ರಾಜ್ಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದವರು ಕಡ್ಡಾಯವಾಗಿ ಗ್ರಾಮೀಣ ಸೇವೆಯನ್ನು ಮಾಡಲೇಬೇಕು ಇಲ್ಲದಿದ್ದರೆ ಬಿಳ್ಳಲಿದೆ ಬಾರಿ ದಂಡ..

0
250

ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದ ಅಭ್ಯರ್ಥಿಯು ರಾಜ್ಯದಲ್ಲೇ ವೈದ್ಯಕೀಯ ವೃತ್ತಿ ನಡೆಸಲು ಬಯಸಿದರೆ ಕಡ್ಡಾಯವಾಗಿ 1 ವರ್ಷದ ಗ್ರಾಮೀಣ ಸೇವೆ ಕೈಗೊಳ್ಳಬೇಕು. ಇಲ್ಲದಿದ್ದರೆ, ಆತ ರಾಜ್ಯದಲ್ಲಿ ವೈದ್ಯ ವೃತ್ತಿ ಕೈಗೊಳ್ಳುವಂತಿಲ್ಲ. ಅಂದರೆ, ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ ವ್ಯಾಸಂಗ ಮಾಡಿ, ವೃತ್ತಿಯನ್ನು ಹೊರರಾಜ್ಯ ಅಥವಾ ಹೊರರಾಷ್ಟ್ರದಲ್ಲಿ ಕೈಗೊಳ್ಳಬಯಸುವವರಿಗೆ ಈ ಗ್ರಾಮೀಣ ಸೇವೆ ಕಡ್ಡಾಯ ನೀತಿ ಅನ್ವಯಿಸುವುದಿಲ್ಲ. ಹೀಗೊಂದು ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಜಾರಿ ಮಾಡಿತ್ತು. ನಂತರ 2015 ರಲ್ಲಿ. ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಲುವಿನಿಂದ ರಾಜ್ಯ ಸರಕಾರ ಹಿಂದೆ ಸರಿದಿತ್ತು, ಈಗ ಗ್ರಾಮೀಣ ಸೇವೆಯನ್ನು ಕಡ್ಡಾಯ ಮಾಡಿದೆ.

ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ?

ಹೌದು ರಾಜ್ಯ ಸರ್ಕಾರ ವೈದ್ಯಕೀಯ ಪದವಿ ವ್ಯಾಸಂಗ ಮುಗಿಸಿದ ವೈದ್ಯರು ಒಂದು ವರ್ಷದ ಅವಧಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಪೂರೈಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ್ ಹೇಳಿದ್ದಾರೆ. ವಿಧಾನಪರಿಷತ್- ನಲ್ಲಿಂದು ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿಯಮ ಮೀರಿದಲ್ಲಿ ಅಂತಹ ವೈದ್ಯ ವಿದ್ಯಾರ್ಥಿಗಳು ಹತ್ತು ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಇಲ್ಲದಿದ್ದರೆ ಕಡ್ಡಾಯ ಗ್ರಾಮೀಣ ಸೇವೆಗೆ ಸಂಬಂಧಿಸಿದಂತೆ ಈವರೆಗೆ ಮುಚ್ಚಳಿಕೆ ಬರೆದುಕೊಟ್ಟು ಅದನ್ನು ಉಲ್ಲಂಘಿಸಿರುವ ವೈದ್ಯರ ವಿರುದ್ಧ ದಂಡ ವಸೂಲು ಮಾಡಲು ನ್ಯಾಯಾಲಯದಲ್ಲಿ ದಾವೆ ಹೂಡಲು ಸರ್ಕಾರ ನಿರ್ಧರಿಸಿದೆ. ದಂಡದ ಮೊತ್ತದ ಶೇ 10 ರಷ್ಟನ್ನು ನ್ಯಾಯಾಲದ ಶುಲ್ಕವಾಗಿ ಕಟ್ಟಬೇಕಾಗಿದ್ದು ಇದು ಅಂದಾಜು ಎಂಟರಿಂದ ಹತ್ತು ಕೋಟಿ ರೂಪಾಯಿ ಆಗಬಹುದು ಎಂದು ಸಚಿವರು ಹೇಳಿದ್ದಾರೆ.

ಏನಿದು ದಂಡ ನಿಯಮ?

ಕೆಲವೊಬ್ಬರು ಗ್ರಾಮೀಣ ಸೇವೆ ಮಾಡಲು ಆಗದೆ ಹಣ ಕಟ್ಟಿ ಈ ತಾಪತ್ರೆಯಿಂದ ತಪ್ಪಿಸಿಕೊಳ್ಳಬಹುದು, ಎನ್ನುವ ಅವಕಾಶವನ್ನು ಮೊದಲು ನೀಡಿತ್ತು ಆದರೆ ಈಗ ಅದಕ್ಕೆ ತಪ್ಪಿಸಿಕೊಳ್ಳಲು ಆಗದಂತೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲು ಸಜ್ಜಾಗಿದ್ದು, ಹತ್ತು ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂದು ತಿಳಿಸಿದೆ. ಗ್ರಾಮೀಣ ಸೇವೆ ಈ ಹಿಂದೆಯೂ ಕಡ್ಡಾಯವೇ ಆಗಿದ್ದರೂ ದಂಡ ತೆತ್ತು ಗ್ರಾಮೀಣ ಸೇವೆ ತಪ್ಪಿಸಿಕೊಳ್ಳಬಹುದಿತ್ತು. 2011ರ ತನಕ ದಂಡ ಮೊತ್ತ ತಲಾ ಒಂದು ಲಕ್ಷ ರೂ. ಇತ್ತು. ಮುಂದೆ ಅದನ್ನು 25 ಲಕ್ಷ ರೂ.ವರೆಗೆ ಏರಿಸಲಾಗಿತ್ತು. ಈ ಭಾರಿ ಪ್ರಮಾಣದ ದಂಡವನ್ನು ಪಾವತಿಸಿಯೂ ಅಭ್ಯರ್ಥಿಗಳು ಗ್ರಾಮೀಣ ಸೇವೆಯಿಂದ ತಪ್ಪಿಸಿಕೊಳ್ಳುತ್ತಿದ್ದರು.ಹೀಗಾಗಿ ಗ್ರಾಮೀಣ ಕಡ್ಡಾಯ ಸೇವೆ ಕಾಯಿದೆ ಜಾರಿಗೆ ತಂದಿದ್ದು, ಈಗ ಮತ್ತೆ ಅದನ್ನೇ ಮಾಡಿದ್ದು ಕೇವಲ ದುಡ್ಡಿನ ಆಸೆಗಾಗಿ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರಾಜ್ಯ ಸರ್ಕಾರಕ್ಕೆ ಗ್ರಾಮೀಣ ಸೇವೆ ಮುಖ್ಯವೆಂದರೆ ಕಡ್ಡಾಯವಾಗಿ ಮಾಡಬೇಕಿತ್ತು ಆದರೆ ದಂಡ ನಿಯಮದಿಂದ ಹಣವಂತರು ದಂಡ ಕಟ್ಟಿ ಸಿಟಿಯಲ್ಲಿ ವ್ಯದ್ಯ ವೃತ್ತಿಯನ್ನು ಕೈಗೊಳ್ಳುತ್ತಾರೆ ಎನ್ನುವು ಸತ್ಯವೆಂದು ಹಲವರು ಹೇಳಿದ್ದಾರೆ. ಅದರಂತೆಯೇ ಸರ್ಕಾರ ಒಂದು ವರ್ಷದ ದಂಡವನ್ನು ಲೆಕ್ಕಹಾಕಿದ್ದು ಎಂಟರಿಂದ ಹತ್ತು ಕೋಟಿ ರೂಪಾಯಿ ಆಗಬಹುದು ಎಂದು ಸಚಿವರು ಹೇಳಿದ್ದಾರೆ. ಇದೆಲ್ಲವೂ ಹೊರ ರಾಜ್ಯದ, ಖಾಸಗಿ ಮತ್ತು ಡೀಮ್ಡ್ ಕಾಲೇಜುಗಳಲ್ಲಿ ಕಲಿತವರಿಂದ ದಂಡ ವಸೂಲಿ ಮಾಡಿ, ರಾಜ್ಯದ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮಾತ್ರ ಸತಾಯಿಸಲಾಗುತ್ತಿದೆ ಎಂದು ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಈಗ ಮತ್ತೆ ಅದೇ ನಿಯಮ ಜಾರಿಗೆ ಬಂದಿದ್ದು ಯಾವ ಮಟ್ಟದಲ್ಲಿ ಯಶಸ್ವಿಯಾಗಲಿದೆ ಎನ್ನುವುದು ಕಾದು ನೋಡಬೇಕಿದೆ.