ಚಿಕ್ಕ ಮನೆ/ಫ್ಲಾಟ್-ಗಳಲ್ಲಿ ಈ ರೀತಿಯಾಗಿ ಮಾಡಿದರೆ ಅತಿ ಕಡಿಮೆ ಜಾಗದಲ್ಲಿ ಸುಖವಾಗಿರಬಹುದು!!

0
3063

ಹೆಚ್ಚಿನ ಜನಸಂಖ್ಯೆಯಿಂದಾಗಿ ಮಹಾನಗರಗಳಲ್ಲಿ ಸೂರಿನ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಎಲ್ಲರೂ ಸ್ವಂತ ಸೈಟು ತೆಗೆದುಕೊಂಡು ಮನೆ ಕಟ್ಟುವುದು ಕನಸಿನ ಮಾತು.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಹಾಗಾಗಿ ಮಧ್ಯಮವರ್ಗದವರೂ ಈಗ ಅಪಾರ್ಟ್ ಮೆಂಟ್‍ಗಳ ಮೊರೆ ಹೋಗುತ್ತಿದ್ದಾರೆ. ಅಪಾರ್ಟ್‍ಮೆಂಟ್‍ಗಳ ಬೆಲೆ ಗಗನಮುಖಿಯಾದ್ದರಿಂದ ಮಧ್ಯಮ ಬಜ್ಜೆಟ್ಟಿನ ಅಪಾರ್ಟ್‍ಮೆಂಟ್‍ಗಳ ಮೊರೆ ಹೋಗುತ್ತಿದ್ದಾರೆ. ವಿಶಾಲವಾದ ಅಪಾರ್ಟ್‍ಮೆಂಟ್‍ಗಳ ಜೊತೆಗೆ ಮಧ್ಯಮವರ್ಗಕ್ಕೂ ಅನುಕೂಲವಿರುವ “ಸ್ಟುಡಿಯೊ ಫ್ಲಾಟ್”ಗಳು ಇತ್ತೀಚೆಗೆ ತಲೆ ಎತ್ತುತ್ತಿವೆ. ಈ ಮಧ್ಯಮ ವರ್ಗದ ಅಷ್ಟೇನೂ ವಿಶಾಲವಲ್ಲದ ಫ್ಲಾಟ್‍ಗಳಲ್ಲಿ ಸಹ ಮನೆಯ ಸಾಮಾನುಗಳನ್ನು ಬುದ್ದಿವಂತಿಕೆಯಿಂದ ಜೋಡಿಸುವ ಮೂಲಕ ವಿಶಾಲವಾಗಿ ಕಾಣುವಂತೆ ಮಾಡಬಹುದು.

ಮೊದಲನೆದಾಗಿ ಸಾಮಾನುಗಳನ್ನು ಜೋಡಿಸುವುದು ಅತ್ಯಂತ ಮುಖ್ಯವಾದ ಕೆಲಸ ಇರುವ ಜಾಗದಲ್ಲಿ ಅತ್ಯಂತ ಚಾಣಾಕ್ಷತನದಿಂದ ಸಾಮಾನುಗಳನ್ನು ಕ್ಯಾಸೆಟ್‍ಗಳಲ್ಲಿ (ಮರದ ಬೀರು) ಅಥವಾ ಸ್ಲೀಕ್ ಕ್ಯಾಬಿನೆಟ್‍ಗಳ ಹಿಂದೆ ಜೋಡಿಸುವುದರಿಂದ ಫ್ಲಾಟ್‍ನ ಒಳಭಾಗ ವಿಶಾಲವಾಗಿರುತ್ತದೆ. ಬೇಡವಾದ ಸಾಮಾನುಗಳನ್ನು ಸಜ್ಜಾದ ಮೇಲಿರುವ ಲಾಪ್ಪಗಳಲ್ಲಿ ಜೋಡಿಸಿರುವುದರಿಂದ ಆದಷ್ಟು ಹಾಲ್‍ನ್ನು ವಿಶಾಲವಾಗಿ ಕಾಣುವಂತೆಯೂ ಹಾಗೂ ಗಲೀಜು ಮುಕ್ತವಾಗಿರುಸುತ್ತದೆ.

Slik cabinet

ಹಾಲ್‍ಗಳಲ್ಲಿ (ಹಜಾರದಲ್ಲಿ) ಪಿಠೋಪರಣಗಳನ್ನು ಖರೀದಿಸುವಾಗ ಬಹುಪಯೋಗಿ ವಿಶೇಷ ಪಿಠೋಪಕರಣಗಳನ್ನು ಆಯ್ಕೆ ಮಾಡಿ. ಈಗ ಮಡಿಸಬಹುದಾದ ಪಿಠೋಪಕರಣಗಳು ಲಭ್ಯವಿದ್ದು ದಿನವೆಲ್ಲ ಸೋಪಾದ ಹಾಗೆ ಉಪಯೋಗಿಸಬಹುದು ರಾತ್ರಿ ಬೇಕಾದರೆ ಹಾಸಿಗೆಯ ಹಾಗೂ ಬಿಡಿಸಿ ಮಲಗಬಹುದು. ಪೆಟ್ಟಿಗೆಯಾಕಾರದ ದಿವಾನ್ ಮಂಚಗಳನ್ನು ಉಪಯೋಗಿಸುವುದರಿಂದ ಇದರಲ್ಲಿ ಅನೇಕ ಸಾಮಾನುಗಳನ್ನು ಇಡಬಹುದು. ಹಾಲ್‍ನಲ್ಲಿ ಆದಷ್ಟೂ ಸೋಪಾ ಕುರ್ಚಿಯನ್ನು ಹೊರತುಪಡಿಸಿ ಬೇರೆ ಎನನ್ನು ಎಡಬೇಡಿ. ಕುರ್ಚಿಗಶು ಬೇಕೇಂದಲ್ಲಿ ಮಡಚುವ ಕುರ್ಚಿಗಳನ್ನು ಉಪಯೋಗಿಸುವುದರಿಂದ ಹಾಲ್‍ನಲ್ಲಿ ಸಾಮಾನುಗಳು ಕಡಿಮೆ ಎನಿಸುತ್ತವೆ. ದಿನಪತ್ರಿಕೆಗಳನ್ನು ಇದರೊಳಗೆ ಇಡಬಹುದು.

furniture-to-small-spaces

ಇನ್ನು ರೂಂನಲ್ಲೂ ಸಹ ಪೆಟ್ಟಿಗೆಯಾಕಾರದ ಮಂಚವನ್ನು ಉಪಯೋಗಿಸಿ. ಈ ಬಾಕ್ಸ್ ನಲ್ಲಿ ಹಾಸಿಗೆ ದಿಂಬು ಹಾಸಿಗೆ ಬೆಡ್‍ಶೀಟ್‍ಗಳನ್ನು ಒಪ್ಪವಾಗಿ ಜೋಡಿಸುವುದರಿಂದ ಇವುಗಳನ್ನು ಹೊರಗಡೆ ಇಡುವ ಅವಶ್ಯಕತೆ ಇರುವುದಿಲ್ಲ. ಹಾಗೆ ಬೆಡ್‍ರೂಮ್ ಅಂದವಾಗಿ ಕಾಣುತ್ತದೆ. ಬೇಡದ ವಸ್ತುಗಳನ್ನು ಈ ಮಂಚದ ಪೆಟ್ಟಿಗೆಯೊಳಗೆ ಇಡುವುದರಿಂದ ಬೆಡ್ ರೂಂ ವಿಶಾಲವಾಗಿ ಕಾಣುತ್ತದೆ. ಇದರೊಳಗೆ ಏಷ್ತು ಬೇಕಾದರೂ ಬಟ್ಟೆಗಳನ್ನು ಮಡಿಚಿಡಬಹುದು. ಹೀಗೆ ಬಟ್ಟೆಗಳನ್ನು ದಿಂಬು, ಬೆಡಶೀಟ್‍ಹೊದಿಕೆಗಳನ್ನು ಇಡುವಾಗ ನುಸಿಗುಳಿಗೆ (ನೆಪ್ತಲಿನ್ ಬಾಲ್ಸ್) ಹಾಕುವುದನ್ನು ಮರೆಯಬೇಡಿರಿ.

fold-down-bed-small-space

ಇನ್ನು ಅಪಾರ್ಟ್‍ಮೆಂಟ್‍ಗಳಲ್ಲಿರುವ ಮೊಗಸಾಲೆ(ಬಾಲ್ಕನಿ)ಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳಬಹುದು. ಸಾಮಾನ್ಯವಾಗಿ ಅಪರ್ಟ್‍ಮೆಂಟ್‍ಗಳ ಪ್ರತಿಯೊಂದು ಫ್ಲಾಟ್‍ಗೂ 2 ಬಾಲ್ಕನಿಗಳಿರುತ್ತದೆ. ಒಂದು ಬಾಲ್ಕನಿಯಲ್ಲಿ ಸಣ್ಣ ಖುರ್ಚಿ ಟೀಪಾಯ್‍ಯನ್ನು ಹಾಕಿಕೊಂಡು ಟೀ, ಕಾಫಿ ಕುಡಿಯಲು ಕುಳಿತುಕೊಳ್ಳಲು ಉಪಯೋಗಿಸಬಹುದು. ಇನ್ನೊಂದು ಬಾಲ್ಕನಿಯಲ್ಲಿ ವಾಷಿಂಗ್ ಮಷೀನ್‍ನ್ನು ಇಟ್ಟುಕೊಳ್ಳಬಹುದು. ಜೊತೆಗೆ ಗ್ಯಾಸ್ ಸಿಲೆಂಡರ್, ತಟ್ಟೆ ಸ್ಟ್ಯಾಂಡ್ ಮುಂತಾದವನ್ನು ಇಲ್ಲಿ ಹಾಕಿಕೊಂಡರೆ ಅಡುಗೆ ಮನೆಯೂ ವಿಶಾಲವಾಗಿರುತ್ತದೆ.

usage_balconies

ಫ್ಲಾಟ್‍ನ ಒಳಾಂಗಣ ಗೊಡೆಗೆ ಬಣ್ಣ ಹೊಡೆಸುವಾಗ ಆಯ್ಕೆ ಸೂಕ್ತವಾಗಿರಲಿ, ಸೂಕ್ತ ಬಣ್ಣದ ಆಯ್ಕೆಯಿಂದ ಒಳಾಂಗಣ ವಿಶಾಲವಾಗಿ ಕಾಣುವಂತೆ ಮಾಡಬಹುದು. ಅತಿ ತೆಳು ಬಣ್ಣವನ್ನೂ ಗೋಡೆಗೆ ಹೊಡೆಸುವುದರಿಂದ ಒಳಾಂಗಣ ವಿಶಾಲವಾಗಿ ಕಾಣುತ್ತದೆ. ಹಾಗೂ ರೂಂಗಳು ಬ್ರೈಟ್ ಆಗೂ ಕಾಣುತ್ತದೆ ತೆಳು ಹಳದಿ ಬಣ್ಣ ಅಥವಾ ತೆಳು ಬಾದಾಮಿ ಬಣ್ಣಗಳು ಹಾಲ್‍ಗೆ ಸೂಕ್ತ ತೆಳು ಬಣ್ಣದ ಗೋಡೆಯ ಮೇಲೆ ಗಾಢ ಬಣ್ಣದ ಪ್ರಕೃತಿ ಚಿತ್ರವನ್ನು ಹಾಕುವುದರಿಂದ ರೂಂ ಆಕರ್ಷಿಣೀಯವಾಗಿ ಕಾಣುತ್ತದೆ.

traditional-hall

ಜಾರುವ ಬಾಗಿಲುಗಳ ಬಳಕೆ – ಮನೆಯ ಮುಖ್ಯದ್ವಾರವನ್ನು ಬಿಟ್ಟು ರೂಂಗಳಿಗೆ ಹಾಗೂ ಅಡುಗೆ ರೂಂಗೆ ಜಾರುವ (sliding doors) ಗಳನ್ನು ಉಪಯೋಗಿಸುವುದು ಒಳ್ಳೆಯದು. ಸಾಮಾನ್ಯ ಬಾಗಿಲುಗಳನ್ನು ಹಾಕುವಾಗ ತೆಗೆಯುವಾಗ ಅದು ಬಹಳ ಸ್ಥಳವನ್ನು ಆಕ್ರಮಿಸುತ್ತದೆ. ಸ್ಲೈಡಿಂಗ್ ಬಾಗಿಲುಗಳು ಸ್ಥಳ ಉಳಿಸುವುದಲ್ಲದೆ ಗ್ಲಾಸ್ ಹಾಗೂ ಆಕರ್ಷಣೀಯವಾಗಿ ಕಾಣುವ ಇವು ರೂಮಿನ ಅಂದವನ್ನು ಹೆಚ್ಚಿಸುತ್ತದೆ.

Patio_Door_4

ಮಕ್ಕಳ ಕೋಣೆಯಲ್ಲಿ ಮಡಿಚಬಹುದಾದ ಮಂಚ ಅಥವಾ ಬಂಕ್‍ರಬೆಡ್‍ಗಳನ್ನು ಉಪಯೋಗಿಸಬಹುದು. (ಒಂದರ ಮೇಲೊಂದಿರುವ ಮಂಚ) ಇದರಿಂದ 2 ಮಂಚ ಹಾಕುವುದು ಉಳಿಯುತ್ತದೆ. ಇತ್ತೀಚೆಗೆ ಈ ಮಂಚಕ್ಕೆ ಹೊಂದಿಕೊಂಡ ಮಡಿಚಬಹುದಾದ ಸ್ಟಡಿ ಟೇಬಲ್‍ಗಳು ಇದ್ದು ಇದು ಜಾಗವನ್ನು ಉಳಿಸಲು ಅನುಕೂಲವಾಗಿದೆ.

images

ಇನ್ನು ಅಡುಗೆ ಮನೆಯಲ್ಲೇ ಅತಿ ಹೆಚ್ಚಿನ ವಸ್ತುಗಳಿರುತ್ತವೆ. ಹಾಗಾಗಿ ಅಡುಗೆ ಮನೆಯ ಮೂಲೆಗಳಲ್ಲಿ ಮೂಲೆ ಸ್ಟ್ಯಾಂಡ್ (ಕಾರ್ನರ್ ಸ್ಟ್ಯಾಂಡ್) ಗಳನ್ನು ಉಪಯೋಗಿಸುವುದರಿಂದ ಅಡುಗೆ ಮನೆಯನ್ನು ವಿಶಾಲವಾಗಿ ಕಾಣುವಂತೆ ಮಾಡಬಹುದು. ಸಾಧಾರಣವಾಗಿ ಅಪಾರ್ಟ್‍ಮೆಂಟ್‍ಗಳಲ್ಲಿ ಬಾಲ್ಕನಿ ಅಡುಗೆ ಮನೆಗೆ ಹೊಂದಿಕೊಂಡಂತೆ ಇರುತ್ತದೆ. ಇಲ್ಲಿ ಸಿಲಿಂಡರ್ ಮುಂತಾದ ವಸ್ತುಗಳನ್ನು ಇಡಬಹುದು.

i-2495

ಇತ್ತಿಚೆಗೆ ಮಾರುಕಟ್ಟೆಯಲ್ಲಿ ಅನೇಕ ಮಡಚಬಹುದಾದ ವಸ್ತುಗಳು ಲಭ್ಯವಿದ್ದು ಇಂಥಹುಗಳನ್ನು ಉಪಯೋಗಿಸುವುದರಿಂದ ಅವಶ್ಯಕತೆ ಇಲ್ಲದಾಗ ಇವನ್ನು ಮಡಿಚಿಡಬಹುದು. ಇದರಿಂದ ರೂಂ ಹಾಲ್ ವಿಶಾಲವಾಗಿ ಕಾಣುವಂತೆ ಮಾಡಬಹುದು. ಹೀಗೆ ಯೋಚಿಸುತ್ತಾ ಹೊದರೆ ನಿಮಗೆ ಸ್ಥಳ ನಿರ್ವಹಣೆಯ ಬಗ್ಗೆ ನಿಮಗೆ ಇನ್ನೂ ಆಲೋಚನೆಗಳು ಬರಬಹುದು.

ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ