ಊಟಕ್ಕೆ ತರಕಾರಿ ತರಲು 30 ರೂ. ಕೇಳಿದಕ್ಕೆ ತಲಾಕ್ ನೀಡಿದ ಭೂಪ; ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಗಾಳಿಗೆ ತೂರಿದ ಮುಸ್ಲಿಮರ ನಡೆ ಸರಿನಾ??

0
243

ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ತ್ರಿವಳಿ ತಲಾಕ್ ಕುರಿತಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೆಹರ್ ಅವರ ನೇತೃತ್ವದ ಐದು ಸದ್ಯರ ಪೀಠ, ‘ಈ ಆಚರಣೆ ಸಂವಿಧಾನ ಬಾಹೀರ ಎಂದು ಅಭಿಪ್ರಾಯಪಟ್ಟಿದ್ದು, ಇನ್ಮುಂದೆ ಈ ತ್ರಿವಳಿ ತಲಾಕ್ ಮೂಲಕ ಪಡೆಯುವ ವಿಚ್ಛೇದನ ಅಸಿಂಧುವಾಗಲಿದೆ’ ಎಂದು ಆದೇಶ ನೀಡಿತ್ತು. ಆದರೆ ಕೋರ್ಟ್ ನೀಡಿದ ಆದೇಶವನ್ನು ಗಾಳಿಗೆ ತೂರಿದ ಮುಸ್ಲಿಮರು ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದ್ದು, ತರಕಾರಿ ತರಲು ದುಡ್ಡು ಕೇಳಿದಳು ಕಾರಣಕ್ಕೆ ಇಲ್ಲೊಬ್ಬ ಹೆಂಡತಿಗೆ ತಕಾಲ್ ನೀಡಿದ್ದು ದೇಶಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದೆ.

Also read: ವಿಶ್ವದ ವಿಚಿತ್ರ ಹೋಟೆಲ್; ಇಲ್ಲಿ ಕುಡಿಯಲು, ಊಟ ಮಾಡಲು ಹೋಗಬೇಕು ಅಂದರೆ ಬೆತ್ತಲಾಗಿ ಹೋಗಬೇಕು..

ಹೌದು ತರಕಾರಿ ತರಲು 30 ರೂಪಾಯಿ ಹಣ ಕೇಳಿದ ಹೆಂಡತಿಗೆ ಪತಿರಾಯ ಮನಬಂದಂತೆ ಥಳಿಸಿ, ತ್ರಿವಳಿ ತಲಾಕ್​ ನೀಡಿರುವ ಘಟನೆ ನೋಯ್ಡಾದ ದಾದ್ರಿಯಲ್ಲಿ ನಡೆದಿದೆ. ಸಂತ್ರಸ್ತೆ ಜೈನಬ್(30)​ ತನಗಾದ ಅನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಗಂಡ ಸಬೀರ್ ಸ್ಕ್ರೂಡ್ರೈವರ್​​ನಿಂದ ನನ್ನ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ, ಜೊತೆಗೆ ನನ್ನ ಅತ್ತೆ- ಮಾವ ಕೂಡ ನನಗೆ ಹೊಡೆದಿದ್ದಾರೆ ಅಷ್ಟೇ ಅಲ್ಲದೇ ಕರೆಂಟ್​ ಶಾಕ್​ ಕೂಡ ಕೊಟ್ಟಿದ್ದರು. ನನ್ನ ಗಂಡ ನನಗೆ ತ್ರಿವಳಿ ತಲಾಕ್​ ನೀಡಿ, ನನ್ನ ಮುಖಕ್ಕೆ ಉಗಿದು, ಮನೆಯಿಂದ ಹೊರಗೆ ಅಟ್ಟಿದ್ದಾರೆ,” ಎಂದು ಸಂತ್ರಸ್ತೆ ಜೈನಬ್​ ದೂರಿನಲ್ಲಿ ತನಗಾದ ಅನ್ಯಾಯವನ್ನು ಹೇಳಿದ್ದಾಳೆ.

ಮದುವೆಯಾದ ಬಳಿಕ ನನ್ನ ಮಗಳು ಆತನೊಂದಿಗೆ ಬಲವಂತದ ಜೀವನ ನಡೆಸುತ್ತಿದ್ದಾಳೆ. ಈ ಹಿಂದೆಯೂ ಶಬೀರ್ ನನ್ನ ಮಗಳ ತಲೆಗೆ ಕೋಲಿನಿಂದ ಥಳಿಸಿದ್ದನು. ಅಲ್ಲದೆ ಈ ಕೃತ್ಯದ ಹಿಂದೆ ಶಬೀರ್ ತಂದೆಯೂ ಭಾಗಿಯಾಗಿದ್ದು, ಮಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು ಎಂದು ಝೈನಾಬಿಯ ತಂದೆ ಮಾಧ್ಯಮದೊಂದಿಗೆ ಮಾತನಾಡುತ್ತಾ ದೂರಿದ್ದಾರೆ. ಶಬೀರ್ ಗೆ ನನ್ನ ಮಗಳು ಡಿವೋರ್ಸ್ ಕೊಡಬೇಕೆಂದು ಹಿಂದಿನಿಂದಲೂ ಇತ್ತು. ಆದರೂ ಆಕೆ ಅವನೊಂದಿಗೆ 5 ವರ್ಷದಿಂದ ಜೀವನ ಸಾಗಿಸುತ್ತಿದ್ದಳು. ಆದರೆ ಒಂದು ಶುಕ್ರವಾರ ದಾದ್ರಿಯಲ್ಲಿರುವ ತನ್ನ ಗಂಡನ ಮನೆಗೆ ತೆರಳಿದಾಗ ಶಬೀರ್ ತನಗೆ ಡಿವೋರ್ಸ್ ಕೊಡುವಂತೆ ಹೇಳಿದ್ದನು ಎಂದು ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಮಹಿಳೆಯ ತಂದೆ ಕಣ್ಣೀರು ಹಾಕಿದ್ದಾರೆ.

Also read: 75 ವರ್ಷಗಳ ಬಳಿಕ ಒಂದಾದ ಪ್ರೇಮಿಗಳು; ಅಮರ ಪ್ರೀತಿಗೆ ಸಾಕ್ಷಿಯಾದ ಪ್ರೀತಿ ಇದೇನಾ?, ಈ ಕಥೆ ಓದಿ ನೋಡಿ ಕಳೆದ ನಿಮ್ಮ ಪ್ರೀತಿವೂ ಹೀಗೆಯೇ ಸಿಗಬಹುದು..

ಅಷ್ಟೇ ಅಲ್ಲದೆ ಗಂಡ ಸಬೀರ್ ಜೈನಬ್​ ತಲೆಗೆ ದೊಣ್ಣೆಯಿಂದ ಹೊಡೆದಿದ್ದ ಎಂದು ಆಕೆಯ ತಂದೆ ಆರೋಪಿಸಿದ್ದಾರೆ. ಜೈನಬ್​ ಗಂಡ ಸಬೀರ್ ಮತ್ತು ಆತನ ಮನೆಯವರ ವಿರುದ್ಧ ದೂರು ದಾಖಲಾಗಿದೆ. ಆರೋಪಿ ಸಬೀರ್​ನನ್ನು ಬಂಧಿಸಲಾಗಿದ್ದು, ಮ್ಯಾಜಿಸ್ಟ್ರೇಟ್​ ಕೋರ್ಟ್​​ಗೆ ಹಾಜರು ಪಡಿಸಲಾಗಿತ್ತು. ಜೂನ್​ 30 ರಂದು ಬಿಡುಗಡೆ ಮಾಡಲಾಯಿತು. ಉಳಿದ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಿದ್ದು, ಸಿಕ್ಕ ಬಳಿಕ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೆಲ್ಲವೂ ಒಂದು ಕಡೆಯಾದರೆ. ಸುಪ್ರೀಂ ಕೋರ್ಟಿನ ತೀರ್ಪನ್ನು ಅನೇಕ ಮುಸ್ಲಿಂ ಮಹಿಳೆಯರು ಸ್ವಾಗತಿಸಿದರೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರಾಸೆ ವ್ಯಕ್ತಪಡಿಸಿತ್ತು. ಇದಕ್ಕೆ ಕೋರ್ಟ್ ತ್ರಿವಳಿ ತಲಾಕ್​ ನೀಡುವುದು ಕಾನೂನು ಬಾಹಿರವಾಗಿದ್ದು, ಕುರಾನ್​​ನ ಆಜ್ಞೆಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು, ಅದರಂತೆ ಮುಸ್ಲಲ್ಮಾನ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಹೀಗಾಗಿ ನಾವು ತ್ರಿವಳಿ ತಲಾಕ್ ವಿರುದ್ಧ ಹೋರಾಡುತ್ತಿದ್ದೇವೆ ಎಂದು ವಾದ ಮಂಡಿಸುತ್ತಲೇ ಬಂದಿದ್ದ ಕೇಂದ್ರ ಸರ್ಕಾರ ಈ ತೀರ್ಪಿನಿಂದ ಮುಸ್ಲಿಂ ಮಹಿಳೆಯರು ಸಂತಸದಲ್ಲಿದರು ಆದರೆ ಅದೇ ತ್ರಿವಳಿ ತಲಾಕ್ ನಡೆಸಿಕೊಂಡು ಹೋಗುತ್ತಿರುವ ಧರ್ಮವು ಆದಷ್ಟು ಬೇಗ ಮಹಿಳೆಯ ಹಿತಾಶಕ್ತಿಯನ್ನು ಕಾಪಾಡುವುದು ಒಳ್ಳೆಯದು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.