ದುರ್ವಾಸನೆಯ ಗ್ಯಾಸ್-ನ್ನು ಸುವಾಸನೆಯಾಗಿ ಮಾಡೋ ಮಾತ್ರೆಗಳು; ನೀವು ಬಿಡುವ ಕೆಟ್ಟ ಗ್ಯಾಸ್ 5 ವೆರೈಟಿಯಲ್ಲಿ ಗಮ್ಮ್ ಎನಿಸಬಹುದು..

0
638

ಸ್ನಹಿತರ ಮದ್ಯ, ಬಸ್, ಆಫೀಸ್ ಹೀಗೆ ಎಲ್ಲ ಕಡೆಯಲ್ಲಿ ಕೆಲವೊಬ್ಬರು ಮುಜುಗರಕ್ಕೆ ಒಳಗಾಗುತ್ತಾರೆ. ಇನ್ನೂ ಕೆಲವರಂತೂ ಸುತ್ತಮುತ್ತಲ ಜನರಲ್ಲಿ ನಗೆಪಾಟಿಗೆ ಒಳಗಾಗುತ್ತಾರೆ. ಏಕೆಂದರೆ ತಾವು ಬಿಡುವ ದುರ್ವಾಸನೆಯ ಗ್ಯಾಸ್ ಹತ್ತಿರವಿರುವರನ್ನು ಬೇಸರಗೊಳಿಸುತ್ತೆ, ಕೆಲವು ಸಮಯದಲ್ಲಿ ಅಂತು ಕಣ್ಣು ಮುಂದೆಯೇ ಜನರು ಬೈದರು ಸುಮ್ಮನೆ ಕುಳಿತುಕೊಳ್ಳುವ ಪರಿಸ್ಥಿತಿ ತಾವು ಬಿಡುವ ಹೂಸಿನಿಂದ ಬರುತ್ತದೆ. ಕೆಲವರಿಗಂತೂ ಏನೇ ಊಟ ಮಾಡಿದರು ಗ್ಯಾಸ್ ಅಂತು ತಪ್ಪುವುದಿಲ್ಲ, ಇದಕ್ಕೆ ಪರಿಹಾರ ಏನು ಎನ್ನುವುದು ಸರಿಯಾದ ರೀತಿಯಲ್ಲಿ ಊಟವನ್ನು ತಿನ್ನುವುದು ಎನ್ನುವದು ತಜ್ಞರ ಸಲಹೆ ಆದರು ಕೆಲವು ಸಮಯದಲ್ಲಿ ಮತ್ತೆ ಗ್ಯಾಸ್ ಬಂದೆ ಬರುತ್ತೆ ಅಂತ ಹಲವು ಮುಜುಗರದಿಂದ ಹೇಳಿಕೊಳ್ಳುತ್ತಿದ್ದರು. ಈ ಸಮಸ್ಯೆಗೆ ಈಗ ಪರಿಹಾರ ಕಂಡು ಹಿಡಿದಿದ್ದು ಗ್ಯಾಸ್ ಬಿಟ್ಟರು ಮತ್ತೆ ಬಿಡಿ ಎನ್ನುವ ರೀತಿಯಲ್ಲಿದೇ ನೋಡಿ.

Also read: ವಿಶ್ವದ ವಿಚಿತ್ರ ಹೋಟೆಲ್; ಇಲ್ಲಿ ಕುಡಿಯಲು, ಊಟ ಮಾಡಲು ಹೋಗಬೇಕು ಅಂದರೆ ಬೆತ್ತಲಾಗಿ ಹೋಗಬೇಕು..

ಏನಿದು ದುರ್ವಾಸನೆ ಸುವಾಸನೆ ಮಾತ್ರೆ?

ಹೌದು ಕೇಳಲು ವಿಚಿತ್ರವಾದರು ಅಸಲಿಗೆ ಹೆಚ್ಚು ಬೇಡಿಕೆಯನ್ನು ಪಡೆದಿರುವ ಈ ಮಾತ್ರೆ ಸೇವಿಸಿದರೆ ಹೂಸು ದುರ್ವಾಸನೆಯನ್ನು ಬೀರದೆ ಸುವಾಸನೆಯನ್ನೂ ಸೂಸುತ್ತದೆ. ಯಾವ ಸುವಾಸನೆ ಇಷ್ಟವೋ ಅದನ್ನು ನೀವು ಖರೀದಿಸಲು ನಿಮಗೆ ಚಾಯ್ಸ್ ಕೂಡ ಇದೆ. ಚಾಕೋಲೆಟ್, ಗುಲಾಬಿ, ಲ್ಯಾವೆಂಡರ್ ಹೀಗೆ ವಿಧವಿಧ ಪರಿಮಳದ, ಸುಗಂಧ ಸೂಸುವ ಹೂಸು ಮಾತ್ರೆಗಳಿಗೆ ಮಾರ್ಕೆಟ್‍ನಲ್ಲಿ ಭಾರಿ ಬೇಡಿಕೆ ಇದೆ. ಇದನೆಲ್ಲ ನೋಡಿದರೆ ಜಗ್ಗತಿನಲ್ಲಿ ಇನ್ನು ಏನು ಬರುವುದು ಬಾಕಿ ಇದೆ ಎನ್ನುವ ಮಟ್ಟಕ್ಕೆ ಬಂದಿದೆ.

Also read: ರಾಜ್ಯದಲ್ಲೇ ಇರುವ ವಿಚಿತ್ರ ಸಂಪ್ರದಾಯ; ಮನೆಯಲ್ಲಿ ಗಂಡು ಮಕ್ಕಳಿಗೆ ಮದುವೆಯಾದರೆ ಇಡಿ ಕುಟುಂಬದವರಿಗೆ ಬಿಳ್ಳುತ್ತೆ ಬೇಡಿ..

ಹೇಗಿದೆ ಮಾತ್ರೆ ಉಪಯೋಗ?

ಕೆಟ್ಟ ವಾಸನೆಯನ್ನು ಸುವಾಸನೆಗೆ ಮಾರ್ಪಡಿಸಿದ ಫ್ರಾನ್ಸ್ ನ ವ್ಯಕ್ತಿ, ಕಂಡು ಹಿಡಿದ ಮಾತ್ರೆಗಳು ವ್ಯಕ್ತಿ ಗ್ಯಾಸ್ ಬಿಟ್ಟಾಗಲೆಲ್ಲಾ ವಿವಿಧ ಸುವಾಸನೆ ಬೀರುವ ಮಾತ್ರೆಯನ್ನು ಕಂಡು ಹಿಡಿದಿದ್ದಾರೆ. ಪಶ್ಚಿಮ ಫ್ರೆಂಚ್ ಪಟ್ಟಣವಾದ ಗೆಸ್ವ್ರೆಸ್‍ನ ನಿವಾಸಿಯಾದ ಕ್ರಿಶ್ಚಿಯನ್ ಪೋಯಿಂಚೆವಲ್ ಹೂಸಿನ ದುರ್ವಾಸನೆಗೆ ಪರಿಹಾರ ಕಂಡುಹಿಡಿದ್ದಾರೆ. ಅಲ್ಲದೆ ಈ ಮಾತ್ರೆಗೆ ಪೈಲ್ಯೂಟ್‍ಪೆಟ್ ಎಂದು ನಾಮಕರಣ ಮಾಡಿದ್ದಾರೆ. ನೀವು ಈತರಹದ ಮಾತ್ರೆಯನ್ನು ಕಂಡುಹಿಡಿಯಲು ಕಾರಣವೇನು ಎಂದು ಪೋಯಿಂಚೆವಲ್ ಅವರಿಗೆ ಕೇಳಿದಾಗ ಈ ಮಾತ್ರೆ ಹಿಂದಿರುವ ಇತಿಹಾಸವನ್ನು ತಿಳಿಸಿದ್ದಾರೆ.

ಏನಿದು ಮಾತ್ರೆಯ ಇತಿಹಾಸ?

Also read: ಈ ಸ್ಟೋರಿ ನೋಡಿದ ಬಳಿಕ ಕೃಷಿಕ ಯುವಕರನ್ನು ಮದುವೆಯಾಗಲು ಒಪ್ಪದ ಯುವತಿಯರು ಕ್ಯೂ ನಿಂತರೂ ಅಚ್ಚರಿ ಇಲ್ಲ..

ಒಂದು ದಿನ ಸ್ನೇಹಿತರೊಟ್ಟಿಗೆ ಊಟಕ್ಕೆ ಆಹ್ವಾನಿಸಿದಾಗ ಕೆಟ್ಟ ಗ್ಯಾಸ್ ಬಿಡುವುದರಿಂದ ಪೋಯಿಂಚೆವಲ್ ನಗೆಪಾಟಿಗೆ ಒಳಗಾಗಿದ್ದರು. ಆಗ ಅವರ ಸ್ನೇಹಿತರು ಟೀಕಿಸಿದ್ದೆ ಈ ಮಾತ್ರ ಹುಟ್ಟಿಕೊಳ್ಳಲು ಕಾರಣವಾಯ್ತು. ಆ ಬಳಿಕ ತಾಮಗಾದ ಮುಜುಗರ ಬೇರೆಯವರು ಅನುಭವಿಸಬಾರದೆಂದು ಈ ಮಾತ್ರೆ ಕಂಡುಹಿಡಿದರು ಎಂದು ವರದಿಯಾಗಿದೆ. 2007ರಿಂದ ಈ ಮಾತ್ರೆಯನ್ನು ತಯಾರಿಸಲು ಪೋಯಿಂಚೆವಲ್ ಆರಂಭಿಸಿದ್ದು, ಲುಟಿನ್ ಮಲಿನ್ ಎಂಬ ಹೆಸರಿನಲ್ಲಿ ಪ್ರತ್ಯೇಕ ವೆಬ್‍ಸೈಟ್ ಅನ್ನು ಕೂಡ ಪೋಯಿಂಚೆವಲ್ ಹೊಂದಿದ್ದಾರೆ. ಈ ವೆಬ್‍ಸೈಟ್‍ನಲ್ಲಿ ಈ ಮಾತ್ರೆಗಳು ಹೇಗೆ ತಯಾರಾಗುತ್ತೆ ಎನ್ನುವ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಸಿದ್ದಾರೆ.

ಮಾತ್ರೆಯಲ್ಲಿ ಎಷ್ಟು ವಿಧದ ಸುವಾಸನೆಗಳಿವೆ?

Also read: ಈ ಊರಿನಲ್ಲಿ ಮದುಮಗ ಶೃಂಗಾರಗೊಂಡು ಮನೆಯಲ್ಲೇ ಇರಬೇಕು; ಏಕೆಂದರೆ ವಧುವಿಗೆ ತಾಳಿ ಕಟ್ಟಿ ಮದುವೆಯಾಗುವುದು ವರನ ಸಹೋದರಿ ಅಂತೆ..

ಈ ಮಾತ್ರೆ 5 ವಿಧದಲ್ಲಿ ಸಿಗುತ್ತಿದ್ದು, ಫಾರ್ಟ್ ಪಿಲ್ಸ್ ಲಭ್ಯವಿದ್ದು, 60 ಮಾತ್ರೆಗಳಿಗೆ 18.86 ಯುರೋ(1,483 ರೂ.)ಗೆ ಬೆಲೆ ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲದೆ ಈ ಮಾತ್ರೆಗಳನ್ನು ಆನ್‍ಲೈನ್ ಮೂಲಕ ಆರ್ಡರ್ ಮಾಡಬಹುದು. ಲುಟಿನ್ ಮಲಿನ್ ವೆಬ್‍ಸೈಟ್ ಮಾತ್ರೆಗಳನ್ನು ಆನ್‍ಲೈನ್ ಆರ್ಡರ್ ಮಾಡಬಹುದು. ಉಚಿತ ಶಿಪ್ಪಿಂಗ್ ವ್ಯವಸ್ಥೆಯನ್ನೂ ಕೂಡ ಇದ್ದು 1. ಮೇ ಡೇ ಲಿಲ್ಲಿ ಸೆಂಟೆಡ್ ಫಾರ್ಟ್ ಪಿಲ್ಸ್, 2. ಚಾಕಲೇಟ್ ಅರೋಮಾ ಫಾರ್ಟ್ ಪಿಲ್ಸ್, 3. ರೋಸ್ ಸ್ಮೆಲ್ ಫಾರ್ಟ್ ಪಿಲ್ಸ್, 4. ವಯಲೆಟ್ ಸ್ಮೆಲ್ ಫಾರ್ಟ್ ಪಿಲ್ಸ್, 5. ಜಿಂಜರ್ ಸ್ಮೆಲ್ ಫಾರ್ಟ್ ಪಿಲ್ಸ್. ವೆರೈಟಿಯಲ್ಲಿ ಮಾತ್ರೆಗಳು ಮಾರಾಟವಾಗುತ್ತಿವೆ.