ಸಿಎಂ ಸಿದ್ದು ಸರ್ಕಾರದಿಂದ ಮತ್ತೊಂದು ಅನ್ಯಾಯ ಜಿಎಸ್‍ಟಿ ವಿಚಾರದಲ್ಲಿ ಮಹಾ ಮೋಸ..!

0
716

ಹೌದು ನಮ್ಮ ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ತುಂಬಾನೇ ಎಡವಟುಗಳನ್ನು ಮಾಡಿಕೊಳ್ಳುತ್ತಿದೆ. ಜನಸಾಮಾನ್ಯರಿಗೊಂದು ನ್ಯಾಯ ಮತ್ತು ಹಣ ಇದ್ದವರಿಗೆ ಒಂದು ನ್ಯಾಯವಂತೆ ನಡೆದುಕೊಳ್ಳುತ್ತಿದೆ ಅದಕ್ಕೆ ಮತ್ತೊಂದು ಹೊಸ ಮೋಸ ಸೇರಿಕೊಂಡಿದ್ದೆ ನೋಡಿ.

ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಜನಸಾಮಾನ್ಯರಿಗೊಂದು ನ್ಯಾಯ. ಉಳ್ಳವರಿಗೊಂದು ನ್ಯಾಯ ಎನ್ನುವುದು ಮತ್ತೆ ಸಾಬೀತಾಗಿದೆ. ಕೋಟಿ ಕೋಟಿ ವ್ಯವಹಾರ ಮಾಡುವ ರಾಜ್ಯದ ಸರ್ಕಾರಿ ಯೋಜನೆಗಳ ಗುತ್ತಿಗೆದಾರರಿಗೆ ಜಿಎಸ್‍ಟಿ ಹೇರದಂತೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ಮೊದಲು ಶೇ.10ರಷ್ಟು ಮಾತ್ರ ತೆರಿಗೆ ಇತ್ತು. ಜಿಎಸ್‍ಟಿ ಹೇರಿದ್ರೆ ಶೇ.18ರಷ್ಟು ಕಟ್ಟಬೇಕು, ಹಾಗಾಗಿ ನಮಗೆ ನಷ್ಟವಾಗುತ್ತದೆ. ಗುತ್ತಿಗೆ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಎಂದು ಗುತ್ತಿಗೆದಾರರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.

ಇಅದಕ್ಕೆ ಸಂಬಂಧಿಸಿದಂತೆ ಪಿಡಬ್ಲೂಡಿ, ಬಿಬಿಎಂಪಿ, ಗುತ್ತಿಗೆದಾರ ಮನವಿಗೆ ತಲೆಬಾಗಿದ ಸಿಎಂ ವಾಣಿಜ್ಯ ತೆರಿಗೆ ಇಲಾಖೆಗೆ ಜಿಎಸ್‍ಟಿ ತೆಗೆಯುವಂತೆ ಆದೇಶಿಸಿದ್ದಾರೆ. ಸಿಎಂ ಆಣತಿಯಂತೆ ಮುಂದಿನ ಆದೇಶ ಬರುವ ತನಕ ಗುತ್ತಿಗೆದಾರರಿಗೆ ಜಿಎಸ್‍ಟಿ ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ವಾಣಿಜ್ಯ ಇಲಾಖೆ ಕೂಡ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಟಿಕೆ ಮತ್ತು ಆಕ್ರೋಶ ಹೆಚ್ಚಾಗಿದೆ.