ನೋಟ್ ಬ್ಯಾನ್ ನಂತರ “ಮತ್ತೇ” ಪ್ರಧಾನಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ!!!

0
961

ಹೊಸದಿಲ್ಲಿ: ಹೊಸ ವರ್ಷದ ಮುನ್ನ (ಡಿ.31) ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ದೇಶವನ್ನು ಅಭಿವೃದ್ಧಿ ಪತದಲ್ಲಿ ಮುನ್ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು 500-1000 ರೂಪಾಯಿ ನೋಟುಗಳ ಚಲಾವಣೆ ತಡೆಗಟ್ಟಿ ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನೆಡೆಸಿ ೫೦ ದಿನಗಳು ಕಳೆದಿದ್ದು, ಹಳೆ ನೋಟ್‌ ವಿನಿಮಯಕ್ಕೆ ಶುಕ್ರವಾರ ಕಡೆಯ ದಿನ. ಈ ಸಂದರ್ಭದಲ್ಲಿ ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

500 ಹಾಗೂ 1000 ರೂ ನೋಟ್‌ ಬ್ಯಾನ್ ಆದ ನಂತರ ಹಣಕ್ಕಾಗಿ ಜನ ಪರದಾಡುವಂತಾಗಿದ್ದು, ಈ ವಿಷಯವಾಗಿ ಮೋದಿಯವರು ಅನೇಕ ಟೀಕೆಗಳನ್ನು ಎದುರಿಸಿದ್ದರು. ಇಂತಹ ಟೀಕೆಗಳನ್ನು ಮತ್ತು ನಗದು ಚಲಾವಣೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ವಿವರಣೆ ನೀಡಲಿದ್ದಾರೆ.

ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ ಪ್ರಧಾನಿ ಮೋದಿ ಸರಕಾರದ ನೋಟ್ ಬ್ಯಾನ್ ನ ನಿರ್ಧಾರದಿಂದ ಎಲ್ಲರಿಗೂ ಅದರಲ್ಲೂ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಿದೆ ನಿಜ, ಸ್ವಲ್ಪ ದಿನ ಕಷ್ಟ ಸಹಿಸಿಕೊಳ್ಳಿ. 50 ದಿನಗಳ ಅವಧಿ ಮುಗಿದ ಬಳಿಕ ಕ್ರಮೇಣ ಎಲ್ಲವೂ ಸರಿ ಆಗಲಿದೆ ಎಂದು ಭರವಸೆ ನೀಡಿದ್ದಾರೆ.

ಶುಕ್ರವಾರ 500 ರೂ ಮತ್ತು 1000 ರೂ ಗಳು ಬೆಲೆ ಕಳೆದುಕೊಳ್ಳುತ್ತಿದ್ದು, ನೋಟ್ ಬ್ಯಾನ್ ಆಗಿ ೫೦ ದಿನಗಳು ಕಳೆದಿದ್ದು. ಈ ಅವಧಿಯಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಆರ್ಥಿಕ ಸುಧಾರಣೆಗಳ ಬಗ್ಗೆ ಮಾತನಾಡುವ ನಿರೀಕ್ಷೆ ಇದೆ.