ಒಪ್ಪಿಗೆ ದೈಹಿಕ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು; ಇಬ್ಬರ ಒಪ್ಪಿಗೆಯಿಂದ ನಡೆಸಿದ ದೈಹಿಕ ಸಂಪರ್ಕ ಅತ್ಯಾಚಾರವಲ್ಲ.!

0
512

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಆರೋಪಗಳು ಹೆಚ್ಚು ಕೇಳಿಬರುತ್ತಿದ್ದು, ಅದರಲ್ಲಿ ಹೆಚ್ಚಾಗಿ ಇಬ್ಬರು ವರ್ಷ ಗಂಟಲೆ ಜೊತೆಗಿದ್ದು ದೈಹಿಕ ಸಂಪರ್ಕ ಬೆಳಸಿ ನಂತರ ಬೇಡವಾದಾಗ ಅತ್ಯಾಚಾರವೆಂದು ಕೋರ್ಟ್ ಮೆಟ್ಟಿಲೇರುವುದು ಕೇಳಿಬರುತ್ತಿವೆ. ಇಂತಹ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು. ಮದುವೆಯ ಭರವಸೆ ಇಲ್ಲದಿದ್ದರೂ ಮಹಿಳೆ ಲೈಂಗಿಕ ಸಂಬಂಧ ಹೊಂದಿದರೆ ಅದು ಅತ್ಯಾಚಾರವಲ್ಲ ವೆಂದು ಹೇಳಿದೆ.

Also read: ಬಹುದಿನಗಳಿಂದ ವಿವಾದ ಸೃಷ್ಟಿಸಿದ ಎಸ್‍ಸಿ, ಎಸ್‍ಟಿ ನೌಕರರ ಬಡ್ತಿ ಮೀಸಲಾತಿಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು..

ಏನಿದು ತೀರ್ಪು?

ವಿವಾಹವಾಗುವ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎನ್ನುವ ಆಧಾರದಲ್ಲಿ ಮಹಿಳೆ ಅತ್ಯಾಚಾರ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿಯವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದ್ದು, ತಮ್ಮಿಬ್ಬರ ಸಂಬಂಧ ವಿವಾಹದಲ್ಲಿ ಮುಕ್ತಾಯವಾಗುವುದಿಲ್ಲ ಎಂದು ತಿಳಿದ ಬಳಿಕವೂ ಮಹಿಳೆ, ಪುರುಷನೊಬ್ಬನ ಜತೆ ಲೈಂಗಿಕ ಸಂಪರ್ಕ ಮುಂದುವರಿಸಿದಲ್ಲಿ ಆ ವ್ಯಕ್ತಿಯ ವಿರುದ್ಧ ಅತ್ಯಾಚಾರ ಆರೋಪ ಹೊರಿಸಲಾಗದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

Also read: ರಾಮಜನ್ಮ ಭೂಮಿ ಅಯೋಧ್ಯೆಯ ಭೂ ವಿವಾದದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು, ತಿಳಿದುಕೊಳ್ಳಲು ಮುಂದೆ ಓದಿ!!

ಇಂತಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾರಾಟ ತೆರಿಗೆಯ ಇಲಾಖೆಯ ಸಹಾಯಕ ಆಯುಕ್ತೆಯೊಬ್ಬರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ಮತ್ತು ಇಂದಿರಾ ಬ್ಯಾನರ್ಜಿ ಈ ಮಹತ್ವದ ತೀರ್ಪು ನೀಡಿದ್ದಾರೆ. ಈ ಮೂಲಕ ಸಿಆರ್​ಪಿಎಫ್​ ಕಮಾಂಡರ್​ ಮೇಲೆ ಮಹಿಳೆ ಹೊರಿಸಿದ್ದ ಆರೋಪವನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ, ದೂರುದಾರ ಮಹಿಳೆಯು ಸಿಆರ್​ಪಿಎಫ್​ ಕಮಾಂಡರ್​ ಜೊತೆ ಪರಸ್ಪರ ಒಪ್ಪಿಗೆ ಮೇರೆಗೆ 6 ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದರು. ಮದುವೆಯಾಗುವ ಖಚಿತತೆ ಇಲ್ಲದಿದ್ದರೂ ಅವರ ದೈಹಿಕ ಸಂಬಂಧ ಮುಂದುವರೆದಿತ್ತು. ಪರಸ್ಪರರ ಒಪ್ಪಿಗೆಯ ಮೇರೆಗೆ ಈ ಸಂಬಂಧ ರೂಪುಗೊಂಡಿದೆ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟಪಡಿಸಿದೆ.

ಸಿಆರ್‌ಪಿಎಫ್ ಅಧಿಕಾರಿಯ ಜೊತೆಗೆ ನಾನು 1998ರಿಂದಲೂ ಸಂಬಂಧ ಹೊಂದಿದೆ ಆದರೆ 2008ರಲ್ಲಿ ವಿವಾಹವಾಗುವ ಆಶ್ವಾಸನೆ ನೀಡಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಹೊಂದಿದರು ಎಂದು ಮಹಿಳೆ ದೂರು ನೀಡಿದ್ದರು. 2016ರವರೆಗೂ ಇಬ್ಬರ ನಡುವೆ ಸಂಬಂಧ ಮುಂದುವರಿಯಿತು. ಹಲವು ಬಾರಿ ಪರಸ್ಪರರ ಮನೆಗೆ ತೆರಳಿ ಜತೆಗೆ ತಂಗಿದ್ದರು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿರುವುದರಿಂದ ವಿವಾಹವಾಗುವುದು ಅಸಾಧ್ಯ ಎಂಬ ಆತಂಕದಲ್ಲಿ 2014ರಲ್ಲಿಯೇ ಸಿಆರ್‌ಪಿಎಫ್ ಅಧಿಕಾರಿ ಮಹಿಳೆಯ ಜಾತಿ ಆಧರಿಸಿ ವಿವಾಹಕ್ಕೆ ನಿರಾಕರಿಸಿದ್ದರು. ಆದರೂ, ಇವರಿಬ್ಬರು 2016ರವರೆಗೆ ಪರಸ್ಪರ ಒಪ್ಪಿಗೆ ಮೇಲೆಯೇ ದೈಹಿಕ ಸಂಪರ್ಕದಲ್ಲಿದ್ದರು. ಅಧಿಕಾರಿ ಇನ್ನೊಬ ಮಹಿಳೆ ಜತೆ ನಿಶ್ಚಿತಾರ್ಥ ಮಾಡಿಕೊಂಡ ಮಾಹಿತಿ ಲಭ್ಯವಾದ ಬಳಿಕ 2016ರಲ್ಲಿ ಮಹಿಳೆ ದೂರು ದಾಖಲಿಸಿದ್ದರು. ಇದಕ್ಕೆ ಕೋರ್ಟ್ ಮದುವೆಯಾಗುವ ಯಾವುದೇ ಭರವಸೆ ಇಲ್ಲದೇ ಪರಸ್ಪರ ಒಪ್ಪಿಗೆ ಇದ್ದು ಲೈಂಗಿಕ ಸಂಬಂಧ ಬೆಳೆಸಿದರೆ ಅದನ್ನು ಮಹಿಳೆ ಅತ್ಯಾಚಾರ ಎಂದು ಆರೋಪ ಮಾಡುವಂತಿಲ್ಲ ಸ್ಪಷ್ಟಪಡಿಸಿದೆ.