ಸಂಚಾರಿ ನಿಯಮದ ನೇಪದಲ್ಲಿ ಟ್ರಾಫಿಕ್ ಪೋಲೀಸರ ದುರ್ವರ್ತನೆಗೆ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ; ಇದಕ್ಕೆ ಯಾರು ಹೊಣೆ??

0
438

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರಿ ನಿಯಮಗಳು ಸರಿಯಿದ್ದರು, ಟ್ರಾಪಿಕ್ ಪೊಲೀಸರ ವರ್ತನೆಗಳು ಮಾತ್ರ ಜನರ ಆಕ್ರೋಶಕ್ಕೆ ಗುರಿಯಾಗುತ್ತಿವೆ. ಜನರು ಸಣ್ಣ ತಪ್ಪು ಮಾಡುವ ಮೊದಲು ಹೇಳುವುದನ್ನು ಬಿಟ್ಟು ಮಾಡುವುದನ್ನು ನೋಡುತ ನಿಲ್ಲುವ ಪೊಲೀಸರು ಸಿದಾ ಫೋಟೋ ಹೊಡೆದು ದಂಡ ಹಾಕುತ್ತಾರೆ, ಸಿಗ್ನಲ್-ಗಳಲ್ಲಿ ವಾಹನಗಳ ಟ್ರಾಫಿಕ್ ಆಗಿ ಜನರು ರಸ್ತೆಯಲ್ಲೇ ನಿಂತರು ಪೊಲೀಸರು ಫೋಟೋ ಹೊಡಿಯುವಲ್ಲಿ ಬ್ಯುಸಿ ಇರುತ್ತಾರೆ. ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರ ನಿಯಮ ಜಾರಿಗೆ ತಂದಿದ್ದೆ ತಡ ಪೊಲೀಸರು ಲೀಗಲ್ ರೌಡಿಗಳಂತೆ ವರ್ತಿಸುತ್ತಿದ್ದಾರೆ. ಇಂತಹ ದುರ್ವರ್ತನೆಗೆ ಹೆದರಿ ಟೆಕ್ಕಿ ಯೊಬ್ಬ ಕಾರಿನಲ್ಲೇ ಪ್ರಾಣ ಬಿಟ್ಟ ಘಟನೆ ನಡೆದಿದ್ದು ಭಾರಿ ವಿರೋಧ ವ್ಯಕ್ತವಾಗಿದೆ.

Also read: ವಾಹನದ ಯಾವುದೇ ದಾಖಲೆಗಳಿಲ್ಲವೆಂದು ದಂಡ ಕಟ್ಟುವುದು ಬೇಡ; ಈ ಡಿಜಿಲಾಕರ್-ನಿಂದ ದಂಡ ಕಟ್ಟದೆ ತಪ್ಪಿಸಿಕೊಳ್ಳಲುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.!

ಪೋಲೀಸ ವರ್ತನೆ ಹೆದರಿ ಪ್ರಾಣವನ್ನೇ ಬಿಟ್ಟ?

ಹೌದು ಸಂಚಾರ ನಿಯಮದ ಅತಿಯಾದ ದಂಡ ಜನರ ಪ್ರಾಣವನ್ನೇ ಬಲಿ ತೆಗೆದುಕೊಳ್ಳುತ್ತಿದ್ದು. ಕಾರು ಚಾಲನೆ ಮಾಡುತ್ತಿದ್ದ 35 ವರ್ಷದ ಟೆಕ್ಕಿಯೊಬ್ಬರು, ಪೊಲೀಸರ ತಪಾಸಣೆ ವೇಳೆ ಹೃದಯಘಾತಕ್ಕೆ ತುತ್ತಾಗಿ ಜೀವಬಿಟ್ಟಿದ್ದಾರೆ. ಮಧುಮೇಹದಿಂದಲೂ ಬಳಲುತ್ತಿದ್ದ ಈತ, ತಮ್ಮ ತಂದೆ-ತಾಯಿ ಜೊತೆ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗಾಜಿಯಾಬಾದ್ ಬಳಿ ಕಾರನ್ನು ತಡೆದ ಪೊಲೀಸರು ತಪಾಸಣೆ ನಡೆಸಲು ಆರಂಭಿಸಿದರು. ದೊಡ್ಡ ದನಿಯಲ್ಲಿ ಚಾಲಕನನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಟೆಕ್ಕಿ ಹೃದಯಾಘಾತಕ್ಕೆ ತುತ್ತಾಗಿದ್ದಾರೆ.

Also read: ಜನ ಸಾಮಾನ್ಯರಂತೆ ಟ್ರಾಫಿಕ್ ರೂಲ್ಸ್ ಫಾಲೋ ಮಾಡೋ ದೇಶದ ಪ್ರಧಾನಿ ಮೋದಿ; ನಾನೇ ಸಿಎಂ ಎಂದು ರೂಲ್ಸ್ ಬ್ರೇಕ್ ಮಾಡುತ್ತಿರುವ ಯಡಿಯೂರಪ್ಪ.!

ಕಾರ್‌ ಮೇಲೆ ಲಾಠಿಯಿಂದ ಹೊಡೆದರು;

ಮಗನ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ 65 ವರ್ಷ ವಯಸ್ಸಿನ ತಂದೆ, ನನ್ನ ಮಗನ ಜೊತೆ ಸಂಚಾರಿ ಪೊಲೀಸರು ದುರ್ವರ್ತನೆ ತೋರಿದರು. ನೂತನ ಮೋಟಾರು ವಾಹನ ಕಾಯ್ದೆ ಹೆಸರಲ್ಲಿ ಹಿಂಸೆ ಕೊಟ್ಟರು ಎಂದು ಆಪಾದಿಸಿದ ಅವರು `ಎಲ್ಲದಕ್ಕೂ ಒಂದು ರೀತಿ ನೀತಿ ಇರುತ್ತೆ, ಸಂಚಾರಿ ನಿಯಮಗಳು ಬದಲಾಗಿವೆ, ಹಾಗೆಂದ ಮಾತ್ರಕ್ಕೆ ವಾಹನ ಸವಾರರ ಜೊತೆ ಪೊಲೀಸರು ನಡೆದುಕೊಳ್ಳುವ ರೀತಿ ಬದಲಾಗಬಾರದು ಎಂದಿರುವ ಟೆಕ್ಕಿ ತಂದೆ, ಪೊಲೀಸರು ಸಭ್ಯವಾಗಿ ವರ್ತಿಸಬೇಕು. ನನ್ನ ಮಗ ಅತಿ ವೇಗದ ಕಾರು ಚಾಲನೆ ಮಾಡುತ್ತಿರಲಿಲ್ಲ. ತನ್ನ ಜೊತೆ ಇಬ್ಬರು ವೃದ್ಧರನ್ನು ಕರೆದುಕೊಂಡು ಹೋಗುತ್ತಿದ್ದ. ಆದ್ರೆ, ಪೊಲೀಸರು ಕಾರ್‌ ಮೇಲೆ ಲಾಠಿಯಿಂದ ಹೊಡೆದದ್ದು ಏಕೆ? ಇದು ತಪಾಸಣೆ ನಡೆಸುವ ರೀತಿಯೇ’ ಎಂದು ಪ್ರಶ್ನಿಸಿದ್ದಾರೆ.

ಬೆದರಿಕೆಗೆ ಹೆದರಿಂದ ನನ್ನ ಮಗ;

Also read: ಪಾಲಕರೇ ಮಕ್ಕಳ ಕೈಯಲ್ಲಿ ವಾಹನ ಕೊಡುವ ಮುನ್ನ ಎಚ್ಚರ; ನಿಮಗೆ ಬಿಳ್ಳುತ್ತೆ 25 ಸಾವಿರ ದಂಡದ ಜೊತೆಗೆ 3 ವರ್ಷ ಜೈಲು ವಾಸ.!

ನಮ್ಮ ಕಾರ್ ತಪಾಸಣೆಗೆ ಬಂದ ಬಿಳಿ ಸಮವಸ್ತ್ರದ ವ್ಯಕ್ತಿಗೆ, ಕಾರನ್ನು ತಪಾಸಣೆ ಮಾಡುವ ಅಧಿಕಾರವೇ ಇರಲಿಲ್ಲ, ಆತನ ಶ್ರೇಣಿ ಯಾವುದು ಎಂದೂ ಗೊತ್ತಾಗುತ್ತಿರಲಿಲ್ಲ ‘ಏರುಧ್ವನಿಯಲ್ಲಿ ಮಾತನಾಡಿದ ಪೊಲೀಸರಿಂದಾಗಿ ನನ್ನ ಮಗನನ್ನು ನಾನು ಕಳೆದುಕೊಂಡಿದ್ದೇನೆ. ಆತನಿಗೆ ಐದು ವರ್ಷದ ಮಗಳಿದ್ದಾರೆ. ಅವಳೀಯ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದಾಳೆ. ನನಗೆ 65 ವರ್ಷವಾಗಿದೆ. ಆಕೆಯನ್ನು ಸಲಹುವವರು ಯಾರು? ಭವಿಷ್ಯದಲ್ಲಿ ಆಕೆಯ ಗತಿಯೇನು?’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮಗೆ ನ್ಯಾಯ ಒದಗಿಸಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ನೋಯ್ಡಾ ಪೊಲೀಸರು ತಿಳಿಸಿದ್ದಾರೆ.