ಸಾವಿರಾರು ಕೋಟಿ ಒಡೆಯನಾಗಿದ್ದ ಅನಿಲ್ ಅಂಬಾನಿ ಇಂದು ದಿವಾಳಿಯಾದ ಕಥೆ ಕೇಳಿ, ಜೀವನ ನಿಜವಾಗಿಯೂ ಒಂದು ಚಕ್ರ ಅಂತ ನಿಮಗೇ ಅನ್ನಿಸುತ್ತೆ!!

0
1120

ಶ್ರೀ ಮಂತಿಕೆ ಶಾಶ್ವತವಲ್ಲ ಎನ್ನುವ ಎನ್ನುವುದಕ್ಕೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಜೀವನ ನೋಡಿದರೆ ತಿಳಿಯಿತ್ತೆ, ಏಕೆಂದರೆ ಒಂದು ಕಾಲದಲ್ಲಿ ಶ್ರೀ ಮಂತಿಕೆ ಇವರನ್ನು ಹುಡಿಕಿಕೊಂಡು ಬಂದಿತ್ತು, ಆದರೆ ಈಗ ಟೆಲಿಕಾಂ ಮಾರುಕಟ್ಟೆಯಲ್ಲಿ ಆದ ಹಲವು ವಿನಾಶಕಾರಿ ತಿರುವುಗಳಿಂದ ಅವರು ಇಂದು ಶ್ರೀಮಂತ ಉದ್ಯಮಿಯಾಗಿ ಉಳಿದಿಲ್ಲ, 2012ರಲ್ಲಿ 7 ಶತಕೋಟಿ ಡಾಲರ್ ಗೂ ಅಧಿಕ ಇದ್ದ ಅನಿಲ್ ಅಂಬಾನಿ ಹೂಡಿಕೆ ಮೌಲ್ಯ ಇಂದು 89 ದಶಲಕ್ಷ ಡಾಲರ್ ಗೆ ಇಳಿದಿದೆ. ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ ಅನಿಲ್ ಅಂಬಾನಿ ಪರ ವಕೀಲರು ಹೇಳಿಕೆ ನೀಡಿದ್ದಾರೆ.

ಬಡವನಾದ ಅನಿಲ್ ಅಂಬಾನಿ?

ಅನಿಲ್ ಅಂಬಾನಿ ಸಣ್ಣ ವ್ಯಕ್ತಿಯಲ್ಲ, ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಸಹೋದರ. ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಶ್ರೀಮಂತ ಉದ್ಯಮಿಯಾಗಿದ್ದರು ಮತ್ತು ಈಗ ಅವರು ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ಇಲ್ಲ ಎಂದು ಅವರ ವಕೀಲರು ಯುಕೆ ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದರು. ಫೆಬ್ರವರಿ 2012 ರಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ ಆಫ್ ಚೀನಾ ಲಿಮಿಟೆಡ್ ಮುಂಬೈ ಶಾಖೆ, ಚೀನಾ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಎಕ್ಸಿಮ್ ಬ್ಯಾಂಕ್ ಆಫ್ ಚೀನಾ, ಸುಮಾರು 925 ಮಿಲಿಯನ್ ಡಾಲರ್ ಸಾಲ ಮರುಹಣಕಾಸು ಸಾಲದ ಮೇಲೆ ವೈಯಕ್ತಿಕ ಖಾತರಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಂಬಾನಿ ವಿರುದ್ಧ ಸಾರಾಂಶದ ತೀರ್ಪು ಕೋರಿತ್ತು.

“2012ರ ನಂತರ ಅನಿಲ್ ಅಂಬಾನಿಯವರ ಹೂಡಿಕೆಗಳು ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿತು. ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಭಾರತ ಸರ್ಕಾರ ಮಾಡಿಕೊಂಡ ನೀತಿಗಳ ಬದಲಾವಣೆಯಿಂದ ದೇಶದ ಟೆಲಿಕಾಂ ವಲಯಕ್ಕೆ ಇನ್ನಿಲ್ಲದ ಹೊಡೆತ ಬಿದ್ದಿದೆ. 2012ರಲ್ಲಿ 7 ಶತಕೋಟಿ ಡಾಲರ್ ಗೂ ಅಧಿಕ ಇದ್ದ ಅನಿಲ್ ಅಂಬಾನಿ ಹೂಡಿಕೆ ಮೌಲ್ಯ ಇಂದು 89 ದಶಲಕ್ಷ ಡಾಲರ್ ಗೆ ಇಳಿದಿದೆ. ಅವರ ಬಾಧ್ಯತೆಗಳ ಲೆಕ್ಕ ತೆಗೆದುಕೊಂಡರೆ ಅವರ ವ್ಯವಹಾರ ಜಾಲ ಮೌಲ್ಯ ಶೂನ್ಯವಾಗಿರುತ್ತದೆ, ಒಂದು ಕಾಲದಲ್ಲಿ ಆಗರ್ಭ ಶ್ರೀಮಂತರಾಗಿದ್ದವರು ಇಂದು ಎಲ್ಲವನ್ನೂ ಕಳೆದುಕೊಂಡಿದ್ದಾರೆ, ಹೀಗಾಗಿ 700 ದಶಲಕ್ಷ ಡಾಲರ್ ನಷ್ಟು ಮೊತ್ತ ಅವರು ನ್ಯಾಯಾಲಯಕ್ಕೆ ಕಟ್ಟಲು ಸಾಧ್ಯವಿಲ್ಲ” ಎಂದು ಯುಕೆ ಕೋರ್ಟ್ ನಲ್ಲಿ ಅಂಬಾನಿ ಬ್ಯಾರಿಸ್ಟರ್ ರಾಬರ್ಟ್ ಹೊವೆ ಹೇಳಿದ್ದಾರೆ.

ಅಂಬಾನಿ ಪಡೆದ ಸಾಲವೆಷ್ಟು?

ಚೀನಾದ ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕ್ ಲಿಮಿಟೆಡ್‌, ಚೀನಾ ಅಭಿವೃದ್ಧಿ ಬ್ಯಾಂಕ್, ಚೀನಾ ರಫ್ತು-ಆಮದು ಬ್ಯಾಂಕ್ 2012ರಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ಲಿಮಿಟೆಡ್‌ಗೆ 925.2 ಮಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 6,603 ಕೋಟಿ 80 ಲಕ್ಷದ 400) ಸಾಲವನ್ನು ನೀಡಿದ್ದವು. ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ ವೈಯಕ್ತಿಕ ಖಾತ್ರಿ ನೀಡಲು ಅನಿಲ್ ಅಂಬಾನಿ ಹಿಂದೇಟು ಹಾಕಿದಾಗ ಸಾಲದ ಒಪ್ಪಂದ ಮುರಿದ ಹಿನ್ನಲೆಯಲ್ಲಿ ಲಂಡನ್ ನ ಹೈಕೋರ್ಟ್ ತನ್ನ ಕಾನೂನು ವ್ಯಾಪ್ತಿಯಲ್ಲಿ ಅಂಬಾನಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಆರು ವಾರದೊಳಗೆ 100 ಮಿಲಿಯನ್ ಡಾಲರ್‌ಗಳನ್ನು ನೀಡಬೇಕೆಂದು ಇಂಗ್ಲೆಂಡ್ ಕೋರ್ಟ್ ನಿರ್ದೇಶಿಸಿದೆ.