ಈಗ ಲಂಚ ಕೊಡೋರು ಕೂಡ ಜೈಲು ಶಿಕ್ಷೆ ಅನುಭವಿಸ ಬೇಕಾಗುತ್ತೆ, ಇದರಿಂದ ನಿಜವಾಗ್ಲು ಭ್ರಷ್ಟಾಚಾರ ನಿಲ್ಲುತ್ತಾ??

0
538

ಭ್ರಷ್ಟಾಚಾರಕ್ಕಿನ್ನೊಂದು ಮೂಗ್ದಾರ, ಇಲ್ಲಿವರಿಗೂ ಇತ್ತು ಬರಿ ಲಂಚ ತಗಳೋರಿಗೆ ಹಬ್ಬ, ಇನ್ಮೇಲೆ ಲಂಚ ಕೊಡೋರಿಗೂ ಇದೆ ‘7 ವರ್ಷ ಜೈಲಿನ’ ಭಾರಿ ಮಾರಿಹಬ್ಬ.
ಹೌದು, ಎಲ್ಲಿನೋಡಿದ್ರು ಲಂಚ ಲಂಚ ಎಲ್ಲಾ ಸರ್ಕಾರಿ office-ನಲ್ಲಿ ಯಾವುದೇ ಕೆಲಸಕ್ಕೂ ಲಂಚ ಕೊಟ್ರೆಮಾತ್ರ ಬೇಗನೆ ಕೆಲಸ ಮಾಡಿಕೊಡೋದು ಇಲ್ಲಾಂದ್ರೆ ಒಂದೇ ದಿನದಲ್ಲಿ ಆಗುವ ಕೆಲಸ ಮೂರ್ನಾಲ್ಕು ತಿಂಗಳು ಅಥವಾ ಒಂದು ವರ್ಷಾನು ಆಗ್ಬೋದು, ಇಂತಹ  ಭ್ರಷ್ಟಾಚಾರದಿಂದ ಸರ್ಕಾರಿ ಅಧಿಕಾರಿಗಳು ಕೋಟಿ ಕೋಟಿ ಹಣಮಾಡಿ ಮೆರೆಯುತಿದ್ದಾರೆ.

ಇದರ ವಿರುದ್ದ 1988 ರಲ್ಲಿ ಭ್ರಷ್ಟಾಚಾರ ತಡೆ (ತಿದ್ದುಪಡೆ) ಕಾಯ್ದೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ 2013ರಲ್ಲಿ ತಿದ್ದುಪಡೆ ಮಾಡಿ ಲಂಚ ಪಡೆದವರಿಗೆ ಶಿಕ್ಷೆಯನ್ನು ವಿಧಿಸಿತ್ತು, ಅದೇಪ್ರಕಾರ ಎಷ್ಟೇ ಕ್ರಮ ಕೈಗೊಂಡರು ನಿಯಂತ್ರಣಕ್ಕೆ ಬರುತಿಲ್ಲದಿರುವ್ದನ್ನು ಮನಗಂಡ ಸಂಸತ್ತು, ಭ್ರಷ್ಟಾಚಾರ ತಡೆ ಕಾಯ್ದೆಯನ್ನು ತಿದ್ದುಪಡಿ ಮಾಡಿ ಲಂಚ ಕೊಡೋರಿಗೂ ಜೈಲಿನ ಶಿಕ್ಷೆ ವಿಧಿಸಿದ. ಮೊದಲ ಕಾಯ್ದೆಯನ್ನು ಖಾತರಿ ಪಡಿಸುವ ಮಸೂದೆಗೆ ಅಂಗೀಕಾರ ಕೊಟ್ಟು, ರಾಜ್ಯಸಭೆ ಮಸೂದೆಗೆ ಒಪ್ಪಿಗೆ ಕೊಟ್ಟಿದೆ. ಈ ತಿದ್ದುಪಡಿ ಪ್ರಕಾರ ಲಂಚ ಪಡೆದವರು ಮಾತ್ರವಲ್ಲ ಲಂಚ ನೀಡುವವರಿಗೂ ಶಿಕ್ಷೆವಿಧಿಸಿದೆ. ಈ ಶಿಕ್ಷೆಯನ್ನು ಮೊದಲಿಗೆ ಕನಿಷ್ಟ ಆರು ತಿಂಗಳಾಗಿದ್ದು ನಂತರ ಮೂರೂ ವರ್ಷಕ್ಕೆ ವಿಸ್ತರಣೆಯಾಗಿ. ಪುನರಾವರ್ತಿತ ಅಪರಾಧಿಗಳಿಗೆ 5 ರಿಂದ 10 ವರ್ಷದ ವರೆಗೆ ವಿಸ್ತರಿಸಲಾಗಿದೆ.

ಹಾಗೆ ಲಂಚ ನೀಡುವರಿಗೂ  ಶಿಕ್ಷೆ ವಿಧಿಸುವುದರ ಜೊತೆಗೆ ಪ್ರಾಮಾಣಿಕ ಅಧಿಕಾರಿಗಳು ಕಿರುಕುಳಕ್ಕೆ ಒಳಗಾಗದಂತೆ ರಕ್ಷಣೆ ನೀಡುವ ಹಲವಾರು ಅಂಶಗಳು ಮಸೂದೆಯಲ್ಲಿ ಜಾರಿಗೆ ಬಂದಿವೆ. ಲಂಚ ನೀಡದೆ ಬೇರೆದಾರಿ ಇಲ್ಲ ಎಂಬ ಸಮಯದಲ್ಲಿ ಲಂಚ ನೀಡಿದ್ರೆ ಅಂತವರ ವಿರುದ್ದ ಪ್ರಕರಣ ದಾಖಲಿಸುವುದಿಲ್ಲ. ಅವರು 7 ದಿನಗಳ ಒಳಗೆ ಭ್ರಷ್ಟಾಚಾರ ತಡೆ ಘಟಕಕ್ಕೆ ಮಾಹಿತಿ ನೀಡಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ ಕ್ರಮಗಳು ಇಂತಿವೆ.

  • ಕಾರ್ಯನಿರತ ಅಧಿಕಾರಿಗಳ ವಿರುದ್ಧದ ಲಂಚದ ದೂರು ತನಿಖೆಗೆ ಮೊದಲ ಸೂಕ್ತ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು.
  • ಇಂತಹ ರಕ್ಷಣೆ ಸರ್ಕಾರಿ ಸ್ವಾಮ್ಯದ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೂ ಅನ್ವಯ ಆಗಿತ್ತೆ.
  • ಅಧಿಕಾರ ದುರ್ಬಲಕ್ಕೆ, ಕಾನೂನುಬಾಹಿರ ವಿಧಾನ ಅನುಸರಣೆ, ಸಾರ್ವಜನಿಕ ಹಿತಾಸಕ್ತಿಯ ವ್ಯತಿರಿಕ್ತ ವರ್ತತನೆ ದುರ್ನಡತೆಯಲ್ಲಿ ಸೇರಿರುತ್ತದೆ.
  • ಸರ್ಕಾರದ ಎಲ್ಲ ಅಧಿಕಾರಿಗಲ್ಲಿಗೂ ಈಗ ಬಂಧನದಿಂದ ರಕ್ಷಣೆ. ಮೊದಲು ಜಂಟಿ ಕಾರ್ಯದರ್ಶಿ, ಅದಕು ಮೇಲಿನ ಅಧಿಕಾರಿಗಳಿಗೆ ಮಾತ್ರ ಇತ್ತು ಈಗ ಎಲ್ಲಾರಿಗೂ ಸೇರಿದೆ.
  • ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾತ್ರ ದುರ್ನಡತೆ ಎಂದು ಮಸೂದೆ ಹೇಳುತ್ತಿದೆ.