ಲೈಂಗಿಕ ದೌರ್ಜನ್ಯದ ವಿರುದ್ದ ಹೋರಾಡಿದ ಇಬ್ಬರಿಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ಅವರಿಬ್ಬರ ಬಗ್ಗೆ ತಿಳಿದುಕೊಳ್ಳಿ ನಿಮಗೂ ಸ್ಪೂರ್ಥಿಯಾಗುತ್ತೆ!!

0
1048

ಲೈಂಗಿಕ ದೌರ್ಜನ್ಯ, ಯುದ್ಧಗಳಲ್ಲಿ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದರ ವಿರುದ್ಧ ಶಾಂತಿಯಿಂದ ನಿರಂತರವಾಗಿ ಹೋರಾಡಿದ ಕಾಂಗೋ ವೈದ್ಯ ಡೇನಿಸ್​ ಮುಕ್ವೆಜ್ ಮತ್ತು ಇರಾಕಿನ ಯಝಿಾದಿ ಹೋರಾಟಗಾರ್ತಿ ನಾದಿಯಾ ಮುರಾದ್​ ಗೆ 2018 ರ ನೋಬೆಲ್​ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಲೈಂಗಿಕವಾಗಿ ದೌರ್ಜನ್ಯವೆಸುಗುವುದನ್ನೇ ಯುದ್ಧಾಸ್ತ್ರವನ್ನಾಗಿಸಿಕೊಂಡಿರುವುದರ ವಿರುದ್ಧ ಧ್ವನಿ ಎತ್ತಿದ್ದ ಇವರಿಬ್ಬರಿಗೆ ಈ ಬಾರಿಯ ನೋಬೆಲ್​ ಶಾಂತಿ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಿದ್ದಾಗಿ ಅಧ್ಯಕ್ಷೆ ಬೆರಿತ್​ ರೀಸ್​ ಆ್ಯಂಡ್ರಸನ್​ ನಿರ್ಧರಿಸಿದ್ದಾರೆ. ಮುಕ್ವೆಜ್​ ಹಾಗೂ ನಾದಿಯಾ ಮುರಾದ್​ ಇಬ್ಬರೂ ತಮ್ಮ ಹೋರಾಟಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದು ನೊಬೆಲ್​ ಸಮಿತಿ ಹೇಳಿದೆ.

Also read: ಗೂಗಲ್-ನ ಮುಖ್ಯಸ್ಥ ಸುಂದರ್ ಪಿಚೈ ರವರ ಬಗ್ಗೆ ಅವರ ಐ.ಐ.ಟಿ. ಪ್ರೊಫೆಸರ್ ಏನು ಹೇಳಿದ್ದಾರೆ ಅಂತ ಕೇಳಿ, ನಿಮಗೂ ಜೀವನಕ್ಕೆ ಪ್ರೇರಣೆಯಾಗಬಹುದು!!

ಮುಕ್ವೆಜ್​ ಹಾಗೂ ಮುರಾದ್​ ಇಬ್ಬರೂ ಯಾವುದೇ ಘರ್ಷಣೆ ಮಧ್ಯೆ ನಡೆಯುವ ಲೈಂಗಿಕ ಹಿಂಸೆಯ ವಿರುದ್ಧ ಹೋರಾಡಿದ್ದಾರೆ. ಅಲ್ಲಿ ಯುದ್ಧಕ್ಕೂ ಮೀರಿ ನಡೆಯುವ ಶೋಷಣೆಯನ್ನು ತಡೆಯಲು ಚಳವಳಿ ನಡೆಸಿದವರು.

ಡೇನಿಸ್​ ಮುಕ್ವೆಜ್ ಯಾರು..?

Also read: ಕೆಲವೊಂದು ಪೋಲಿಯೊ ಲಸಿಕೆಗಳಲ್ಲಿ ದೋಷವಿರುವ ಕಾರಣ, ಸ್ವಲ್ಪ ದಿನಗಳ ಮಟ್ಟಿಗೆ ಪೋಲಿಯೊ ಲಸಿಕೆಗಳು ಹಾಕಿಸದಿರುವುದೇ ಒಳಿತು!!

ಕಾಂಗೋ ವೈದ್ಯ ಮುಕ್ವೆಜ್​ಗೆ 63 ವರ್ಷ ವಯಸ್ಸು. “ಡಾಕ್ಟರ್‌ ಮಿರಾಕಲ್‌’ ಎಂದೇ ಖ್ಯಾತರಾಗಿರುವ ಡಾ. ಡೆನ್ನಿಸ್‌ ಮುಕ್ವೆಜ್ ಅವರು, ತಮ್ಮ ತಾಯ್ನಾಡಿನಲ್ಲಿ ಆಂತರಿಕ ಗಲಭೆಗಳ ಹೆಸರಿನಲ್ಲಿ ಅತ್ಯಾಚಾರ ಕ್ಕೊಳಗಾದ ಸಾವಿರಾರು ಮಹಿಳೆಯರಿಗೆ ಪುನರ್ಜನ್ಮ ನೀಡಿದ್ದಾರೆ. ಸುಮಾರು 20 ದಶಕಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ, ಅತ್ಯಾಚಾರಕ್ಕೆ ಒಳಪಟ್ಟ ಅನೇಕ ಮಹಿಳೆಯರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕಾಂಗೋದ ಪೂರ್ವ ಡೆಮಾಕ್ರಟಿಕ್​ ರಿಪಬ್ಲಿಕ್​ ಯುದ್ಧದ ವೇಳೆ ಲೈಂಗಿಕವಾಗಿ ಶೋಷಣೆಗೆ ಒಳಗಾದ ಮಹಿಳೆಯರು, ಪುಟ್ಟ ಮಕ್ಕಳು, ವೃದ್ಧೆಯರು ಸೇರಿ ಸುಮಾರು 10 ಸಾವಿರ ಮಹಿಳೆಯರಿಗೆ ದಕ್ಷಿಣ ಕಿವುದ ಪಾಂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಅವರ ಸೇವೆ ಮಾಡಿದ್ದಾರೆ. 2014ರಲ್ಲಿ ನಡೆದಿದ್ದ ಅವರ ಹತ್ಯೆ ಯತ್ನದಿಂದ ಪಾರಾದರೂ ಜೀವದ ಹಂಗು ತೊರೆದು ಸಂತ್ರಸ್ತೆಯರ ಆರೈಕೆಯಲ್ಲಿ ಜೀವನ ಸವೆಸುತ್ತಿದ್ದಾರೆ.

ಐಸಿಸ್‌ ಪಂಜರದಲ್ಲಿದ್ದ ನಾದಿಯಾ:

Also read: ಬಿಜೆಪಿ ರೈತ ವಿರೋಧಿಯೇ? ದೆಹಲಿಯ ರೈತರ ಮೇಲಿನ ಪೋಲಿಸ್ ದೌರ್ಜನ್ಯ ಯಡಿಯೂರಪ್ಪ ಸರ್ಕಾರದ ಶೂಟ್-ಔಟ್-ಅನ್ನು ಜ್ಞಾಪಿಸಿದೆ!!

ಇರಾಕ್‌ನ “ಯಾಜಿದಿ’ ಸಮುದಾಯದಲ್ಲಿ ಜನಿಸಿದ ನಾದಿಯಾ ಮುರಾದ್‌ಗೆ 19 ವರ್ಷವಿದ್ದಾಗಲೇ ಐಸಿಸ್‌ ಉಗ್ರರು ಅವರನ್ನು ಅಪಹರಿಸಿದ್ದರು. 3 ತಿಂಗಳ ಕಾಲ ಬಂಧಿಯಾಗಿದ್ದ ಅವರನ್ನು ಲೈಂಗಿಕ ಗುಲಾಮಳನ್ನಾಗಿ ಬಳಸಿಕೊಳ್ಳಲಾಗಿತ್ತಲ್ಲದೆ, ಉಗ್ರರ ತಂಡಗಳ ನಡುವೆಯೇ ಅವರು ಅನೇಕ ಬಾರಿ ಮಾರಾಟವಾಗಿದ್ದರು, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು, ಚಿತ್ರಹಿಂಸೆ ಅನುಭವಿಸಿದ್ದರು. 2014ರಲ್ಲಿ ಐಸಿಸ್‌ ಪಂಜರದಿಂದ ತಪ್ಪಿಸಿಕೊಂಡು ಬಂದ ನಂತರ, ಮಾನವ ಕಳ್ಳಸಾಗಣೆ ಹಾಗೂ ಅತ್ಯಾಚಾರ ವಿರುದ್ಧ  ಹೋರಾಟಗಾರ್ತಿಯಾಗಿ ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡುತ್ತಿದ್ದಾರೆ.