ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟ. ಆದರೂ ಇವರ ಕನ್ನಡ ಪ್ರೀತಿ ನೋಡಿ!!

0
1327

ಇವರು ತೆಲುಗು ಚಿತ್ರರಂಗದ ಸ್ಟಾರ್ ನಟ.. ಇವರ ಸ್ಟೈಲ್ ಗೆ ದೇಶ ವಿದೇಶದಲ್ಲಿ ಫ್ಯಾನ್ ಗಳಿದ್ದಾರೆ. ಇತ್ತೀಚೀಗೆಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇವರು ಮಾತನಾಡಿದ ರೀತಿ ಕನ್ನಡಿಗರ ಮನದಲ್ಲಿ ಸ್ಥಾನಗಟ್ಟಿಯಾಗುವಂತೆ ಮಾಡಿದೆ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತ ನಟರು, ನಟಿಯರು ಐಫಾಚಿತ್ರೋತ್ಸವದಲ್ಲಿ ಜಮಾಯಿಸಿದ್ದರು. ಆಗ ಜೂನಿಯರ್ ಎನ್ ಟಿ ಆರ್ ಶುದ್ಧ ಕನ್ನಡವನ್ನು ಮಾತನಾಡಿದರು.ಇದೇನಪ್ಪ ಇವರು ಇಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಾರೆ ಎಂದುಕೊಂಡವರೆ ಹೆಚ್ಚು. ಆದರೆ ಇವರಹಿಂದಿನ ಕಥೆ ಗೊತ್ತಿದ್ದವರು, ಇದು ಮಾಮುಲ ಎಂಬಂತಿದ್ದರು.

ಎನ್ ಟಿ ರಾಮರಾವ್ ಕುಟುಂಬದ ನಟ ಜೂನಿಯರ್ ಟೈಗರ್ ಖ್ಯಾತಿಯ ಜೂನಿಯರ್ ಎನ್ ಟಿಆರ್, ತಮ್ಮತಾಯಿ ಹಾಗೂ ತಮ್ಮ ಕನ್ನಡದ ಸಂಬಂಧವನ್ನು ಈ ವೇಳೆ ಬಿಚ್ಚಿಟ್ಟರು. ಅವರ ತಾಯಿಯ ಹುಟ್ಟಿದ್ದುಕುಂದಾಪುರದಲ್ಲಿ. ಇವರ ತಾಯಿ ಹೆಸರು ಶಾಲಿನಿ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು.ಶಾಲಿನಿ ಅವರು ಚಿಕ್ಕವರಿದ್ದಾಗಲೇ ಮುತ್ತಿನ ನಗರಿಯಲ್ಲಿ ನೆಲೆಸಿದ್ದಾರೆ. ಇವರು ಹರಿಕೃಷ್ಣ ಅವರ ಜೊತೆ ಸಪ್ತಪದಿ ತುಳಿದ ಬಳಿಕ ತೆರೆಯ ಹಿಂದೆ ಸರಿದರು. ಆದರೆ ಮಗನ ಖ್ಯಾತಿ ಇವರನ್ನು ಮತ್ತೆ ತೆರೆಯ ಮುಂದೆಬರುವಂತೆ ಮಾಡಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾವೋದ್ವೆಗಕ್ಕೆ ಒಳಗಾದಂತೆ ಕಂಡುಬಂದ ಎನ್ ಟಿಆರ್ ತಮ್ಮ ತಾಯಿಕುಂದಾಪುರದವರು. ನಮ್ಮ ಅಜ್ಜನ ಹಾಗೆ ನಮ್ಮ ತಾಯಿಯವರದ್ದು ದೊಡ್ಡ ಕುಟುಂಬ. ನಾನು ಸಮಯಸಿಕ್ಕಿದಾಗ ಕುಂದಾಪುರಕ್ಕೆ ಹೋಗಿ ಬರುತ್ತೇನೆ. ಕರವಾಳಿ ನಗರಿ ಹಾಗೂ ನೆರೆಯ ಕರ್ನಾಟಕ ಜೊತೆ ಅವಿನಾಭವಸಂಬಂಧ ಇದೆ ಎಂದು ತಿಳಿಸಿದ್ದಾರೆ.