ಕುಟುಂಬದ ಘನತೆಹೋಗುವ ಕೆಲಸ ಮಾಡಿದನ್ನು ಪ್ರಶ್ನಿಸಿದ್ದಕ್ಕೆ ತಂದೆಯನ್ನೇ ಕೊಂದ 19 ವರ್ಷದ ಯುವತಿ….

0
463

ಈಗಿನ ಕಾಲದಲ್ಲಿ ಜನ ಯಾರನ್ನು ಯಾರು ಕೊಲ್ಲುತ್ತಾರೋ ಗೊತ್ತಿಲ್ಲ, ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಈ ಘಟನೆಯನ್ನು ಕೇಳಿದರೆ, ನಿಮಗೆ ಖಂಡಿತವಾಗಿಯೂ ಜನ ಯಾಕೆ ಇಷ್ಟು ಕ್ರೂರಿಯಾಗುತ್ತಿದ್ದಾರೆ, ಅವರಿಗೆ ಮನುಷ್ಯತ್ವವೇ ಇಲ್ವಾ ಅನ್ನುವ ಪ್ರಶ್ನೆ ಮೂಡುತ್ತದೆ. ಏನು ಆ ಘಟನೆ ನೀವೇ ನೋಡಿ.

ಉತ್ತರಪ್ರದೇಶದ ರಾಜ್ಯದ ನೋಯ್ಡ ನಗರದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಈ ಘಟನೆ ಎಲ್ಲ ಸಂಭಂದಗಳ ಮೌಲ್ಯವನ್ನು ನೆಲಕಚ್ಚುವಂತೆ ಮಾಡಿದೆ. ಸ್ವಂತ ಮಗಳೇ ಪ್ರೇಮಿಯ ಜೊತೆ ಸೇರಿ ತಂದೆಯನ್ನು ಹತ್ಯೆ ಮಾಡಿದ್ದಾಳೆ. ತನ್ನ ಪ್ರೀತಿಯ ಮಗಳಿಂದಲೇ ಹತ್ಯೆಗೀಡಾದ ದುರ್ದೈವಿಯ ಹೆಸರು ವಿಶ್ವನಾಥ್ ಸಾಹು.

ತಂದೆಯನ್ನೇ ಕೊಂದ ಈ ಮಗಳ ಹೆಸರು ಪೂಜ, ಇವಳಿಗಿನ್ನು ಕೇವಲ 19 ವರ್ಷ. ವಿಶ್ವನಾಥ್ ಅವರಿಗೆ, ಭಾನುವಾರ ಮುಂಜಾನೆ ಸುಮಾರು 4 ಗಂಟೆ ಆಸುಪಾಸಿನಲ್ಲಿ ಧ್ವನಿಯಾಗುತ್ತಿರುವುದನ್ನು ಕೇಳಿ ನಿದ್ದೆಯಿಂದ ಎಚ್ಚರವಾಗಿದೆ. ಅವರು ಆ ಧ್ವನಿಯನ್ನು ಹಿಂಬಾಲಿಸಿದಾಗ ಅದು ತಮ್ಮ ಮಗಳು ಪೂಜಾಳ ಕೋಣೆಯಿಂದ ಬರುತ್ತಿದೆ ಎಂದು ತಿಳಿದು ಬಂದಿದೆ.

ಇಷ್ಟು ಬೆಳಗ್ಗೆ ಏನು ಮಾಡುತ್ತಿದ್ದಾಳೆ ಎಂದು ನೋಡಲು ವಿಶ್ವನಾಥ್ ಪೂಜಾಳ ರೂಮಿಗೆ ಹೋಗಿದ್ದಾರೆ, ರೂಮಿನೊಳಗೆ ಪ್ರವೇಶಿಸುತ್ತಿದಂತೆ ಅವರಿಗೆ ಒಂದು ಶಾಕ್ ಕಾದಿತ್ತು. ಮಗಳು ಪೂಜಾ ತನ್ನ ಬಾಯ್‍ಫ್ರೆಂಡ್ ಅಥವಾ ಪ್ರೇಮಿಯಾದ ಧರ್ಮೇಂದ್ರ ಎಂಬುವವನ ಜೊತೆ ಸರಸವಾಡುತ್ತಿದಳು. ಇದನ್ನು ನೋಡಿ ಕೆಂಡ-ಮಂಡಲವಾದ ಅವರು ಇಬ್ಬರಿಗೆ ಚೆನ್ನಾಗಿ ಬೈದು ಎಚ್ಚರಿಸಿದ್ದಾರೆ.

your lovely person-3

ವಿಶ್ವನಾಥ್ ಅವರ ಬೈಗಳಿಂದ ಕೋಪಗೊಂಡ ಪೂಜ ಹಾಗು ಧರ್ಮೇಂದ್ರ ತಕ್ಷಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರ ತೀವ್ರ ಹಲ್ಲೆಯಿಂದ ವಿಶ್ವನಾಥ್ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ, ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಅವರ ಸ್ಥಿತಿ ಚಿಂತಾಜನಕವಾದರಿಂದ ಅವರನ್ನು ದೆಹಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

ವಿಶ್ವನಾಥ್ ಅವರ ಪತ್ನಿ ಗಾಯತ್ರಿ ಅವರ ದೂರಿನ ಆಧಾರದ ಮೇಲೆ ನೋಯ್ಡ ಪೊಲೀಸರು ಪೂಜಾಳನ್ನು ಬಂದಿಸಿದ್ದಾರೆ ಆದರೆ ಇನ್ನೊಬ್ಬ ಆರೋಪಿ ಪೂಜಾಳ ಬಾಯ್‍ಫ್ರೆಂಡ್ ಧರ್ಮೇಂದ್ರ ಪರಾರಿಯಾಗಿದ್ದಾನೆ.