ನರೇಂದ್ರ ಮೋದಿ ಚೈತ್ರ ನವರಾತ್ರಿಗಾಗಿ ಒಂಭತ್ತು ದಿನ ಉಪವಾಸ

0
635

ಚೈತ್ರನವರಾತ್ರಿಯ ಒಂಭತ್ತು ದಿನಗಳ ವ್ರತಾಚರಣೆ ಲಕ್ಷಾಂತರ ಭಕ್ತರ ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥರೂ ಉಪವಾಸ ವ್ರತಾಚರಣೆ ಕೈಗೊಂಡಿದ್ದಾರೆ. ಮೋದಿ ಮತ್ತು ಅದಿತ್ಯನಾಥರೂ ಹಲವು ವರ್ಷಗಳಿಂದ ತಪ್ಪದೆ ಉಪವಾಸ ವ್ರತ ಆಚರಿಸಿಕೊಂಡು ಬರುತ್ತಿದ್ದಾರೆ.

ಕಳೆದ 35 ವರ್ಷಗಳಿಂದ ಮೋದಿ ಈ ವ್ರತಾಚರಣೆ ನಡೆಸುತ್ತಿದ್ದು ಎಂದಿನಂತೆ 9 ದಿನಗಳ ಕಾಲ ಕಟ್ಟುನಿಟ್ಟಿನ ಉಪವಾಸ ಮಾಡಲಿದ್ದಾರೆ ಮತ್ತು ಬಿಸಿನೀರು ಹಾಗೂ ನಿಂಬೆ ರಸವನ್ನಷ್ಟೇ ಸೇವಿಸಲಿದ್ದಾರೆ.

ನರೇಂದ್ರ ಮೋದಿ ಜಮ್ಮುವಿನ ಮಾತಾ ವೈಷ್ಣೋದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕವಷ್ಟೇ 2014ರ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದರು. 2014ರ ಸೆಪ್ಟಂಬರ್ ನಲ್ಲಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗಲೂ ಶರನ್ನವರಾತ್ರಿ ವ್ರತ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮೋದಿ ಅವರು ವರ್ಷದಲ್ಲಿ ಒಟ್ಟು 18 ದಿನ ನವರಾತ್ರಿ ವ್ರತಾಚರಣೆ ಕೈಗೊಳ್ಳುತ್ತರೆ.

ಯೋಗಿ ಆದಿತ್ಯನಾಥರೂ ದುರ್ಗೆಯ ಪರಮಭಕ್ತರಾಗಿದ್ದು ಗೋರಖಪುರದ ಮಹಾಂತರವಾಗಿ ಇದ್ದಷ್ಟೂ ದಿವಸ ಅವರು ನವರಾತ್ರಿಯ ಒಂಭತ್ತು ದಿನಗಳ ಅವಧಿಯಲ್ಲಿ ಶಕ್ತಿಸಾದನೆಯಲ್ಲಿ ತೊಡಗಿದ್ದರು. ಈ ಅವಧಿಯಲ್ಲಿ ಅವರು ಹಾಲು ಮತ್ತು ಹಣ್ಣು ಸೇವಿಸುತ್ತಾರೆ. ನಾಥ ಸಂಪ್ರದಾಯ ಪದ್ಧತಿಯ ಪ್ರಕಾರ ಎಂಟು ದಿನಗಳ ಕಾಲ ಯಜ್ಞವಿಧಿಗಳನ್ನು ಕೈಗೊಂಡು ಕನ್ಯಾಪೂಜೆ ನೆರವೇರಿಸುತ್ತಾರೆ. ಈಗ ಮುಖ್ಯಮಂತ್ರಿಯಾದ ಮೇಲೆಯೂ ಸಾಧನೆ ಮತ್ತು ಉಪವಾಸ ಮುಂದುವರಿಸಲಿರುವರಾದರೂ ರಾಜ್ಯದಾದ್ಯಂತ ಸಂಚರಿಸುವುದಿಲ್ಲ. ಈ ಅವಧಿಯಲ್ಲಿ ಅವರ ಸಾಮಾಜಿಕ ಕಾರ್ಯಗಳೆಲ್ಲಾವೂ ಕಛೇರಿಗಷ್ಟೇ ಮೀಸಲಿರಲಿದೆ. ನವರಾತ್ರಿ ವ್ರತದ ಪೂಜೆ, ಆಚರಣೆಗಳೆಲ್ಲವೂ ಲಖನೌದ ಅವರ ಅಧಿಕೃತ ನಿವಾದಲ್ಲೆ ಮಾಡಲಿದ್ದಾರೆ.