ಇದು ಯಾವಾಗಿನಿಂದ ಜಾರಿಗೆ ಬರಲಿದೆ ಎಂಬುದನ್ನು ಮಾತ್ರ ಅವರು ತಿಳಿಸಲಿಲ್ಲ.